More

    ಮಲಬದ್ಧತೆ ಮತ್ತು ಪೈಲ್ಸ್​ ನಿಯಂತ್ರಣಕ್ಕೆ ಸಹಕಾರಿ, ಈ ಸರಳ ಯೋಗಾಸನ!

    ಮಲಬದ್ಧತೆ, ಪೈಲ್ಸ್​ ಸಮಸ್ಯೆಗಳು ಮತ್ತು ಮಹಿಳೆಯರ ಮುಟ್ಟಿನ ಸಮಯದ ತೊಂದರೆಗಳನ್ನು ನಿವಾರಿಸುವ ಯೋಗಾಸನವೆಂದರೆ ‘ಮಾಲಾಸನ’. ಮಾಲಾ ಎಂದರೆ ಹೂವಿನ ಹಾರ. ತೋಳುಗಳು ಕುತ್ತಿಗೆಯ ಹಿಂಭಾಗಕ್ಕೆ ಹೂವಿನ ಹಾರದಂತೆ ನೇತಾಡುವುದರಿಂದ ಈ ಆಸನಕ್ಕೆ ಮಾಲಾಸನ ಎಂಬ ಹೆಸರು ಬಂದಿದೆ.

    ಪ್ರಯೋಜನಗಳು: ಮಾಲಾಸನದ ಅಭ್ಯಾಸದಿಂದ ಕಿಬ್ಬೊಟ್ಟೆಯ ಅಂಗಗಳಿಗೆ ಒಳ್ಳೆಯ ವ್ಯಾಯಾಮವಾಗುತ್ತದೆ. ಮಲಬದ್ಧತೆ ಮತ್ತು ಪೈಲ್ಸ್​ ಸಮಸ್ಯೆಗಳ ನಿಯಂತ್ರಣಕ್ಕೂ ಸಹಕಾರಿ. ಬೆನ್ನಿನ ಸ್ನಾಯುಗಳು ಬಲಗೊಳ್ಳುತ್ತವೆ. ವಿಶೇಷವಾಗಿ, ಮಹಿಳೆಯರ ಮುಟ್ಟಿನ ದೋಷ ನಿವಾರಣೆಗೆ ಸಹಕಾರಿ.

    ಇದನ್ನೂ ಓದಿ: ಗುಜರಾತ್​: ನೂತನ ಸಿಎಂ ಭೂಪೇಂದ್ರ ಪಟೇಲ್​ ಸಂಪುಟಕ್ಕೆ 24 ಸಚಿವರು

    ಅಭ್ಯಾಸ ಕ್ರಮ: ಜಮಖಾನ ಹಾಸಿದ ನೆಲದ ಮೇಲೆ ಪಾದಗಳನ್ನು ನೆಲಕ್ಕೆ ಒತ್ತಿ ಕುಕ್ಕರುಗಾಲಿನ ಭಂಗಿಯಲ್ಲಿ ಕುಳಿತುಕೊಳ್ಳುವುದು. ಎರಡೂ ಕೈಗಳನ್ನೂ ಮುಂದಕ್ಕೆ ಒತ್ತಿ, ಎದೆಯನ್ನು ಕಾಲುಗಳ ನಡುವಿಂದ ಮುಂದಕ್ಕೆ ತರಬೇಕು. ನಂತರ ಕೈಗಳನ್ನು ಕಾಲುಗಳಿಗೆ ಬಳಸಿ ಬೆನ್ನಿನ ಹಿಂದಕ್ಕೆ ತಂದು, ಬೆರಳುಗಳನ್ನು ಹಿಡಿದುಕೊಳ್ಳಬೇಕು. ಒಮ್ಮೆ ಉಸಿರನ್ನು ತೆಗೆದುಕೊಂಡು ಉಸಿರನ್ನು ಬಿಟ್ಟು ದೇಹವನ್ನು ಮುಂದಕ್ಕೆ ಬಾಗಿಸಬೇಕು. ನಂತರ ಉಸಿರನ್ನು ತೆಗೆದುಕೊಳ್ಳುತ್ತಾ ದೇಹವನ್ನು ಮೇಲಕ್ಕೆತ್ತಬೇಕು. ನಂತರ ಕಾಲುಗಳನ್ನು ಚಾಚಿಕೊಂಡು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬೇಕು.

    ಮಾಲಾಸನವನ್ನು ಇನ್ನೂ ಬೇರೆ ಬೇರೆ ರೀತಿಯಲ್ಲಿ ಅಭ್ಯಾಸ ಮಾಡಲಾಗುತ್ತದೆ. ತೀರಾ ಸೊಂಟ ನೋವು, ಬೆನ್ನು ನೋವು ಅಥವಾ ಮಂಡಿ ನೋವು ಇರುವವರು, ಮತ್ತು ಬಿಪಿ ಇರುವವರು ಈ ಆಸನವನ್ನು ಅಭ್ಯಾಸ ಮಾಡುವುದು ಸೂಕ್ತವಲ್ಲ.

    ಖಾಸಗಿ ಶಾಲಾ ಶುಲ್ಕದಲ್ಲಿ ಶೇ.15 ವಿನಾಯಿತಿ ನೀಡಲು ಹೈಕೋರ್ಟ್​ ಆದೇಶ

    ದೇಹದ ಸಮತೋಲನ, ಏಕಾಗ್ರತೆ ಹೆಚ್ಚಿಸುವ ಊರ್ಧ್ವ ಕುಕ್ಕುಟಾಸನ; ಇದೊಂದು ಚ್ಯಾಲೆಂಜಿಂಗ್ ಪೋಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts