More

    ಹತ್ತು ವರ್ಷಗಳಿಗೂ ಅಧಿಕ ಕಾಲ ಒಂದಾದ ಮೇಲೊಂದು ಹೆರಿಗೆ; 28ನೇ ವಯಸ್ಸಿನಲ್ಲೇ 9 ಮಕ್ಕಳ ಮಹಾತಾಯಿ!

    ನವದೆಹಲಿ: ಮಕ್ಕಳು ಕಡಿಮೆ ಇರಲಿ ಎಂದು ಕುಟುಂಬ ಯೋಜನೆಗೆ ಮೊರೆ ಹೋಗುವವರು ಅನೇಕರಿದ್ದಾರೆ. ಆದರೆ ಇಲ್ಲೊಬ್ಬಳು ಹತ್ತು ವರ್ಷಗಳಿಗೂ ಅಧಿಕ ಕಾಲ ಒಂದಾದ ಮೇಲೊಂದರಂತೆ ಮಕ್ಕಳಿಗೆ ಜನ್ಮ ನೀಡಿದ್ದು, 28ನೇ ವಯಸ್ಸಿನಲ್ಲಿ 9 ಮಕ್ಕಳನ್ನು ಹೊಂದುವ ಮೂಲಕ ಒಂದರ್ಥದಲ್ಲಿ ಮಹಾತಾಯಿ ಎನಿಸಿಕೊಂಡಿದ್ದಾಳೆ.

    ಲಾಸ್​ ವೇಗಾಸ್​ನ ಕೋರ ಡ್ಯೂಕ್ ಎಂಬಾಕೆಯೇ ಈ ಮಹಾತಾಯಿ. ಈಕೆ ಆ್ಯಂಡ್ರೆ ಡ್ಯೂಕ್ ಎಂಬಾತನ ಪತ್ನಿ. ಇಬ್ಬರದ್ದೂ ಇದೀಗ 23 ವರ್ಷಗಳ ದಾಂಪತ್ಯ. ಅಂದಹಾಗೆ ಕೋರ ಡ್ಯೂಕ್​ಳ ಚೊಚ್ಚಲ ಹೆರಿಗೆ ಆಗಿದ್ದು 2001ರಲ್ಲಿ, ಆಗ ಈಕೆಗೆ ಬರೀ 17 ವರ್ಷ. ಅದಾದ ಬಳಿಕ ಈಕೆಗೆ ನಿರಂತರ ಹೆರಿಗೆ ಆಗಿದೆ. ಈಕೆಯ ಕೊನೆಯ ಮಗು ಜನಿಸಿದ್ದು 2012ರಲ್ಲಿ, ಅಂದರೆ 28ನೇ ವರ್ಷದಲ್ಲಿ ಈಕೆ 9 ಮಕ್ಕಳ ತಾಯಿ.

    ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ಸದ್ಯ 39 ವರ್ಷದ ಕೋರ ಲಾಸ್ ವೇಗಸ್​ನಲ್ಲೇ ನೆಲೆಸಿದ್ದು, ಈಕೆಯ ಕುರಿತು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ಸುದ್ದಿಯನ್ನು ಪ್ರಕಟಿಸಿದ್ದರಿಂದ ಈಕೆ ಮತ್ತೊಮ್ಮೆ ಎಲ್ಲರ ಗಮನ ಸೆಳೆಯಲಾರಂಭಿಸಿದ್ದಾಳೆ.

    ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿರುವಾಗಲೇ ಹೃದಯಾಘಾತ; ನರ್ತಿಸುತ್ತಿರುವಾಗ ಕುಸಿದು ಬಿದ್ದು ಸಾವಿಗೀಡಾದ ಮಹಿಳೆ

    ಕೋರ ಮತ್ತು ಆ್ಯಂಡ್ರೆ ಹೈಸ್ಕೂಲ್​ ಹಂತದಲ್ಲೇ ಗೆಳೆಯರಾಗಿದ್ದು, ನಾಟಕದ ತರಗತಿಗಳಲ್ಲಿ ಆಗಾಗ ಭೇಟಿಯಾಗುತ್ತಿದ್ದರು. ತಾಯ್ತನ ನನಗೆ ಸಹಜವಾಗಿಯೇ ಬಂದಿದ್ದರೂ ನನಗೆ ಹಲವಾರು ಸಮಸ್ಯೆಗಳು ಎದುರಾಗಿದ್ದು, ಪತಿಯ ಸಹಾಯದಿಂದ ಅವೆಲ್ಲವನ್ನೂ ಜೊತೆಯಾಗಿ ಎದುರಿಸಿದೆ ಎಂದು ಹೇಳಿಕೊಂಡಿದ್ದಾಳೆ. 9ನೇ ಮಗುವಿನ ಜನನದ ಬಳಿಕ ಮತ್ತೆ ಮಕ್ಕಳನ್ನು ಹೊಂದಲು ಇಷ್ಟವಿರದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿಯೂ ಕೋರ ತಿಳಿಸಿದ್ದಾಳೆ. ದುರಂತವೆಂದರೆ, ಈ ದಂಪತಿಗೆ 2004ರಲ್ಲಿ ಜನಿಸಿದ್ದ ಮಗಳು ಯೂನಾ ಸಾವಿಗೀಡಾದಳು. ಹುಟ್ಟಿದ ಒಂದು ವಾರದ ಬಳಿಕ ಈ ಮಗು ಸಡನ್​ ಇನ್​ಫ್ಯಾಂಟ್​ ಡೆತ್ ಸಿಂಡ್ರೋಮ್​ನಿಂದ ಸಾವಿಗೀಡಾಗಿತ್ತು.

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts