More

    ‘ಶೋಲೆ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಈ ನಟ, ಈಗ ಒಂದು ಚಿತ್ರಕ್ಕೆ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ!

    ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಅನೇಕ ನಟ-ನಟಿಯರು ಜೂನಿಯರ್​ ಕಲಾವಿದರಾಗಿ, ಸಹಾಯಕ ನಿರ್ದೇಶಕರಾಗಿ, ಲೈಟ್​​ ಬಾಯ್​, ಅಸಿಸ್ಟೆಂಟ್​ ಕ್ಯಾಮರಾಮನ್​ ಆಗಿ ಪ್ರಾರಂಭದ ದಿನಗಳನ್ನು ಕಳೆದು, ಇಂದು ದೊಡ್ಡ ಸ್ಟಾರ್​ ನಟರಾಗಿ ಹೊರಹೊಮ್ಮಿದ್ದಾರೆ. ಆ ಸಾಲಿನಲ್ಲಿ ದಕ್ಷಿಣ ಭಾರತದ ಅಪ್ರತಿಮ ಕಲಾವಿದ ಕಮಲ್​ ಹಾಸನ್​​ ಕೂಡ ಇದ್ದಾರೆ ಎಂಬುದು ಇದೀಗ ಹಲವರಿಗೆ ತಿಳಿಯದ ಅಚ್ಚರಿ ಸಂಗತಿ!

    ಇದನ್ನೂ ಓದಿ: ಮಣಿಪುರದಲ್ಲಿ ಬೆತ್ತಲೆ ಮೆರವಣಿಗೆ ಪ್ರಕರಣ: ಪ್ರಮುಖ ಆರೋಪಿಯ ಮನೆಗೆ ಬೆಂಕಿಯಿಟ್ಟ ಮಹಿಳೆಯರು

    ಬಾಲಿವುಡ್​ ಚಿತ್ರರಂಗದ ದಿಗ್ಗಜ, ನಟ ಅಮಿತಾಬ್​ ಬಚ್ಚನ್ ಅವರ ಸೂಪರ್ ಹಿಟ್​ ‘ಶೋಲೆ’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕಮಲ್ ಹಾಸನ್​ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ತಾವು ಅಭಿನಯದ ಪ್ರತಿಯೊಂದು ಸಿನಿಮಾದಲ್ಲೂ ಅದ್ಬುತವಾಗಿ ನಟಿಸುವ ಮೂಲಕ ಇಂದು ಟಾಲಿವುಡ್​​ನ ಸ್ಟಾರ್​ ನಟರಾಗಿ ಗುರುತಿಸಿಕೊಂಡಿದ್ದಾರೆ.

    ಇಂದು ಕಮಲ್​ ಅವರು ಒಂದು ಚಿತ್ರದಲ್ಲಿ ನಟಿಸಲು ಬರೋಬ್ಬರಿ 100 ಕೋಟಿ ರೂ.ಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬ ವಿಷಯ ಅದೆಷ್ಟೋ ಅಭಿಮಾನಿಗಳಿಗೆ ಮತ್ತು ಚಿತ್ರಪ್ರೀಯರಿಗೆ ಇಂದಿಗೂ ತಿಳಿದಿರಲಿಲ್ಲ. ಇತ್ತೀಚೆಗೆ ಸ್ಯಾನ್​ ಡಿಯಾಗೋ ಕಾಮಿಕ್​-ಕಾನ್ ನಡೆದ ಪ್ರಭಾಸ್​ ನಟನೆಯ ‘ಕಲ್ಕಿ 2898 AD’ ಚಿತ್ರದ ​ಕಾರ್ಯಕ್ರಮದಲ್ಲಿ ಅಮಿತಾಬ್​ ಬಚ್ಚನ್​ ಅವರೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಮಲ್​ ಹಾಸನ್​, ತಾವು ಶೋಲೆ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದನ್ನು ಎಲ್ಲರ ಸಮ್ಮುಖದಲ್ಲಿ ಬಹಿರಂಗಪಡಿಸಿದರು.

    ಇದನ್ನೂ ಓದಿ: ಪಿಎಚ್‌ಡಿ ಪದವಿ ಪಡೆದ ದಿನಗೂಲಿ ಮಾಡುವ ಮಹಿಳೆ; ಇವರ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಬಹುದು…

    ತಮ್ಮ ಆರಂಭ ದಿನಗಳನ್ನು ನೆನಪಿಸಿಕೊಂಡ ನಟ ಕಮಲ್ ಹಾಸನ್​, ಅಮಿತಾಬ್​ ಬಚ್ಚನ್​ ಅವರು ತಮ್ಮ ಸಿನಿಮಾಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರ ಬಗ್ಗೆ ಸಂತಸದಿಂದ ಹೇಳಿಕೊಂಡರು. ಈ ವಿಷಯ ತಿಳಿದ ಬಳಿಕ ಕಮಲ್​ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ನಿಮ್ಮ ಮುಂದಿನ ಚಿತ್ರಗಳಿಗೆ ಶುಭವಾಗಲಿ ಎಂದು ಹರಸಿದ್ದಾರೆ, (ಏಜೆನ್ಸೀಸ್).

    ಪಿಎಚ್‌ಡಿ ಪದವಿ ಪಡೆದ ದಿನಗೂಲಿ ಮಾಡುವ ಮಹಿಳೆ; ಇವರ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಬಹುದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts