More

    ಫೆ. 3ರಂದು ನಿರ್ಧಾರವಾಗಲಿದೆ ಈ ಸ್ಟಾಕ್ ಹಣೆಬರಹ: ರೂ. 500ರಿಂದ 28ಕ್ಕೆ ಕುಸಿದ ಅಂಬಾನಿ ಕಂಪನಿ ಷೇರಿಗೆ ಕಳೆದೊಂದು ತಿಂಗಳಲ್ಲಿ ಸಾಕಷ್ಟು ಬೇಡಿಕೆ

    ಮುಂಬೈ: ಮಧ್ಯಂತರ ಬಜೆಟ್ ನಂತರ ಹೂಡಿಕೆದಾರರು ಹೆಚ್ಚಾಗಿ ವಿದ್ಯುತ್ ಮತ್ತು ಇಂಧನ ಕಂಪನಿಯ ಷೇರುಗಳ ಮೇಲೆ ಬೆಟ್ಟಿಂಗ್ ಮಾಡುತ್ತಾರೆ. ಈ ಹಿಂದೆ ಒತ್ತಡ ಅನುಭವಿಸಿದ್ದ ಕೆಲ ವಿದ್ಯುತ್ ಕಂಪನಿಯ ಷೇರುಗಳಿಗೂ ಈಗ ಬೇಡಿಕೆ ಬರುತ್ತಿದೆ. ಇಂತಹ ಒಂದು ಷೇರು ಅನಿಲ್ ಅಂಬಾನಿಯವರ ಕಂಪನಿ ರಿಲಯನ್ಸ್ ಪವರ್ (Reliance Power) ಆಗಿದೆ. ಅನಿಲ್ ಅಂಬಾನಿಯವರ ಬಹುತೇಕ ರಿಲಯನ್ಸ್ ಗ್ರೂಪ್ ಕಂಪನಿಗಳ ಷೇರುಗಳು ಪೆನ್ನಿ ಸ್ಟಾಕ್ (ಕಡಿಮೆ ಬೆಲೆಯ ಷೇರು) ವರ್ಗದಲ್ಲಿದೆ. ಇದರಲ್ಲಿ ರಿಲಯನ್ಸ್ ಪವರ್ ಕೂಡ ಸೇರಿದೆ.

    ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ಈ ಷೇರಿ ಬೆಲೆ ಶೇ.0.69ರಷ್ಟು ಕುಸಿದು 28.80 ರೂಪಾಯಿ ತಲುಪಿದ. ಇಂಟ್ರಾ ಡೇ ವಹಿವಾಟಿನ ಸಂದರ್ಭದಲ್ಲಿ ಷೇರಿನ ಕನಿಷ್ಠ ಮಟ್ಟ 28.42 ರೂ. ಮತ್ತು
    ಗರಿಷ್ಠ ಮಟ್ಟ 29.60 ರೂಪಾಯಿ ಆಗಿತ್ತು.

    ಜನವರಿ 8ರಂದು ಈ ಷೇರಿನ ಬೆಲೆ 33.10 ರೂ.ಗೆ ತಲುಪಿತ್ತು. ಇದು 52 ವಾರಗಳ ಗರಿಷ್ಠ ಬೆಲೆ ಮಟ್ಟವೂ ಆಗಿದೆ. 2023ರ ಮಾರ್ಚ್​ 28ರಂದು ಈ ಷೇರಿನ ಬೆಲೆ 9.05 ರೂ. ಇತ್ತು. ಇದು ಈ ಷೇರಿನ 52 ವಾರಗಳ ಕನಿಷ್ಠ ಬೆಲೆ ಮಟ್ಟವಾಗಿದೆ.

    ಒಂದು ಕಾಲದಲ್ಲಿ ಈ ಕಂಪನಿಯ ಷೇರು ಗರಿಷ್ಠ ಬೆಲೆ 499.74 ರೂಪಾಯಿ ತಲುಪಿದ್ದು ಈಗ 28 ರೂಪಾಯಿ ಆಸುಪಾಸಿನಲ್ಲಿದ್ದು ಪೆನ್ನಿ ಸ್ಟಾಕ್​ ಆಗಿ ಪರಿಣಮಿಸಿದೆ. ಆದರೂ ಈ ಕಂಪನಿಯ ಷೇರು ಕಳೆದೊಂದು ತಿಂಗಳಲ್ಲಿ 19.50% ಏರಿಕೆಯಾಗಿದೆ. ಮೂರು ತಿಂಗಳಲ್ಲಿ 57.81% ಹೆಚ್ಚಳ ಕಂಡಿದೆ. ಒಂದು ವರ್ಷದಲ್ಲಿ 141.00% ಹಾಗೂ 3 ವರ್ಷದಲ್ಲಿ 786.15% ಏರಿಕೆ ದಾಖಲಿಸಿದೆ.

    ಫೆಬ್ರವರಿ 3ರಂದು ಸಭೆ:

    ರಿಲಯನ್ಸ್ ಪವರ್‌ಗೆ ಫೆ. 3 ಮಹತ್ವದ ದಿನವಾಗಿದೆ. ವಾಸ್ತವವಾಗಿ, ರಿಲಯನ್ಸ್ ಪವರ್ ಲಿಮಿಟೆಡ್ ಕಂಪನಿಯ ನಿರ್ದೇಶಕರ ಮಂಡಳಿಯು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ಗೆ ಈ ಸಭೆ ಕುರಿತು ತಿಳಿಸಿದೆ.

    ಡಿಸೆಂಬರ್ 2023ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದ ಫಲಿತಾಂಶಗಳನ್ನು ಈ ಸಭೆಯಲ್ಲಿ ಪ್ರಕಟಿಸಲಾಗುತ್ತಿದೆ. ಈ ಹಿಂದಿನ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಪವರ್ ನಷ್ಟ 237.76 ಕೋಟಿ ರೂ. ಇತ್ತು. ಇದೇ ತ್ರೈಮಾಸಿಕದಲ್ಲಿ ಆದಾಯ 2130 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಫೆ. 3ರಂದು ಪ್ರಕಟವಾಗುವ ತ್ರೈಮಾಸಿಕ ಫಲಿತಾಂಶಗಳು ಈ ಷೇರಿನ ಹಣೆಬರಹ ನಿರ್ಧರಿಸಲಿವೆ.

    ಈ ಕಂಪನಿಯಲ್ಲಿ ಪ್ರವರ್ತಕರ ಪಾಲು ಶೇಕಡಾ 24.49 ಇದೆ. ಇದರ ಹೊರತಾಗಿ, ಸಾರ್ವಜನಿಕ ಷೇರುಗಳು ಶೇಕಡಾ 75.51 ರಷ್ಟಿದೆ. ಪ್ರವರ್ತಕ ಅನಿಲ್ ಅಂಬಾನಿ ಅವರು ಕಂಪನಿಯ 4,65,792 ಷೇರುಗಳನ್ನು ಹೊಂದಿದ್ದಾರೆ. ರಿಲಯನ್ಸ್ ಗ್ರೂಪ್‌ನ ಕಂಪನಿ ರಿಲಯನ್ಸ್ ಇನ್‌ಫ್ರಾ ಕೂಡ ಪ್ರವರ್ತಕರ ಪಟ್ಟಿಯಲ್ಲಿ ಸೇರಿದೆ.

    ಇದೆ. ರಿಲಯನ್ಸ್ ಇನ್ಫ್ರಾ ಕಂಪನಿಯ 93,01,04,490 ಷೇರುಗಳನ್ನು ಹೊಂದಿದೆ. ಅನಿಲ್ ಅಂಬಾನಿ ಪತ್ನಿ ಟೀನಾ ಅಂಬಾನಿ ಒಟ್ಟು 4,12,708 ಷೇರುಗಳನ್ನು ಹೊಂದಿದ್ದಾರೆ. ಅನಿಲ್ ಅಂಬಾನಿ ಇಬ್ಬರೂ
    ಪುತ್ರರು ಸುಮಾರು 4,17,500 ಷೇರುಗಳನ್ನು ಹೊಂದಿದ್ದಾರೆ.

    ರಿಲಯನ್ಸ್ ಪವರ್ ತನ್ನ ಅಂಗಸಂಸ್ಥೆಗಳೊಂದಿಗೆ ಭಾರತದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಕಂಪನಿ ಕಾರ್ಯಾಚರಣೆಯ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 416 ಗಿಗಾ ವ್ಯಾಟ್​ಆಗಿದೆ. ಈ ಕಂಪನಿಯನ್ನು 1995 ರಲ್ಲಿ ಸ್ಥಾಪಿಸಲಾಯಿತು.

    30,382% ಬೃಹತ್​ ಲಾಭ ನೀಡಿದ ರಿಯಲ್​ ಎಸ್ಟೇಟ್​ ಕಂಪನಿ ಷೇರು: ವಿದೇಶ ಹೂಡಿಕೆದಾರರು 35 ಲಕ್ಷ ಸ್ಟಾಕ್​ ಖರೀದಿಸಿದ್ದರಿಂದ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಷೇರು ಮಾರುಕಟ್ಟೆಯಲ್ಲಿ ಗೂಳಿ ಗುಟುರು: ಇಂಟ್ರಾ ಡೇ ಗರಿಷ್ಠ ಮಟ್ಟ ಮುಟ್ಟಿ ದಾಖಲೆ ಬರೆದ ನಿಫ್ಟಿ

    ಫೆ. 8ರಿಂದ ಸೋಲಾರ್ ಪ್ಯಾನಲ್ ತಯಾರಿಕೆ ಕಂಪನಿಯ ಐಪಿಒ: ಹೂಡಿಕೆದಾರರಿಗೆ ಅದ್ಭುತ ಅವಕಾಶ, ಲಾಭ ಖಚಿತ ಎನ್ನುವುದಕ್ಕೆ ಹೀಗಿವೆ ಕಾರಣಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts