More

    30,382% ಬೃಹತ್​ ಲಾಭ ನೀಡಿದ ರಿಯಲ್​ ಎಸ್ಟೇಟ್​ ಕಂಪನಿ ಷೇರು: ವಿದೇಶ ಹೂಡಿಕೆದಾರರು 35 ಲಕ್ಷ ಸ್ಟಾಕ್​ ಖರೀದಿಸಿದ್ದರಿಂದ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಮುಂಬೈ: ಹಜೂರ್ ಮಲ್ಟಿ ಪ್ರಾಜೆಕ್ಟ್ಸ್ ಲಿಮಿಟೆಡ್​ (Hazoor Multi Projects Ltd.)​ ಕಂಪನಿಯ ಷೇರು ಬೆಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಭಾರಿ ಏರಿಕೆಯಾಗಿದೆ. ಈ ಸ್ಮಾಲ್ ಕ್ಯಾಪ್ ಸ್ಟಾಕ್ ಶುಕ್ರವಾರ ಕೂಡ ಅಪಾರ ಲಾಭದೊಂದಿಗೆ ಇಂಟ್ರಾಡೇ ಗರಿಷ್ಠ ಮಟ್ಟವನ್ನು ಮುಟ್ಟಿತು. ಅಲ್ಲದೆ, ನಂತರ ಅಪ್ಪರ್ ಸರ್ಕ್ಯೂಟ್ ಹಿಟ್​ ಆಯಿತು.

    ಕಳೆದ ಮೂರು ದಿನಗಳಲ್ಲಿ ಈ ಷೇರು ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಸತತ ಮೂರು ವಹಿವಾಟು ದಿನಗಳಿಂದ ಸ್ಮಾಲ್ ಕ್ಯಾಪ್ ಸ್ಟಾಕ್ ಅಪ್ಪರ್ ಸರ್ಕ್ಯೂಟ್ ಮುಟ್ಟುತ್ತಿದೆ. ಈ ಷೇರು ಶುಕ್ರವಾರ 344.45 ರೂಪಾಯಿಯ ಇಂಟ್ರಾಡೇ ಗರಿಷ್ಠ ಮಟ್ಟವನ್ನು ತಲುಪಿದವು. ತದನಂತರ ಅಪ್ಪರ್​ ಸರ್ಕ್ಯೂಟ್ ಮುಟ್ಟಿತು. ಅಪ್ಪರ್​ ಸರ್ಕ್ಯೂಟ್ ಅಂದರೆ, ಷೇರು ಮಾರುಕಟ್ಟೆಯಲ್ಲಿ ನಿಗದಿಪಡಿಸಿದ ಒಂದು ಷೇರಿಗೆ ನಿಗದಿಪಡಿಸಿದ ಒಂದು ದಿನಕ್ಕೆ ನಿಗದಿಪಡಿಸಿದ ಗರಿಷ್ಠ ಬೆಲೆ ಹೆಚ್ಚಳ ಮಿತಿ.

    ಕಂಪನಿಯ ಷೇರುಗಳ ಏರಿಕೆಯ ಹಿಂದೆ ದೊಡ್ಡ ಕಾರಣವಿದೆ. ವಿದೇಶಿ ಬಂಡವಾಳ ಹೂಡಿಕೆದಾರರಿಗೆ (ಎಫ್‌ಐಐ) ಆದ್ಯತೆಯ ಆಧಾರದ ಮೇಲೆ ಹಂಚಿಕೆಗಾಗಿ ಈ ಷೇರು ಸುದ್ದಿಯಲ್ಲಿದೆ. ಷೇರು ಹಂಚಿಕೆ ಸಮಿತಿಯು ಆದ್ಯತೆಯ ಆಧಾರದ ಮೇಲೆ 35 ಲಕ್ಷ ಕಂಪನಿ ಷೇರುಗಳನ್ನು ಹಂಚಿಕೆ ಮಾಡಿದೆ ಎಂದು ಹಜೂರ್ ಮಲ್ಟಿ ಪ್ರಾಜೆಕ್ಟ್ಸ್ ಲಿಮಿಟೆಡ್ ಕಂಪನಿಯು ಭಾರತೀಯ ಷೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿದೆ. ಪ್ರತಿ ಷೇರಿಗೆ 178 ರೂಪಾಯಿಯಂತೆ ಹಂಚಿಕೆ ಮಾಡಲಾಗಿದೆ.

    ಯಾರ ಪಾಲು ಎಷ್ಟು?: 

    ಈ 35 ಲಕ್ಷ ಷೇರುಗಳ ಪೈಕಿ ಮಾರಿಷಸ್ ಮೂಲದ ಎಫ್ಐಐ ವೆಸ್ಪೆರಾ ಫಂಡ್ ಲಿಮಿಟೆಡ್ 5.50 ಲಕ್ಷ ಷೇರುಗಳನ್ನು ಪಡೆದುಕೊಂಡಿದೆ. ಅಂದರೆ ಎಫ್ಐಐಗಳು (ಫಾರೆನ್​ ಇನ್​ಸ್ಟಿಟ್ಯೂಷನಲ್​ ಇನ್ವೆಸ್ಟರ್ಸ್​- ವಿದೇಶಿ ಸಾಂಸ್ಥಿಕ ಹೂಡಿಕೆದಾರರು) 9.79 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಇದೇ ರೀತಿ ಲಂಡನ್ ಮೂಲದ ಎಫ್ಐಐ ಏರೀಸ್ ಆಪರ್ಚುನಿಟೀಸ್ ಫಂಡ್ ಲಿಮಿಟೆಡ್ 5 ಲಕ್ಷ ಷೇರುಗಳನ್ನು ಪಡೆದುಕೊಂಡಿದೆ. ಇದರರ್ಥ ಬ್ರಿಟನ್​ ಮೂಲದ ಎಫ್ಐಐಗಳು 8.90 ಕೋಟಿ ಹೂಡಿಕೆ ಮಾಡಿದ್ದಾರೆ. ಮತ್ತೊಂದು ಎಫ್‌ಐಐ ಎಲಾರಾ ಇಂಡಿಯಾ ಆಪರ್ಚುನಿಟೀಸ್ ಫಂಡ್ ಕೂಡ 5 ಲಕ್ಷ ಷೇರುಗಳನ್ನು ಪಡೆದುಕೊಂಡಿದೆ. Kiftar IN LLC ಗೆ
    ಎಫ್‌ಪಿಐ ವರ್ಗದಡಿ 2.50 ಲಕ್ಷ ಕಂಪನಿ ಷೇರುಗಳನ್ನು ನೀಡಲಾಗಿದೆ.

    ಷೇರುಗಳ ಸ್ಥಿತಿ:

    ಹಜೂರ್ ಮಲ್ಟಿ ಪ್ರಾಜೆಕ್ಟ್ಸ್ ಲಿಮಿಟೆಡ್‌ನ ಷೇರುಗಳು ಸುಮಾರು 522 ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿವೆ. ಈ ಷೇರು ಬೆಲೆ 52 ವಾರಗಳಲ್ಲಿ ಗರಿಷ್ಠ 393 ರೂ.ಗಳಾಗಿದ್ದರೆ, ಕನಿಷ್ಠ ರೂ.78 ಆಗಿದೆ. ಹಜೂರ್ ಮಲ್ಟಿ ಪ್ರಾಜೆಕ್ಟ್ಸ್ ಷೇರುಗಳು ಷೇರು ಮಾರುಕಟ್ಟೆ ಹೂಡಿಕೆದಾರರಿಗೆ 6 ತಿಂಗಳಲ್ಲಿ 189 ಪ್ರತಿಶತದಷ್ಟು ಲಾಭವನ್ನು ನೀಡಿವೆ. ಇದರ ಷೇರುಗಳು ಆಗಸ್ಟ್ 2, 2023 ರಂದು ರೂ 119 ರ ಮಟ್ಟದಿಂದ ರೂ 345 ರ ಮಟ್ಟವನ್ನು ತಲುಪಿವೆ. ಈ ಷೇರುಗಳ ಬೆಲೆ ಒಂದು ವರ್ಷದಲ್ಲಿ 231.52% ಏರಿದೆ.

    ಐದು ವರ್ಷಗಳಲ್ಲಿ ಕಂಪನಿಯ ಷೇರುಗಳು 30,382.30% ರಷ್ಟು ಬೃಹತ್​ ಲಾಭವನ್ನು ನೀಡಿವೆ. ಐದು ವರ್ಷಗಳ ಹಿಂದೆ, ಅಂದರೆ 2020ರ ಮಾರ್ಚ್​ 29ರಂದು ಈ ಷೇರಿನ ಬೆಲೆ 1 ರೂ. ಇತ್ತು. ಶುಕ್ರವಾರ ಫೆ. 2ರಂದು ಈ ಷೇರಿನ ಬೆಲೆ 344.45 ರೂಪಾಯಿಗೆ ಏರಿದೆ. ಅಂದರೆ ಐದು ವರ್ಷಗಳಲ್ಲಿ ಈ ಷೇರಿನಲ್ಲಿ 1 ಲಕ್ಷ ರೂ.ಗಳ ಹೂಡಿಕೆ ಮಾಡಿದವರು ಈಗ 3 ಕೋಟಿ ರೂ. ಗಳಿಸಿದ್ದಾರೆ.

    ಹಜೂರ್ ಮಲ್ಟಿ ಪ್ರಾಜೆಕ್ಟ್ಸ್ ಲಿಮಿಟೆಡ್ ಭಾರತ ಮೂಲದ ಕಂಪನಿಯಾಗಿದ್ದು, ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ.

    ಷೇರು ಮಾರುಕಟ್ಟೆಯಲ್ಲಿ ಗೂಳಿ ಗುಟುರು: ಇಂಟ್ರಾ ಡೇ ಗರಿಷ್ಠ ಮಟ್ಟ ಮುಟ್ಟಿ ದಾಖಲೆ ಬರೆದ ನಿಫ್ಟಿ

    ಫೆ. 8ರಿಂದ ಸೋಲಾರ್ ಪ್ಯಾನಲ್ ತಯಾರಿಕೆ ಕಂಪನಿಯ ಐಪಿಒ: ಹೂಡಿಕೆದಾರರಿಗೆ ಅದ್ಭುತ ಅವಕಾಶ, ಲಾಭ ಖಚಿತ ಎನ್ನುವುದಕ್ಕೆ ಹೀಗಿವೆ ಕಾರಣಗಳು…

    ಡಾಕ್‌ಮೋಡ್ ಹೆಲ್ತ್ ಟೆಕ್ನಾಲಜೀಸ್‌ ಐಪಿಒ ಗ್ರ್ಯಾಂಡ್ ಲಿಸ್ಟಿಂಗ್: ಮೊದಲ ದಿನವೇ ಶೇ. 140ರಷ್ಟು ಲಾಭ, ಹೂಡಿಕೆದಾರರಿಗೆ ಹಣದ ಸುರಿಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts