More

    ಫೆ. 8ರಿಂದ ಸೋಲಾರ್ ಪ್ಯಾನಲ್ ತಯಾರಿಕೆ ಕಂಪನಿಯ ಐಪಿಒ: ಹೂಡಿಕೆದಾರರಿಗೆ ಅದ್ಭುತ ಅವಕಾಶ, ಲಾಭ ಖಚಿತ ಎನ್ನುವುದಕ್ಕೆ ಹೀಗಿವೆ ಕಾರಣಗಳು…

    ಮುಂಬೈ: ಷೇರು ಮಾರುಕಟ್ಟೆಯಲ್ಲಿ ಮತ್ತೊಂದು ಸೋಲಾರ್ ಕಂಪನಿಯ ಐಪಿಒ ಬರಲಿದೆ. ನೀವು ಸಹ ಸೋಲಾರ್ ಕಂಪನಿಯ ವಿಷಯದಲ್ಲಿ ಬೆಟ್ಟಿಂಗ್ ಮಾಡಲು ಯೋಚಿಸುತ್ತಿದ್ದರೆ ಇದು ನಿಮಗೆ ಉತ್ತಮ ಅವಕಾಶವಾಗಿದೆ.

    ಸೋಲಾರ್ ಪ್ಯಾನಲ್ ತಯಾರಿಕಾ ಕಂಪನಿ ಆಲ್ಪೆಕ್ಸ್ ಸೋಲಾರ್‌ (Alpex Solar) ಐಪಿಒ ಮುಂದಿನ ವಾರದಿಂದ ಹೂಡಿಕೆಗೆ ತೆರೆಯಲಿದೆ. ಫೆಬ್ರವರಿ 8 ರಿಂದ ಫೆಬ್ರವರಿ 12 ರವರೆಗೆ ಹೂಡಿಕೆದಾರರು ಈ ಐಪಿಒದಲ್ಲಿ ಷೇರು ಖರೀದಿಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ.

    ಈ ಐಪಿಒದಲ್ಲಿ ಬೆಲೆಯನ್ನು ಪ್ರತಿ ಷೇರಿಗೆ 115 ರೂ.ಗೆ ನಿಗದಿಪಡಿಸಲಾಗಿದೆ. ಕಂಪನಿಯ ಷೇರುಗಳನ್ನು ಎನ್‌ಎಸ್‌ಇ ಎಮರ್ಜ್‌ನಲ್ಲಿ ಪಟ್ಟಿ ಮಾಡಲಾಗುತ್ತದೆ.

    2024 ರ ಬಜೆಟ್‌ನಲ್ಲಿ ಸೌರ ಫಲಕಗಳ ಬಗ್ಗೆ ಸರ್ಕಾರವು ದೊಡ್ಡ ಘೋಷಣೆ ಮಾಡಿದೆ. ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯಡಿ ಒಂದು ಕೋಟಿ ಮನೆಗಳ ಮೇಲ್ಛಾವಣಿಗಳ ಮೇಲೆ ಸೌರ ಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸಲು ಉದ್ದೇಶಿಸಲಾಗಿದೆ. ಇದರಿಂದ ಪ್ರತಿ ಮನೆಗೆ 300 ಯುನಿಟ್​ ವಿದ್ಯುತ್​ ಉಚಿತವಾಗಿ ಲಭ್ಯವಾಗಲಿವೆ ಎಂದು ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸೋಲಾರ್ ಪ್ಯಾನಲ್ ತಯಾರಿಕಾ ಕಂಪನಿಗಳ ಷೇರುಗಳು ಏರಿಕೆಯಾಗುವ ಸಾಧ್ಯತೆ ಇದೆ.

    ಆಲ್ಪೆಕ್ಸ್ ಸೋಲಾರ್‌ನ ಐಪಿಒ ಇಶ್ಯೂ ಗಾತ್ರವು 64,80,000 ಈಕ್ವಿಟಿ ಷೇರುಗಳಾಗಿರುತ್ತದೆ. ಇದಕ್ಕಾಗಿ ಕಾರ್ಪೊರೇಟ್ ಕ್ಯಾಪಿಟಲ್ ವೆಂಚರ್ಸ್ ಅನ್ನು ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್ ಆಗಿ ನೇಮಿಸಲಾಗಿದೆ.

    ಸ್ಕೈಲೈನ್ ಫೈನಾನ್ಸಿಯಲ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ರಿಜಿಸ್ಟ್ರಾರ್ ಆಗಿದೆ. ಇದರೊಂದಿಗೆ ಕಂಪನಿಯು 12.94 ಕೋಟಿ ರೂಪಾಯಿ ವೆಚ್ಚದಲ್ಲಿ ಸೋಲಾರ್ ಮಾಡ್ಯೂಲ್‌ನ ಅಲ್ಯೂಮಿನಿಯಂ ಫ್ರೇಮ್ ತಯಾರಿಕೆಗಾಗಿ ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಬಯಸಿದೆ.

    GMP ಏನಾಗುತ್ತಿದೆ?:

    ಷೇರು ಮಾರುಕಟ್ಟೆ ತಜ್ಞರ ಪ್ರಕಾರ, ಈ ಐಪಿಒ ಈಗಾಗಲೇ ಗ್ರೇ ಮಾರ್ಕೆಟ್‌ನಲ್ಲಿ 111 ರೂ ಪ್ರೀಮಿಯಂನಲ್ಲಿ ಮಾರಾಟವಾಗುತ್ತಿದೆ. ಇದನ್ನು ಪರಿಗಣಿಸಿದರೆ, ಈ ಷೇರು 226 ರೂ. ಬೆಲೆಯೊಂದಿಗೆ ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾಗುವ ಸಾಧ್ಯತೆ ಇದೆ. ಅಂದರೆ ಹೂಡಿಕೆದಾರರು ಮೊದಲ ದಿನದಲ್ಲಿ ಅಂದಾಜು 97% ಲಾಭವನ್ನು ಪಡೆಯಬಹುದು. ಕಂಪನಿಯ ಷೇರುಗಳನ್ನು ಫೆಬ್ರವರಿ 15 ರಂದು ಪಟ್ಟಿ ಮಾಡಬಹುದಾಗಿದೆ.

    ಡಾಕ್‌ಮೋಡ್ ಹೆಲ್ತ್ ಟೆಕ್ನಾಲಜೀಸ್‌ ಐಪಿಒ ಗ್ರ್ಯಾಂಡ್ ಲಿಸ್ಟಿಂಗ್: ಮೊದಲ ದಿನವೇ ಶೇ. 140ರಷ್ಟು ಲಾಭ, ಹೂಡಿಕೆದಾರರಿಗೆ ಹಣದ ಸುರಿಮಳೆ

    ಡಾಕ್‌ಮೋಡ್ ಹೆಲ್ತ್ ಟೆಕ್ನಾಲಜೀಸ್‌ ಐಪಿಒ ಗ್ರ್ಯಾಂಡ್ ಲಿಸ್ಟಿಂಗ್: ಮೊದಲ ದಿನವೇ ಶೇ. 140ರಷ್ಟು ಲಾಭ, ಹೂಡಿಕೆದಾರರಿಗೆ ಹಣದ ಸುರಿಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts