More

    ಡಾಕ್‌ಮೋಡ್ ಹೆಲ್ತ್ ಟೆಕ್ನಾಲಜೀಸ್‌ ಐಪಿಒ ಗ್ರ್ಯಾಂಡ್ ಲಿಸ್ಟಿಂಗ್: ಮೊದಲ ದಿನವೇ ಶೇ. 140ರಷ್ಟು ಲಾಭ, ಹೂಡಿಕೆದಾರರಿಗೆ ಹಣದ ಸುರಿಮಳೆ

    ಮುಂಬೈ: ಡಾಕ್‌ಮೋಡ್ ಹೆಲ್ತ್ ಟೆಕ್ನಾಲಜೀಸ್‌ನ ಐಪಿಒ ಶುಕ್ರವಾರದಂದು ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾಗಿದೆ. ಈ ಷೇರು ಪಟ್ಟಿಯಾದ ಮೊದಲ ದಿನದಂದೇ ದುಪ್ಪಟ್ಟುಗಿಂತಲೂ ಹೆಚ್ಚು ಹಣವನ್ನು ಹೂಡಿಕೆದಾರರಿಗೆ ಗಳಿಸಿಕೊಟ್ಟಿದೆ.

    ಡಾಕ್‌ಮೋಡ್ ಹೆಲ್ತ್ ಟೆಕ್ನಾಲಜೀಸ್‌ (Docmode Health Technologies) ಐಪಿಒ ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾದ ಮೊದಲ ದಿನದಂದೇ ಹೂಡಿಕೆದಾರರಿಗೆ ಹಣದ ಸುರಿಮಳೆಗೈದಿದೆ. ಎನ್‌ಎಸ್‌ಇಯಲ್ಲಿ ಈ ಕಂಪನಿಯ ಷೇರು 140 ರೂಪಾಯಿ ಪ್ರೀಮಿಯಂನೊಂದಿಗೆ 190.25 ರೂಪಾಯಿ ಬೆಲೆಯೊಂದಿಗೆ ಭರ್ಜರಿ ಪ್ರವೇಶ ಮಾಡಿದೆ. ಈ ಮೂಲಕ ಐಪಿಒ ಬೆಲೆಗಿಂತ ಶೇಕಡಾ 140ರಷ್ಟು ಲಾಭವು ಹೂಡಿಕೆದಾರರಿಗೆ ಮೊದಲ ದಿನವೇ ದೊರೆತಿದೆ.

    ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾಗುವ ಮೊದಲು ಡಾಕ್​ಮೋಡ್ ಹೆಲ್ತ್ ಟೆಕ್ನಾಲಜೀಸ್ ಷೇರುಗಳು ಬೂದು (ಗ್ರೇ) ಮಾರುಕಟ್ಟೆಯಲ್ಲಿ 57 ಪ್ರತಿಶತ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿದ್ದವು.

    ಕಳೆದ ಜನವರಿ 25 ರಿಂದ ಜನವರಿ 30 ರವರೆಗೆ ಈ ಐಪಿಒ ತೆರೆದಿತ್ತು. ಈ ಐಪಿಒದ ಬೆಲೆ ಪಟ್ಟಿಯು ಪ್ರತಿ ಷೇರಿಗೆ 79 ರೂ. ಇತ್ತು. ಒಂದು ಲಾಟ್‌ನಲ್ಲಿ 1600 ಷೇರುಗಳನ್ನು ಖರೀದಿಗೆ ನಿಗದಿಪಡಿಸಲಾಗಿತ್ತು. ಚಿಲ್ಲರೆ ಹೂಡಿಕೆದಾರರು ಕನಿಷ್ಠ 1600 ಷೇರುಗಳನ್ನು ಖರೀದಿಸಬೇಕಾಗಿತ್ತು. ಇದಕ್ಕಾಗಿ ಅವರು ಅಂದಾಜು ಕನಿಷ್ಠ 1,26,400 ರೂಪಾಯಿ ಮಾಡಬೇಕಿತ್ತು.

    ಈ ಐಪಿಒದ 3 ದಿನಗಳ ಚಂದಾದಾರಿಕೆಯ ಅವಧಿಯಲ್ಲಿ 240 ಕ್ಕಿಂತ ಹೆಚ್ಚು ಪಟ್ಟು ಬೇಡಿಕೆ ವ್ಯಕ್ತವಾಗಿತ್ತು. ಅಂದರೆ, ಹಂಚಿಕೆ ಮಾಡಲಾಗುವ ಸಂಖ್ಯೆಗಿಂತ 240 ಪಟ್ಟು ಬೇಡಿಕೆ ಬಂದಿತ್ತು.

    ಕಂಪನಿಯು 8.5 ಲಕ್ಷ ಷೇರುಗಳ ಹೊಸ ಹಂಚಿಕೆಯಿಂದ 6.71 ಕೋಟಿ ರೂ. ಸಂಗ್ರಹಿಸಿದೆ. ಇದರ ಆದಾಯವನ್ನು ಐಟಿ ಮೂಲಸೌಕರ್ಯ ಮತ್ತು ಆಪರೇಟಿಂಗ್ ಸಿಸ್ಟಂ ಖರೀದಿಗೆ ಮತ್ತು ಹೆಚ್ಚುತ್ತಿರುವ ವರ್ಕಿಂಗ್ ಕ್ಯಾಪಿಟಲ್ ಅಗತ್ಯಗಳಿಗಾಗಿ ಬಳಸಲಾಗುವುದು ಎಂದು ಕಂಪನಿ ತಿಳಿಸಿದೆ.

    ಡಾಕ್‌ಮೋಡ್ ಹೆಲ್ತ್ ಟೆಕ್ನಾಲಜೀಸ್ ಲಿಮಿಟೆಡ್‌ನ ಆದಾಯವು ಶೇಕಡಾ 165.12 ರಷ್ಟು ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಅದರ ತೆರಿಗೆಯ ನಂತರದ ಲಾಭ ಶೇಕಡಾ 111.3ರಷ್ಟು ಜಿಗಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts