More

    ಬೆನ್ನು, ಸೊಂಟ ಬಿಗಿತವಿದ್ದರೆ ಈ ಸರಳ ಯೋಗಾಸನ ಮಾಡಿ

    ಬೆನ್ನು, ಭುಜ ಮತ್ತು ಕಾಲಿನ ಮಾಂಸಖಂಡಗಳು ಪಳಗುವುದಕ್ಕೆ ಸಹಾಯಕವಾದ ಯೋಗಾಸನವೆಂದರೆ ಪಾರ್ಶ್ವ ತಾಡಾಸನ. ನಿಂತುಕೊಂಡು ಎರಡೂ ಕೈಗಳನ್ನು ಮೇಲೆ ಮಾಡಿ ಪಕ್ಕಕ್ಕೆ ಬಾಗುವ ಭಂಗಿ ಇದಾಗಿದೆ. ಬಹಳ ಹೊತ್ತು ಕಛೇರಿಯಲ್ಲಿ ಕುಳಿತು ಕೆಲಸ ಮಾಡಿ ಸೊಂಟ, ಬೆನ್ನು ಬಿಗಿತ ಉಂಟಾಗುವವರು ಈ ಆಸನ ಮಾಡಿದರೆ ಒಳ್ಳೆಯ ವ್ಯಾಯಾಮವಾಗುತ್ತದೆ

    ಪ್ರಯೋಜನಗಳು: ಬೆನ್ನು ಮೂಳೆ ಬಲಗೊಳ್ಳಲು ಪಾರ್ಶ್ವ ತಾಡಾಸನ ಬಹಳ ಸಹಕಾರಿ. ಬೆನ್ನು ನೋವು, ಸೊಂಟ ನೋವು ನಿಯಂತ್ರಣಕ್ಕೆ ಉಪಯುಕ್ತ. ನಿಯಮಿತ ಅಭ್ಯಾಸದಿಂದ ಸೊಂಟ, ಬೆನ್ನು ಮತ್ತು ತೊಡೆಗಳು ಹದಗೊಳ್ಳುತ್ತವೆ. ದೈಹಿಕ ಮತ್ತು ಮಾನಸಿಕ ಬಿಗಿತದಿಂದ ವಿಶ್ರಾಂತಿ ಹೊಂದಲು ಈ ಆಸನ ಸಹಕಾರಿ.

    ಇದನ್ನೂ ಓದಿ: ಕೋಟ್ಯಂತರ ಬೆಲೆ ಬಾಳುವ ‘ಕ್ಯಾಲಿಫೋರ್ನಿಯಂ’ ಮಾರಾಟ! ಇಬ್ಬರ ಬಂಧನ

    ಅಭ್ಯಾಸ ಕ್ರಮ: ಜಮಖಾನದ ಮೇಲೆ ಎರಡೂ ಕಾಲುಗಳನ್ನು ಜೋಡಿಸಿ ನೇರವಾಗಿ ನಿಲ್ಲುವುದು. ಮಂಡಿಚಿಪ್ಪನ್ನು ಬಿಗಿಗೊಳಿಸಿ, ಹೊಟ್ಟೆಯನ್ನು ಒಳಗೆಳೆದುಕೊಂಡು ಕಾಲುಗಳನ್ನು ಸ್ವಲ್ಪ ವಿಸ್ತರಿಸಬೇಕು. ನಂತರ ಕೈಗಳನ್ನು ಎತ್ತಿ ಪರಸ್ಪರ ಬೆರಳುಗಳನ್ನು ಹೆಣೆದುಕೊಂಡು, ಉಸಿರನ್ನು ತೆಗೆದುಕೊಂಡು ಶಿರಸ್ಸಿನ ಮೇಲಕ್ಕೆ ತರಬೇಕು. ಕೈಯನ್ನು ನೇರವಾಗಿಸಿ ಕಾಲ್ಬೆರಳುಗಳ ಮೇಲೆ ಸ್ವಲ್ಪ ಹೊತ್ತು ನಿಂತು, ಉಸಿರನ್ನು ಬಿಡುತ್ತಾ ನಿಧಾನಕ್ಕೆ ಕೆಳಕ್ಕೆ ಬಂದು ಪಾರ್ಶ್ವಕ್ಕೆ ಬಾಗಬೇಕು. ಈ ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಮೇಲೆ ಬರಬೇಕು. ನಂತರ ಇನ್ನೊಂದು ಬದಿಗೆ ಉಸಿರನ್ನು ಬಿಡುತ್ತಾ ಪಾರ್ಶ್ವಕ್ಕೆ ಬಾಗಬೇಕು. ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಿದ ನಂತರ ಉಸಿರನ್ನು ತೆಗೆದುಕೊಳ್ಳುತ್ತಾ ಮೇಲಕ್ಕೆ ಬರಬೇಕು. ಕೈಗಳನ್ನು ಬಿಡಿಸಿಕೊಂಡು ಕೆಳಗೆ ತಂದು ವಿಶ್ರಮಿಸಬೇಕು.

    ಪಾರ್ಶ್ವ ತಾಡಾಸನವನ್ನು ದಿನದ ಯಾವುದೇ ಹೊತ್ತಲ್ಲಿ, ಸ್ವಲ್ಪ ಹೊಟ್ಟೆ ಖಾಲಿ ಇದ್ದಾಗ ಅಭ್ಯಾಸ ಮಾಡಬಹುದು.

    ಬೆಳೆಯುವ ಮಕ್ಕಳಿಗೆ ಎತ್ತರವಾಗಲು ಸಹಕಾರಿ, ಈ ಸುಲಭ ಯೋಗಾಸನ!

    ಹಾರ್ನ್​ ಮಾಡಿದರೂ ದಾರಿ ಬಿಡಲಿಲ್ಲ ಎಂದು ಗುಂಡು ಹಾರಿಸಿದ!

    ಮಾನಸಿಕ ಒತ್ತಡ ನಿಯಂತ್ರಣಕ್ಕೆ ಈ ಯೋಗಾಸನ ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts