ನವದೆಹಲಿ: ಇವಳ ಹೆಸರು ಶಾಲು, ಈಕೆ 47 ಭಾಷೆಗಳನ್ನು ಮಾತನಾಡುತ್ತಾಳೆ. ಬಾಲಿವುಡ್ನ ಸಿನಿಮಾವೊಂದರ ಪ್ರೇರಣೆಯಿಂದ ‘ಹುಟ್ಟಿರುವ’ ಈಕೆ ಹಾಂಗ್ಕಾಂಗ್ನ ‘ಸೋಫಿಯಾ’ಳನ್ನೇ ಹೋಲುತ್ತಾಳಂತೆ. ಮುಂಬೈಯಲ್ಲಿನ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕರೊಬ್ಬರು ಈಕೆಯ ‘ಸೃಷ್ಟಿಕರ್ತ’.
ಅಂದಹಾಗೆ ಈಕೆ ಬೇರಾರೂ ಅಲ್ಲ.. ಬಾಂಬೆ ಐಐಟಿಯ ಕೇಂದ್ರೀಯ ವಿದ್ಯಾಲಯದಲ್ಲಿನ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕ ದಿನೇಶ್ ಪಟೇಲ್ ಅವರು ರೂಪಿಸಿರುವ ಮಾನವ ಕಂಪ್ಯೂಟರ್. ಹುಡುಗಿಯನ್ನು ಹೋಲುವಂತೆ ರಚಿಸಿರುವ ಈ ಮಾನವ ಕಂಪ್ಯೂಟರ್ಗೆ ಇವರು ‘ಶಾಲು’ ಎಂಬ ಹೆಸರನ್ನಿಟ್ಟಿದ್ದಾರೆ. ಇನ್ನು ಹಾಂಗ್ಕಾಂಗ್ನ ಹ್ಯಾನ್ಸನ್ ರೋಬಾಟಿಕ್ಸ್ ಅಭಿವೃದ್ಧಿಪಡಿಸಿರುವ ಮಾನವಕಂಪ್ಯೂಟರ್ ‘ಸೋಫಿಯಾ’ಗೂ ‘ಶಾಲು’ಗೂ ಹೋಲಿಕೆ ಇದೆಯಂತೆ.
ವಿಶೇಷವೆಂದರೆ ಬಾಲಿವುಡ್ನ ‘ರೋಬಾಟ್’ ಸಿನಿಮಾದ ಪ್ರೇರಣೆಯಿಂದ ದಿನೇಶ್ ಈ ಮಾನವ ಕಂಪ್ಯೂಟರ್ ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಮಾನವ ಕಂಪ್ಯೂಟರ್ ಶಾಲು 9 ಭಾರತೀಯ ಭಾಷೆಗಳ ಜತೆ 38 ವಿದೇಶಿ ಭಾಷೆಗಳನ್ನೂ ಸೇರಿ ಒಟ್ಟು 47 ಭಾಷೆಗಳನ್ನು ಮಾತನಾಡುತ್ತದೆ. ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್, ಹಿಂದಿ, ಭೋಜಪುರಿ, ಮರಾಠಿ, ಬಾಂಗ್ಲಾ ಮತ್ತು ಗುಜರಾತಿ ಭಾಷೆಗಳನ್ನು ಶಾಲು ಮಾತನಾಡುತ್ತದೆ.
ಈ ಮಾನವ ಕಂಪ್ಯೂಟರ್ ಹೆಣ್ಣಿನಂತಿರುವುದಷ್ಟೇ ಅಲ್ಲ, ಹೆಣ್ಣಿನ ಥರವೇ ಮಾತನಾಡುತ್ತದೆ. ಮಾತ್ರವಲ್ಲ ಮನುಷ್ಯರಂತೆಯೇ ಹಲವಾರು ಭಂಗಿಗಳನ್ನು ಕೂಡ ತೋರಬಲ್ಲದು. ನಗುವುದು, ಕೈಕುಲುಕುವುದನ್ನು ಮಾಡುವ ಈ ಶಾಲು ಸಿಟ್ಟಿನಂಥ ಇತರ ಭಾವನೆಗಳನ್ನು ವ್ಯಕ್ತಪಡಿಸುತ್ತದೆ ಎಂಬುದಾಗಿ ದಿನೇಶ್ ಹೇಳಿಕೊಂಡಿದ್ದಾರೆ. ಶಾಲುವನ್ನು ತ್ಯಾಜ್ಯವಸ್ತುಗಳನ್ನು ಬಳಸಿಕೊಂಡು ಮಾಡಲಾಗಿದೆ. ಪ್ಲಾಸ್ಟಿಕ್, ಕಾರ್ಡ್ಬೋರ್ಡ್, ಮರ, ಅಲ್ಯುಮಿನಿಯಂ ವಸ್ತುಗಳನ್ನು ಬಳಸಿ ಇದನ್ನು ತಯಾರಿಸಲಾಗಿದ್ದು, ಪೂರ್ಣಗೊಳಿಸಲು 50 ಸಾವಿರ ರೂಪಾಯಿ ಖರ್ಚು ಹಾಗೂ 3 ವರ್ಷಗಳ ಸಮಯ ತಗುಲಿದೆ ಎಂದು ದಿನೇಶ್ ಹೇಳಿದ್ದಾರೆ.
ಇದನ್ನೂ ಓದಿ: 10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂ. ಮೋಸ; ಬೆಂಗಳೂರಿನ ಕಂಪನಿಯ 24 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು
ನೆನಪಿನ ಶಕ್ತಿಯನ್ನು ಕೂಡ ಹೊಂದಿರುವ ಇದು ಕೆಲವರನ್ನು ಗುರುತಿಟ್ಟುಕೊಳ್ಳುವುದಷ್ಟೇ ಅಲ್ಲ, ಜನರಲ್ ನಾಲೆಜ್, ಗಣಿತದಂಥ ವಿಷಯಗಳಿಗೆ ಉತ್ತರವನ್ನೂ ನೀಡಬಲ್ಲದು. ಇದು ಜನರಿಗೆ ವಿಷ್ ಮಾಡಬಲ್ಲದು, ಪೇಪರ್ ಓದಬಲ್ಲದು, ರೆಸಿಪಿಗಳನ್ನು ಹೇಳಬಲ್ಲದು ಮಾತ್ರವಲ್ಲ ಶಾಲೆಗಳಲ್ಲಿ ಶಿಕ್ಷಕಿಯಾಗಿ, ಕಚೇರಿಗಳಲ್ಲಿ ರಿಸೆಪ್ಷನಿಸ್ಟ್ ಆಗಿಯೂ ಇದನ್ನು ಬಳಸಬಹುದು ಎನ್ನುತ್ತಾರೆ ದಿನೇಶ್. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ದರ್ಶನ್-ಯಶ್ ಅಭಿಮಾನಿಗಳ ನಡುವೆ ಜೋರಾಯ್ತು ಟ್ವೀಟ್ ಸಮರ: ಫ್ಯಾನ್ಸ್ ವಾರ್ಗೆ ಕೊನೆ ಎಂದು?
ಅಶ್ಲೀಲ ಸಿಡಿ ಪ್ರಕರಣ: ಕೊನೆಗೂ ದೂರು ನೀಡಿದ ರಮೇಶ್ ಜಾರಕಿಹೊಳಿ, ದೂರಿನಲ್ಲಿ ಏನಿದೆ?