More

    10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂ. ಮೋಸ; ಬೆಂಗಳೂರಿನ ಕಂಪನಿಯ 24 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು

    ಬೆಂಗಳೂರು: ಈ ಕಂಪನಿಯಿಂದ ಮೋಸ ಹೋಗಿರುವವರ ಪೈಕಿ ನೀವೂ ಒಬ್ಬರಿರಬಹುದು. ಏಕೆಂದರೆ ಚೈನ್​ ಲಿಂಕ್ ಹೆಸರಿನಲ್ಲಿ ಈ ಕಂಪನಿ ಇದುವರೆಗೆ 10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂಪಾಯಿಯನ್ನು ವಂಚಿಸಿದೆ. ಮಾತ್ರವಲ್ಲ, ಕಂಪನಿಯ ಸಿಇಒ, ಸಿಒಒ ಸೇರಿ ಒಟ್ಟು 24 ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ 20 ಕೋಟಿ ರೂ. ಇದ್ದ ಬ್ಯಾಂಕ್​ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅಂದಹಾಗೆ ಇಂಥದ್ದೊಂದು ಬೃಹತ್ ವಂಚನಾ ಜಾಲವನ್ನು ಭೇದಿಸಿರುವುದು ತೆಲಂಗಾಣದ ಸೈಬರಾಬಾದ್ ಪೊಲೀಸರಾದರೂ ಈ ಕಂಪನಿಯ ಮೂಲ ಬೆಂಗಳೂರು.

    ಹೀಗೆ ಭಾರಿ ವಂಚನೆಯನ್ನೇ ಮಾಡಿರುವ ಬೆಂಗಳೂರಿನ ಈ ಕಂಪನಿಯ ಹೆಸರು ಇಂಡಸ್​ ವಿವ. ಈ ವಂಚಕ ಕಂಪನಿಯ ಪೂರ್ತಿ ಹೆಸರು, ಇಂಡಸ್​ ವಿವ ಹೆಲ್ತ್​ ಸೈನ್ಸಸ್​ ಪ್ರೈವೇಟ್​ ಲಿಮಿಟೆಡ್​. ಕಂಪನಿಯ ಸಿಇಒ, ಬೆಂಗಳೂರಿನ ಅಭಿಲಾಷ್ ಥಾಮಸ್​, ಸಿಒಒ ಬೆಂಗಳೂರಿನ ಜಯನಗರದ ಪ್ರೇಮ್​ ಕುಮಾರ್, ನಿರ್ದೇಶಕ ಬೆಂಗಳೂರಿನ ಬಾಬಾ ನಗರದ ಮಂಡಲನೇನ್​ ಸುಬ್ರಹ್ಮಣ್ಯಂ, ಉಪಾಧ್ಯಕ್ಷ ಬೆಂಗಳೂರಿನ ಆರ್​.ಟಿ.ನಗರದ ಇಮಾದುಲ್ಲಾ ಷರೀಫ್ ಸೇರಿ ಕಂಪನಿಯಲ್ಲಿ ವಿವಿಧ ಸ್ಥಾನಗಳನ್ನು ಅಲಂಕರಿಸಿರುವ ಬೇರೆ ಬೇರೆ ರಾಜ್ಯಗಳ ಒಟ್ಟು 24 ಆರೋಪಿಗಳನ್ನು ಬಂಧಿಸಿರುವುದಾಗಿ ಸೈಬರಾಬಾದ್ ಪೊಲೀಸ್ ಕಮಿಷನರ್ ವಿ.ಸಿ.ಸಜ್ಜನರ್ ತಿಳಿಸಿದ್ದಾರೆ.

    10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂ. ಮೋಸ; ಬೆಂಗಳೂರಿನ ಕಂಪನಿಯ 24 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು
    ಸೈಬರಾಬಾದ್​ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಅವರಿಂದ ಸುದ್ದಿಗೋಷ್ಠಿ

    ಇಂಡಸ್​ ವಿವದಲ್ಲಿ ಹಣ ತೊಡಗಿಸಿ ಮೋಸ ಹೋದ ವ್ಯಕ್ತಿಯೊಬ್ಬರು ತೆಲಂಗಾಣದ ಗಚಿಬೌಲಿ ಪೊಲೀಸ್​ ಠಾಣೆಗೆ ಫೆ. 20ರಂದು ನೀಡಿದ್ದ ದೂರನ್ನು ಆಧರಿಸಿ ತನಿಖೆ ಕಾರ್ಯಾಚರಣೆಗೆ ಇಳಿದ ಸೈಬರಾಬಾದ್ ಪೊಲೀಸರು ಭಾರಿ ವಂಚನಾ ಜಾಲವನ್ನೇ ಭೇದಿಸಿದ್ದಾರೆ.
    ಈ ಕಂಪನಿ ಸಾರ್ವಜನಿಕರಿಗೆ ಸದಸ್ಯರಾಗುವಂತೆ ಹೇಳಿ, ಅವರಿಗೆ ತನ್ನ ಉತ್ಪನ್ನಗಳನ್ನು ನೀಡಿ ಅದನ್ನು ಪ್ರಮೋಟ್​ ಮಾಡಿ ಮತ್ತಷ್ಟು ಸದಸ್ಯರನ್ನು ಮಾಡಿದರೆ ಪ್ರೋತ್ಸಾಹಕರವಾಗಿ ಸಾವಿರಾರು ರೂಪಾಯಿ ನೀಡುವುದಾಗಿ ಆಮಿಷವೊಡ್ಡುತ್ತದೆ. ಮಾತ್ರವಲ್ಲ ಅದಕ್ಕಾಗಿ ಆರಂಭಿಕವಾಗಿ ಒಂದಷ್ಟು ಮೊತ್ತವನ್ನೂ ಕಟ್ಟಿಸಿಕೊಳ್ಳುತ್ತದೆ. ಸದಸ್ಯರಾಗ ಬಯಸುವವರು ಮೊದಲಿಗೆ 12,500 ರೂ. ಪಾವತಿಸಬೇಕು. ಅವರಿಗೆ ಆ ಮೌಲ್ಯಕ್ಕೆ ಸಂಸ್ಥೆಯ ಉತ್ಪನ್ನಗಳನ್ನು ನೀಡಲಾಗುತ್ತದೆ. ಬಳಿಕ ಆ ಸದಸ್ಯ ಇನ್ನಿಬ್ಬರು ಸದಸ್ಯರಿಂದ 12,500 ಪಡೆದು ಸದಸ್ಯತ್ವ ಮಾಡಿಸಿದರೆ 1,000 ರೂ. ಹಣ ಆ ಸದಸ್ಯನಿಗೆ ಬೋನಸ್ ಸಿಗುತ್ತದೆ. ಆದರೆ ಇದನ್ನು ಪಡೆಯಬೇಕಿದ್ದರೆ ಆ ಸದಸ್ಯ ಒಂದು ವಾರದೊಳಗೆ ಮತ್ತಿಬ್ಬರು ಸದಸ್ಯರನ್ನು ಮಾಡಿಸಬೇಕು. ಆಗ ಮತ್ತೆ ಒಂದು ಸಾವಿರ ಬೋನಸ್ ಆಗಿ ಸಿಗುತ್ತದೆ. ಅಂದರೆ ಒಟ್ಟಿನಲ್ಲಿ ನಾಲ್ವರು ಸದಸ್ಯರನ್ನು ಮಾಡಿಸುತ್ತಿದ್ದಂತೆ 2 ಸಾವಿರ ಸಿಗುತ್ತದೆ. ಹೀಗೆ ಹೆಚ್ಚು ಹೆಚ್ಚು ಸದಸ್ಯರನ್ನು ಮಾಡಿಸಿದ ಹಾಗೆ ಹೆಚ್ಚು ಬೋನಸ್ ಸಿಗುತ್ತ ಹೋಗುತ್ತದೆ ಎಂದು ಕಂಪನಿಯವರು ಆಮಿಷವೊಡ್ಡಿ ಸದಸ್ಯತ್ವವನ್ನು ಮಾಡಿಸಿಕೊಳ್ಳುತ್ತಿರುತ್ತಾರೆ. ಇನ್ನು ಇದರಲ್ಲಿ ಬೇರೆ ಬೇರೆ ಮೊತ್ತದ ತರಹೇವಾರಿ ಸದಸ್ಯತ್ವ, ಗ್ರೇಡ್ ಇದ್ದು ನಾನಾಮಟ್ಟದಲ್ಲಿ ಭಾರಿ ಹಣವನ್ನು ಸಂಗ್ರಹಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂ. ಮೋಸ; ಬೆಂಗಳೂರಿನ ಕಂಪನಿಯ 24 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು
    ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ

    ಈ ಕಂಪನಿಯು ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಆಲಿವ್ ಲೈಫ್​ ಸೈನ್ಸಸ್​ ಎಂಬ ಹೆಸರಿನಲ್ಲಿ ತನ್ನದೇ ಆದ ಘಟಕವನ್ನೂ ಹೊಂದಿದೆ. ಇಲ್ಲಿ ಆರೋಗ್ಯ, ಸೌಂದರ್ಯ ಹಾಗೂ ಪಥ್ಯ ಸಂಬಂಧಿತ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತದೆ. ಐ-ಗ್ಲೋ, ಐ-ಕೇರ್, ಐ-ಚಾರ್ಜ್​, ಐ-ಕಾಫಿ, ಐ-ಪಲ್ಸ್, ಅಡ್ವಾನ್ಸ್ ಆಯುರ್ವೇದ, ಐ-ಸ್ಲಿಮ್​ ಮುಂತಾದ ಹೆಸರಿನ ಸಾವಿರಾರು ರೂ. ಬೆಲೆಯ ಉತ್ಪನ್ನಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಆದರೆ ಕಂಪನಿ ಈ ಘಟಕಕ್ಕೆ ಸರ್ಕಾರದ ಯಾವುದೇ ಇಲಾಖೆಯ ಮಾನ್ಯತೆ ಇಲ್ಲ ಎಂಬುದಾಗಿ ಸೈಬರಾಬಾದ್ ಪೊಲೀಸರು ತಿಳಿಸಿದ್ದಾರೆ.

    10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂ. ಮೋಸ; ಬೆಂಗಳೂರಿನ ಕಂಪನಿಯ 24 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು
    ಇಂಡಸ್ ವಿವ ಕಂಪನಿಯ ಉತ್ಪನ್ನಗಳು
     

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕೆಲಸಕ್ಕೆ ಹೋಗಿದ್ದ ಹೆಂಡತಿ ತಡವಾಗಿ ಮನೆಗೆ ಬಂದಿದ್ದಕ್ಕೆ ಕೊಡಲಿಯಿಂದ ಕೊಚ್ಚಿ ಕೊಂದ ಗಂಡ!; ಪತ್ನಿಯ ಶೀಲದ ಕುರಿತು ಅನುಮಾನ?

    ಸೊಸೆಯನ್ನ ಕೊಂದು ಮಾವ ಆತ್ಮಹತ್ಯೆ! ಊಟಕ್ಕೆ ಬಂದ ಮಗನಿಗೆ ಕಾದಿತ್ತು ಆಘಾತ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts