More

    ಈ ಉದ್ಯಮಿಯ ಮಾಸ್ಕ್‌ ಬೆಲೆ ಮೂರೂವರೆ ಲಕ್ಷ ರೂ.!

    ಕಟಕ್: ಪುಣೆಯ ವ್ಯಕ್ತಿಯೊಬ್ಬ 2.89 ಲಕ್ಷ ರೂ. ಬೆಲೆಯ ಚಿನ್ನದ ಮಾಸ್ಕ್ ಧರಿಸಿದ್ದು ಇತ್ತೀಚೆಗೆ ವರದಿಯಾಗಿತ್ತು. ಇದು ಅಂಥದೇ ಇನ್ನೊಬ್ಬ ವ್ಯಕ್ತಿಯ ಕುರಿತ ಸ್ಟೋರಿ. ಇವರ ಮಾಸ್ಕ್‌ನ ಬೆಲೆ ಬರೋಬ್ಬರಿ ಮೂರೂವರೆ ಲಕ್ಷ ರೂ.!

    ಒಡಿಶಾದ ಉದ್ಯಮಿ ಅಲೋಕ್ ಮೊಹಂತಿಗೆ ಚಿಕ್ಕಂದಿನಿಂದಲೂ ಚಿನ್ನವೆಂದರೆ ಭಾರೀ ಪ್ರೀತಿ. ಪುಣೆಯ ವ್ಯಕ್ತಿ ಚಿನ್ನದ ಮಾಸ್ಕ್ ಧರಿಸಿದ, ಸೂರತ್‌ನ ವ್ಯಕ್ತಿ ವಜ್ರಖಚಿತ ಮಾಸ್ಕ್ ಹಾಕಿಕೊಂಡ ಸುದ್ದಿಗಳನ್ನು ಮಾಧ್ಯಮಗಳಲ್ಲಿ ನೋಡಿದ ಮೊಹಂತಿಗೆ ತಾನೂ ಯಾಕೆ ಅಂಥದೊಂದು ಮಾಸ್ಕ್ ಮಾಡಿಸಿಕೊಳ್ಳಬಾರದು ಎಂಬ ಯೋಚನೆ ಬಂತಂತೆ. ಕೂಡಲೇ ಕಟಕ್‌ನ ಜುವಲರಿ ಶಾಪ್‌ಗೆ ಹೋಗಿ ತನಗೆ ಎಂಥ ಮಾಸ್ಕ್ ಬೇಕೆಂಬುದನ್ನು ಹೇಳಿ ಚಿನ್ನದಿಂದ ಮಾಡಿಸಿಕೊಂಡಿದ್ದಾರೆ. ಅದಕ್ಕೆ ಮೂರೂವರೆ ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಇದನ್ನೂ ಓದಿರಿ ಬೆಂಗಳೂರಿನಲ್ಲಿ ಇನ್ನೂ 15 ದಿನ ಲಾಕ್​ಡೌನ್​ ಸಾಧ್ಯತೆ

    ಹಾಗೆ ನೋಡಿದರೆ ಮೊಹಂತಿಯವರ ಚಿನ್ನದ ವ್ಯಾಮೋಹ ಇಂದು ನಿನ್ನೆಯದಲ್ಲ. ಅವರು ಸದಾ ಮೈತುಂಬ ಚಿನ್ನ ಧರಿಸಿರುತ್ತಾರೆ. ಕೈಗಳಿಗೆ ಬ್ರೇಸ್‌ಲೆಟ್, ಬೆರಳುಗಳಿಗೆಲ್ಲ ಚಿನ್ನದ ಉಂಗುರ, ಕೊರಳಿಗೆ ಭಾರವಾಗುವಷ್ಟು ದಪ್ಪದಪ್ಪನೆಯ ಸರಗಳು, ಚಿನ್ನದ ವಾಚ್, ಚಿನ್ನದ ಕ್ಯಾಪ್…. ಹೀಗೆ ಇವರು ಧರಿಸುವ ಬಹುತೇಕ ವಸ್ತುಗಳು ಚಿನ್ನದಿಂದ ಮಾಡಿದಂಥವೇ. ‘‘ನಾನು ಫರ್ನಿಚರ್ ಬಿಸಿನೆಸ್ ಮಾಡುತ್ತಿದ್ದೇನೆ. ಅದರಿಂದ ಬರುವ ಹಣದಲ್ಲಿ ಸ್ವಲ್ಪ ಭಾಗವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುತ್ತೇನೆ. ಬೀದಿ ನಾಯಿಗಳಿಗೆ ನಿಯಮಿತವಾಗಿ ಆಹಾರ ಪೂರೈಸುತ್ತಿದ್ದೇನೆ. ಚಿನ್ನಾಭರಣಗಳನ್ನು ಧರಿಸುವುದು ನನ್ನ ದೌರ್ಬಲ್ಯ. ಕಳೆದ 40 ವರ್ಷಗಳಿಂದ ಚಿನ್ನವನ್ನು ಧರಿಸುತ್ತಿದ್ದೇನೆ. ಚಿನ್ನದ ಎನ್95 ಮಾಸ್ಕ್ ತಯಾರಿಕೆಗೆ 22 ದಿನ ಹಿಡಿಯಿತು. 100 ಗ್ರಾಂ ಚಿನ್ನ ಇದರಲ್ಲಿದೆ’’ ಎಂದು ಮೊಹಂತಿ ಹೇಳಿದ್ದಾರೆ.

    ಆದರೆ ಇವರ ಚಿನ್ನದ ವ್ಯಾಮೋಹದ ಕುರಿತು ಕೆಲವರಿಂದ ವಿರೋಧವೂ ವ್ಯಕ್ತವಾಗಿದೆ. ‘‘ಕರೊನಾ ಹಾವಳಿಯಲ್ಲಿ ಜೀವ ಉಳಿಸಿಕೊಳ್ಳುವುದೇ ದೊಡ್ಡದಾಗಿರುವಾಗ, ಈತ ಚಿನ್ನದ ಮಾಸ್ಕ್ ಮಾಡಿಸಿಕೊಂಡಿರುವುದು ಮೂರ್ಖತನ. ಈ ವ್ಯಕ್ತಿ ಇದೇ ಹಣವನ್ನು ಬಡವರ ಒಳಿತಿಗಾಗಿ ಬಳಸಬಹುದಿತ್ತು’’ ಎಂದು ಅಭಿಪ್ರಾಯಪಟ್ಟಿದ್ದಾರೆ.

    ‘ರಮ್’ ಕುಡಿದ್ರೆ ಕರೊನಾ ಬರಲ್ಲ; ಕೌನ್ಸಿಲರ್ ರವಿಚಂದ್ರ ಗಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts