More

    VIDEO | ಗೂಗಲ್​ ಸರ್ಚ್​, ಗೂಗಲ್​ ಮ್ಯಾಪ್​ ಕೇಳಿದ್ದೀರಿ.. ಇದು ನೋಡಿ ‘ಗೋ’ಗಲ್​ ಸರ್ಚ್​, ‘ಗೋ’ಗಲ್​ ಮ್ಯಾಪ್​!; ಬಾಣಂತಿ ಹಸು ಮಾಡಿದ್ದೇನು?

    ಮಂಗಳೂರು: ಯಾವುದಾದರೂ ಸ್ಥಳಕ್ಕೆ ಹೋಗಬೇಕಾದಾಗ, ಯಾವುದಾದರೂ ಸ್ಥಳವನ್ನು ನೋಡಿ ತಿಳಿಯಬೇಕಾದಾಗ ಸಾಮಾನ್ಯವಾಗಿ ನಾವೆಲ್ಲ ಒಂದಲ್ಲ ಒಂದು ಸಲ ಗೂಗಲ್ ಮ್ಯಾಪ್​, ಗೂಗಲ್​ ಸರ್ಚ್​ನ ಮೊರೆ ಹೋಗಿರುತ್ತೇವೆ. ಆದರೆ ಇಲ್ಲೊಂದು ಕಡೆ ‘ಗೋ’-ಗಲ್ ಸರ್ಚ್ ಎನ್ನಬಹುದಾದಂಥ ಪ್ರಕರಣವೊಂದು ಜರುಗಿದ್ದು, ಟೆಕ್ನಾಲಜಿ ಅವಲಂಬಿತ ಮನುಷ್ಯರಲ್ಲಿ ಅಚ್ಚರಿಯನ್ನೂ ಮೂಡಿಸಿದೆ. ಏಕೆಂದರೆ ಹೀಗೆ ಯಾವುದೇ ಟೆಕ್ನಾಲಜಿ ಇಲ್ಲದೆಯೂ ಇವರಿಗೆ ದಾರಿ ಕಾಣಿಸಿದ್ದಲ್ಲದೆ, ಗುರಿಯನ್ನೂ ತಲುಪಿದ್ದಾರೆ.

    ಏಕೆಂದರೆ ಒಂದು ದಿನ ನಾಪತ್ತೆಯಾಗಿದ್ದ ಗೋಮಾತೆಯೊಂದು ಮರುದಿನ ಮರಳಿದ್ದಲ್ಲದೆ ನಾಪತ್ತೆಯಾಗಲು ಕಾರಣ ಏನು ಎಂಬುದನ್ನು ಸ್ವತಃ ಸಂಬಂಧಿಕರನ್ನು ಸ್ಥಳಕ್ಕೆ ಕರೆದೊಯ್ದು ತೋರಿಸಿದೆ. ಶ್ರೀ ಶಿವಸದ್ಗುರು ಎಂಬ ಗೋಶಾಲೆಯ ಹಸುಗಳು ಕಾಡಿಗೆ ಹೋಗಿ ಮೇಯ್ದು ಬರುವುದು ರೂಢಿ. ಹೀಗೆ ಮೇಯಲು ಹೋಗಿದ್ದ ಗೋವುಗಳ ಪೈಕಿ ತುಂಬಿದ ಗರ್ಭಿಣಿ ಹಸುವೊಂದು ಸಂಜೆ ಹಿಂದಿರುಗಲಿಲ್ಲ.

    ಆದರೆ ಮಾರನೇ ದಿನ ಬೆಳಗ್ಗೆ ವಾಪಸಾಗಿ ತನ್ನನ್ನು ನೋಡಿಕೊಳ್ಳುವ ಗೋಶಾಲೆ ಜನರನ್ನು ತನ್ನ ಹಿಂದೆ ಬರುವಂತೆ ಮಾಡಿತು. ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಗುಡ್ಡದ ಮೇಲೆ ಹಸಿರು ಮರಗಳ ನಡುವೆ ಕರೆದುಕೊಂಡು ಹೋಗಿ ತನ್ನ ನವಜಾತ ಕರುವನ್ನು ತೋರಿಸಿತು. ಈ ದೃಶ್ಯಾವಳಿಯ ವಿಡಿಯೋ ವಾಟ್ಸ್​ಆ್ಯಪ್​ ಮತ್ತು ಫೇಸ್​ಬುಕ್​ಗಳಲ್ಲಿ ಹಲವಾರು ಜನರು ಶೇರ್ ಮಾಡುತ್ತಿದ್ದು, ವೈರಲ್​ ಆಗಿದೆ. ಜತೆಗೆ ಟೆಕ್ನಾಲಜಿಯ ವಿಶ್ಲೇಷಣೆಗೂ ಸಿಗದ ಹಸುವಿನ ಈ ಗ್ರಹಿಕೆ, ಮಮತಾಮಯಿ ಗುಣ, ಗೋಶಾಲೆಯವರನ್ನು ಅಲ್ಲಿಗೆ ಕರೆದುಕೊಂಡ ಹೋದ ಪರಿ ಎಲ್ಲವೂ ಈಗ ವಿಡಿಯೋ ವೈರಲ್​ ಆಗುತ್ತಿರುವ ಜತೆಗೆ ಮೆಚ್ಚುಗೆಗೂ ಪಾತ್ರವಾಗುತ್ತಿದೆ.

    ಇದು ಮ್ಯಾಜಿಕ್ ಸ್ಯಾಂಡ್​.. ಬಿಸಿ ಮಾಡಿದ್ರೆ ಸಾಕು ಚಿನ್ನ ಆಗುತ್ತೆ!; 4 ಕೆ.ಜಿ. ಮರಳಿಗೆ 50 ಲಕ್ಷ ರೂ. ಕೊಟ್ಟೇ ಬಿಟ್ಟ ಜುವೆಲ್ಲರಿ ಮಾಲೀಕ…

    ಶ್ರೀರಾಮಮಂದಿರವನ್ನು ನಿರ್ಮಾಣಕ್ಕೂ ಮೊದಲೇ ನೋಡೋ ಅವಕಾಶ ಇಲ್ಲಿದೆ!

    ಪ್ರೀತಿಸಿ ಮದ್ವೆಯಾದ ಎರಡೇ ತಿಂಗಳಲ್ಲಿ ಪ್ರಿಯತಮೆ ಮಾಯ! ಆತಂಕದಲ್ಲಿ ಪ್ರಿಯಕರ, ಅಷ್ಟಕ್ಕೂ ಏನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts