More

    ಈ ಕಳ್ಳರು ನೀರಿನ ಟ್ಯಾಂಕ್​ ಒಳಗಿರುವುದನ್ನೂ ಬಿಡಲ್ಲ, ಮಣ್ಣೊಳಗಿರುವುದನ್ನು ಕೂಡ..; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳತನದ ದೃಶ್ಯ

    ಆನೇಕಲ್​: ಮನೆಗೆ ಕನ್ನ ಹಾಕಿ ಮನೆಯೊಳಗಿರುವ ವಸ್ತುಗಳನ್ನು ದೋಚುವವರ ಕುರಿತು ಕೇಳಿರುತ್ತೀರಿ. ಮನೆ ಹೊರಗಿರುವ ಶೂ ಸ್ಟ್ಯಾಂಡ್​ಗಳನ್ನು ಮುರಿದು ದುಬಾರಿ ಶೂಗಳನ್ನು ಕದ್ದವರೂ ಇದ್ದಾರೆ. ಆದರೆ ಈ ಕಳ್ಳರು ನೀರಿನ ಟ್ಯಾಂಕ್ ಒಳಗಿರುವುದನ್ನೂ ಬಿಡಲ್ಲ, ಮಣ್ಣೊಳಗಿರುವುದನ್ನು ಕೂಡ..!

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್​ ತಾಲೂಕಿನ ಸಬ್​ಮಂಗಲ ಎಂಬಲ್ಲಿ ಇಂಥದ್ದೊಂದು ಕಳ್ಳತನ ನಡೆದಿದೆ. ನಸುಕಿನ ಎರಡು ಗಂಟೆ ಸುಮಾರಿಗೆ ನಾಲ್ವರು ಖತರ್ನಾಕ್ ಕಳ್ಳರು ಈ ಕಳ್ಳತನ ಮಾಡಿದ್ದು, ಕಳವಿನ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

    ಸಬ್​ಮಂಗಲದ ಮನೆಯೊಂದರ ಬಳಿ ನೀರಿನ ಸಂಪ್​ಗೆ ಅಳವಡಿಸಿದ್ದ ಮೋಟಾರ್​ ಕಳವು ಮಾಡಿದ್ದಲ್ಲದೆ, ಮಣ್ಣೊಳಗೆ ಅಳವಡಿಸಲಾಗಿದ್ದ 50 ಮೀಟರ್ ಕೇಬಲ್ ವಯರ್​ ಕೂಡ ಕದ್ದುಕೊಂಡು ಹೋಗಿದ್ದಾರೆ. ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕಳವು ಪ್ರಕರಣ ನಡೆದಿದೆ.

    ಈತ ಮಕ್ಕಳಿಗೆ ಪಾಠ ಮಾಡುವ ಟೀಚರ್; ಆದರೆ ತನ್ನ ಅಪ್ಪ-ಅಮ್ಮನಿಗೇ ಟಾರ್ಚರ್!; ಮಗನ ಮನೆ ಮುಂದೆಯೇ ತಂದೆ-ತಾಯಿಯ ಪ್ರತಿಭಟನೆ

    ಇನ್ನೆರಡು ತಿಂಗಳಂತೂ ಬಹಳ ಹುಷಾರಾಗಿರಬೇಕು: ನೀತಿ ಆಯೋಗದ ಸದಸ್ಯರ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts