More

    ರೀಲ್ಸ್‌ಗಾಗಿ ಸ್ಕೂಟರ್‌ಗಳ ಕಳವು; ಮೂವರ ಸೆರೆ

    ಬೆಂಗಳೂರು: ರೀಲ್ಸ್ ಮಾಡಲು ಕಪ್ಪು ಬಣ್ಣದ ಸ್ಕೂಟರ್‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಬಾಲಕರು ಸೇರಿ ಮೂವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

    ವೀರಸಾಗರದ ನಿವಾಸಿ ಮದನ್ ಮತ್ತು ಆತನ ಸಹಚರರನ್ನು ಬಂಧಿತರು. 22 ಲಕ್ಷ ರೂ. ಮೌಲ್ಯದ 29 ಸ್ಕೂಟರ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ತಿಂಡ್ಲು ಬಳಿ ಕಳವಾಗಿದ್ದ ಸ್ಕೂಟರ್ ಪತ್ತೆಗೆ ತನಿಖೆ ಕೈಗೊಂಡಾಗ ಮೂವರು ಸೆರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವೃತ್ತಿಪರ ಕಳ್ಳ ಮದನ್, ನಗರ ಮತ್ತು ಹೊರ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇನ್‌ಸ್ಟಾಗ್ರಾಂಗೆ ಸ್ಕೂಟರ್‌ಗಳಲ್ಲಿ ವೀಲ್ಹಿಂಗ್ ಮೂಲಕ ರೀಲ್ಸ್ ಮಾಡಿ ಮದನ್ ಆಪ್‌ಲೋಡ್ ಮಾಡುತ್ತಿದ್ದ. ಇನ್‌ಸ್ಟಾಗ್ರಾಂನಲ್ಲಿ ಅಪ್ರಾಪ್ತರು ಸ್ನೇಹಿತರಾಗಿದ್ದರು. ಇವರು ಸಹ ರೀಲ್ಸ್ ಕ್ರೇಜ್ ಬಿದ್ದು, ಸ್ಕೂಟರ್‌ಗಳನ್ನು ಕಳವು ಮಾಡುತ್ತಿದ್ದರು. ರೀಲ್ಸ್ ಮಾಡಿದ ಮೇಲೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು.

    ವೀಲ್ಹಿಂಗ್ ಮತ್ತು ರೀಲ್ಸ್ ವಿಡಿಯೋ ಸಹ ಚೆನ್ನಾಗಿ ಬರುತ್ತಿದ್ದವು ಎಂಬ ಕಾರಣಕ್ಕೆ ಕಪ್ಪು ಬಣ್ಣದ ಡಿಯೋ ಸ್ಕೂಟರ್‌ಗಳನ್ನು ಟಾರ್ಗೆಟ್ ಮಾಡಿದ್ದರು. ಕೊಡಿಗೇಹಳ್ಳಿ, ಚಂದ್ರಲೇಔಟ್, ವಿದ್ಯಾರಣ್ಯಪುರ, ಯಶವಂತಪುರ, ಯಲಹಂಕ ಉಪನಗರ, ವಿಜಯನಗರ, ಬಾಗಲಗುಂಟೆ, ಬಸವೇಶ್ವರನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಗ್ರಾಮಾಂತರ, ಆವಲಹಳ್ಳಿ ಹಾಗೂ ದೊಡ್ಡಬಳ್ಳಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 12 ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts