More

    ‘ಯುಪಿ ಪೊಲೀಸರು ನಮ್ಮ ರವಿಕೆಯನ್ನು ಎಳೆದು, ಅನುಚಿತವಾಗಿ ಮುಟ್ಟಿದರು’-ಟಿಎಂಸಿ ನಾಯಕಿಯರ ಆರೋಪ

    ಲಖನೌ: ಹತ್ರಾಸ್​ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಅತ್ಯಾಚಾರಕ್ಕೀಡಾಗಿ ಮೃತಪಟ್ಟ ದಲಿತ ಯುವತಿಯ ಮನೆಗೆ ಭೇಟಿಕೊಡಲೆಂದು ನಿನ್ನೆ ಹೋಗಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ಬಂಧಿಸಿದ್ದರು…ಗುಂಪು ಚದುರಿಸಲು ಲಾಠಿ ಚಾರ್ಜ್​ ಕೂಡ ನಡೆಸಿದ್ದರು. ಈ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ರಾಹುಲ್​ ಗಾಂಧಿ ಪೊದೆಯೊಂದಕ್ಕೆ ಬಿದ್ದಿದ್ದರು.

    ಇಂದು ತೃಣಮೂಲಕ ಕಾಂಗ್ರೆಸ್​ ಸಂಸದರಾದ ಡೆರೆಕ್-ಒ-ಬ್ರಿಯೆನ್​, ಪ್ರತಿಮಾ ಮಂಡಲ್​ ಅವರನ್ನೊಳಗೊಂಡ ನಿಯೋಗವೊಂದು ಇಂದು ಹತ್ರಾಸ್​ಗೆ ತೆರಳಿ, ಮೃತಳ ಕುಟುಂಬಸ್ಥರನ್ನು ಭೇಟಿಯಾಗಲು ಮುಂದಾಗಿತ್ತು. ಅವರೂ ಕೂಡ ಗಡಿಯಲ್ಲೇ ಉತ್ತರ ಪ್ರದೇಶ ಪೊಲೀಸರಿಂದ ತಡೆಯಲ್ಪಟ್ಟಿದ್ದಾರೆ. ಇಂದು ಕೂಡ ಅಲ್ಲಿ ಗಲಾಟೆಯಾಗಿದ್ದು, ಡೆರೆಕ್-ಒ-ಬ್ರಿಯೆನ್​ ಅವರನ್ನು ನೆಲಕ್ಕೆ ತಳ್ಳಲಾಗಿದ್ದು, ಇಬ್ಬರು ಮಹಿಳಾ ಕಾರ್ಯಕರ್ತೆಯರ ಮೇಲೆ ಕೂಡ ಹಿಡಿದು ಎಳೆದಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಇದನ್ನೂ ಓದಿ: ‘ಅನುಶ್ರೀ ಅರೆಸ್ಟ್​ ಆಗದಂತೆ ತಡೆದಿರೋದು ಶುಗರ್​ ಡ್ಯಾಡಿ!’

    ಟಿಎಂಸಿ ನಾಯಕಿ ಮಮತಾ ಠಾಕೂರ್​ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಹತ್ರಾಸ್​ ಗ್ಯಾಂಗ್​ ರೇಪ್​ ಸಂತ್ರಸ್ತೆಯ ಮನೆಗೆ ಭೇಟಿ ಕೊಡಲೆಂದು ನಾವು ಹೋಗಿದ್ದೆವು. ಆದರೆ ನಮಗೆ ಅವಕಾಶ ಸಿಗಲಿಲ್ಲ. ನಾವು ಪ್ರತಿಭಟಿಸಿದಾಗ ಮಹಿಳಾ ಪೊಲೀಸರು ನಮ್ಮನ್ನು ಹಿಡಿದು ಎಳೆದಾಡಿದರು. ನಮ್ಮ ರವಿಕೆ (ಬ್ಲೌಸ್​)ಯನ್ನೆಲ್ಲ ಎಳೆದು, ಅನುಚಿತವಾಗಿ ಸ್ಪರ್ಶಿಸಿದರು. ನಮ್ಮ ಸಂಸದೆ ಪ್ರತಿಮಾ ಮಂಡಲ್​ ಮೇಲೆ ಲಾಠಿ ಚಾರ್ಜ್​ ಮಾಡಿದ್ದಾರೆ. ಆಗ ಕೆಳಗೆ ಬಿದ್ದ ಅವರನ್ನು ಪುರುಷ ಪೊಲೀಸ್​ ಅಧಿಕಾರಿಗಳೂ ಹಿಡಿದುಕೊಂಡರು..ಇದೆಲ್ಲ ನಾಚಿಕೆಗೇಡು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದ ರಾಬಿನ್ ಉತ್ತಪ್ಪ!

    ನಾವು ಯಾವುದೇ ಗಲಾಟೆ ಮಾಡಿರಲಿಲ್ಲ. ಗುಂಪಾಗಿ ಪ್ರತಿಭಟನೆಯನ್ನೂ ಮೊದಲು ಮಾಡಲಿಲ್ಲ. ಶಾಂತಿಯುತವಾಗಿಯೇ ಅವರ ಮನೆಗೆ ಹೋಗುತ್ತಿದ್ದೆವು. ಆದರೂ ನಮ್ಮನ್ನು ತಡೆಯಲಾಗಿದೆ ಎಂದು ಟಿಎಂಸಿ ಮುಖಂಡರು ಹೇಳಿದ್ದಾರೆ. (ಏಜೆನ್ಸೀಸ್​)

    ಸೋಂಕು ತಗುಲಿದ್ರೆ ಮಮತಾರನ್ನು ತಬ್ಬಿಕೊಳ್ಳುತ್ತಿದ್ದೆ ಎಂದ ಸಂಸದನಿಗೆ ಕರೊನಾ ಪಾಸಿಟಿವ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts