More

    ನಾರ್ವೆ ಪ್ರಧಾನಿಯನ್ನೂ ಬಿಡದ ಪೊಲೀಸರು; ಬರ್ತ್​ಡೇ ಆಚರಿಸಿ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ವಿಧಿಸಿದ್ರು..

    ನವದೆಹಲಿ: ಕಾನೂನು ಎಲ್ಲರಿಗೂ ಒಂದೇ, ಕಾನೂನಿನ ಮುಂದೆ ಎಲ್ಲರೂ ಒಂದೇ.. ಎಂಬುದನ್ನು ಸಾಬೀತು ಪಡಿಸಲು ಹಾಗೂ ಜನರಿಗೂ ಕಾನೂನಿನ ಮೇಲೆ ವಿಶ್ವಾಸ ಮೂಡಿಸಲು ಈ ಪೊಲೀಸರು ಪ್ರಧಾನಿಯನ್ನೂ ಬಿಡದೆ ದಂಡ ವಿಧಿಸಿದ್ದಾರೆ. ಅಷ್ಟಕ್ಕೂ ಪ್ರಧಾನಿ ತನ್ನ ಬರ್ತ್​ಡೇ ಆಚರಣೆ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ್ದೇ ಇಂಥದ್ದೊಂದು ಕಾನೂನುಕ್ರಮಕ್ಕೆ ಕಾರಣ.

    ಅಂದಹಾಗೆ ಹೀಗೆ ಕೋವಿಡ್ ನಿಯಮ ಉಲ್ಲಂಘಿಸಿದ್ದು ನಾರ್ವೆಯ ಪ್ರಧಾನಿ ಅರ್ನಾ ಸೋಲ್​ಬರ್ಗ್. ಕೋವಿಡ್​ ನಿಯಮ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಪ್ರಧಾನಿಗೆ 20,000 ನಾರ್ವೆಯನ್​ ಕ್ರೌನ್ಸ್​ (2,352 ಡಾಲರ್​) ದಂಡ ವಿಧಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ಪೊಲೀಸ್ ವರಿಷ್ಠ ಓಲ್​ ಸೇವರುಡ್​ ತಿಳಿಸಿದ್ದಾರೆ.

    ಇದನ್ನೂ ಓದಿ: ನಿಮ್ಮೂರಿನ ಇನ್​ಸ್ಪೆಕ್ಟರ್​ ಬದಲಾಗಿದ್ದಾರಾ ನೋಡಿಕೊಳ್ಳಿ: 18 ಡಿವೈಎಸ್‌ಪಿ, 100 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ; ಇಲ್ಲಿದೆ ಪೂರ್ತಿ ಪಟ್ಟಿ

    ಪ್ರಧಾನಿ ಅರ್ನಾ ಫೆಬ್ರವರಿಯಲ್ಲಿ ನಡೆದ ತಮ್ಮ 60ನೇ ಜನ್ಮದಿನಾಚರಣೆ ವೇಳೆ ಕುಟುಂಬದ 13 ಮಂದಿಯೊಂದಿಗೆ ಸಂಭ್ರಮ ಆಚರಿಸಿ, ದೈಹಿಕ ಅಂತರವನ್ನೂ ಪಾಲಿಸದೆ ಕೋವಿಡ್ ನಿಯಮ ಉಲ್ಲಂಘಿಸಿದ್ದರು. ಹತ್ತಕ್ಕಿಂತ ಹೆಚ್ಚು ಜನ ಸೇರಬಾರದು ಎಂಬ ನಿಯಮವಿದ್ದರೂ 13 ಜನ ಒಂದೆಡೆ ಸೇರಿದ್ದರು. ಹೀಗೆ ನಿಯಮ ಉಲ್ಲಂಘಿಸಿದ್ದಕ್ಕೆ ಅವರು ಅಂದೇ ಕ್ಷಮೆಯಾಚಿಸಿದ್ದರೂ ಇವರ ವಿರುದ್ಧ ಪೊಲೀಸರು ಕ್ರಮಕೈಗೊಂಡು ದಂಡ ವಿಧಿಸಿರಲಿಲ್ಲ. (ಏಜೆನ್ಸೀಸ್)

    ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೆ ನಂಬರ್​ ಪ್ಲೇಟ್ ಮರೆಮಾಚಿ ಪರಾರಿ!; ದಂಡ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪ್ರಚಂಡರು..

    ಎಲ್ಲರ ಬದುಕಲ್ಲೂ ಹಾಸುಹೊಕ್ಕಾಗಿರುವ ಈ ಕಂಪನಿಯಲ್ಲೇ ಹರಾಸ್​ಮೆಂಟ್​!; 500 ಉದ್ಯೋಗಿಗಳಿಂದ ಸಿಇಒಗೆ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts