More

    ರಾಜ್ಯದಲ್ಲಿ ಅಘೋಷಿತ ಲಾಕ್​ಡೌನ್ ಜಾರಿಯಲ್ಲಿದೆ : ದಿನೇಶ್ ಗುಂಡೂರಾವ್

    ಬೆಂಗಳೂರು : ಸರ್ಕಾರ‌ ತನ್ನ ವೈಫಲ್ಯಗಳನ್ನು ಮರೆಮಾಚಲು ಲಾಕ್‌ಡೌನ್ ಎಂದು ಘೋಷಿಸಿಲ್ಲ. ಆದರೆ ರಾಜ್ಯದಲ್ಲಿ ಅಘೋಷಿತ ಲಾಕ್‌ಡೌನ್ ಜಾರಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ದಿನದ ದುಡಿಮೆ ನಂಬಿ ಬದುಕುವವರು ಏನು ಮಾಡಬೇಕು ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

    “ಜನವಿರೋಧಿ ನೀತಿಯನ್ನು ಇಂದು ರಾಜ್ಯ ಸರ್ಕಾರ ಪಾಲಿಸ್ತಾ ಇದೆ. ಒಂದು ಕಡೆ ಲಾಕ್​ಡೌನ್ ಅಂತ ಹೇಳ್ತಾ ಇಲ್ಲ. ಆದರೆ ಇದು ಅಘೋಷಿತ ಲಾಕ್​ಡೌನ್ ಎಂದು ಗೋಚರವಾಗ್ತಾ ಇದೆ” ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    “ಮದ್ಯದ ಅಂಗಡಿಗಳಿಗೆ ಅನುಮತಿ ಕೊಟ್ಟಿದ್ದಾರೆ. ಅದೇನು ಅಗತ್ಯ ವಸ್ತುನಾ ? ಬಟ್ಟೆ ಅಂಗಡಿ, ಎಲೆಕ್ಟ್ರಿಕಲ್ ಅಂಗಡಿ, ಮೊಬೈಲ್ ಅಂಗಡಿ ಯಾಕೆ ತೆರೀಬಾರ್ದು ? ರೆಸ್ಟೊರೆಂಟ್​ ನಡೆಸಬಹುದು ಅಂತಾರೆ. ಆದರೆ ಪಾರ್ಸಲ್ ಮಾತ್ರ ಕೊಡಬಹುದು ಅಂತಾರೆ. ಬರೀ ಪಾರ್ಸಲ್ ಕೊಟ್ಟು ನಡೆಸೋಕಾಗುತ್ತಾ ?” ಎಂದು ರಾಜ್ಯ ಕಾಂಗ್ರೆಸ್​ ತನ್ನ ಅಧಿಕೃತ ಟ್ವಿಟರ್​​ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಗುಂಡೂರಾವ್ ಪ್ರಶ್ನಿಸಿದ್ದಾರೆ.

    ಈ ಬಗ್ಗೆ ವರ್ತಕರು, ಬೀದಿಬದಿ ವ್ಯಾಪಾರಿಗಳು, ಅಸಂಘಟಿತ ವಲಯ, ಸಣ್ಣ ಉದ್ಯಮಿಗಳೊಂದಿಗೆ ಸಭೆ‌ ನಡೆಸಿ ಅವರ ಅಭಿಪ್ರಾಯ ತೆಗೆದುಕೊಂಡು, ಅವರ ಪರವಾಗಿ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. (ಏಜೆನ್ಸೀಸ್)

    ಎಲ್ಲರನ್ನೂ ಆಕ್ಸಿಜನ್ ಕೇಳುತ್ತಿರುವ ದೆಹಲಿ ಸರ್ಕಾರ ಮಂಜೂರಾದ ಪ್ಲ್ಯಾಂಟ್​ಗಳನ್ನು ಇನ್ನೂ ಸ್ಥಾಪಿಸಿಲ್ಲ !

    ಭಾರತೀಯರಿಗೇ ಅತ್ಯಂತ ದುಬಾರಿಯಾಗಲಿದೆ… ಈ ಮೇಡ್​ ಇನ್​ ಇಂಡಿಯಾ ಕರೊನಾ ಲಸಿಕೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts