More

    ಎಲ್ಲರ ಗಮನ ಸೆಳೆಯುತ್ತಿದೆ ಕೆಜಿಎಫ್​ ಮಾದರಿ ಹೋಟೆಲ್; ನರಾಚಿಯ ರುಚಿ ನೋಡಲು ಇಲ್ಲಿಗೆ ಭೇಟಿ ನೀಡಿ…

    ಬೆಂಗಳೂರು: ನಿಮ್ಮಲ್ಲಿ ಅನೇಕರು ‘ಕೆಜಿಎಫ್​’ ಸಿನಿಮಾ ನೋಡಿ ಫುಲ್ ಫಿದಾ ಆಗಿರುತ್ತೀರಿ. ಈಗ ಬೆಂಗಳೂರಿನ ಸಹಕಾರನಗರದಲ್ಲಿ ಕೆಜಿಎಫ್​ನ ನರಾಚಿ ಮಾದರಿಯಲ್ಲೇ ಹೋಟೆಲ್​ ಒಂದನ್ನು ನಿರ್ಮಿಸಲಾಗಿದೆ. ಇದರ ಹೆಸರು ಕೂಡ ಕೆಜಿಎಫ್​ ಎಂದೇ! ಆದರೆ ಒಂದೇ ವ್ಯತ್ಯಾಸ. ಸಿನಿಮಾದ ಫುಲ್​ ಪಾರ್ಮ್​ ‘ಕೋಲಾರ ಗೋಲ್ಡ್​ ಫೀಲ್ಡ್’​ ಎಂದಾದರೆ ಹೋಟೆಲ್​ನ ಕೆಜಿಏಫ್​ ಫುಲ್​ಫಾರ್ಮ್​ ‘ಕನ್ನಡಿಗಾಸ್​ ಗೋಲ್ಡನ್​ ಫುಡ್​’ ಎಂದು.

    ಇಲ್ಲಿ ನರಾಚಿಯ ಮುಖ್ಯದ್ವಾರವನ್ನೇ ಹೋಲುವ ರೀತಿಯಲ್ಲಿ ಆರ್ಟ್‌ ವರ್ಕ್‌ ಮಾಡಲಾಗಿದೆ. ಒಳಾಂಗಣ ವಿನ್ಯಾಸವೂ ನರಾಚಿ ಮಾದರಿಯಲ್ಲೇ ಇದೆ. ಇಲ್ಲಿ ಸುಮಾರು 200 ಆಸನಗಳ ವ್ಯವಸ್ಥೆ ಇದ್ದು ಬೆಂಗಳೂರಿನ ಸಹಕಾರನಗರದಲ್ಲಿ ಈ ಹೊಟೇಲ್‌ ತಲೆ ಎತ್ತಿದೆ. ಈ ಹೋಟೆಲ್​ ವಿನ್ಯಾಸಕ್ಕೆ ನೋಡುಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಬೃಹತ್‌ ಗೋಡೆ, ಗೋಡೆಗೆ ಕಲ್ಲುಗಳ ರೀತಿಯ ಕೆತ್ತನೆ. ದೊಡ್ಡದಾದ ಮುಖ್ಯದ್ವಾರ, ಇವೆಲ್ಲವೂ ಥೇಟ್‌ ‘ಕೆಜಿಎಫ್‌’ನ ನರಾಚಿಯನ್ನೇ ಹೋಲುತ್ತಿದೆ. ಇಲ್ಲಿ ಅನೇಕ ಬಗೆಯ ರುಚಿ ಶುಚಿಯಾದ ತಿಂಡಿ ತಿನಸುಗಳೂ ಸಿಗಲಿವೆ.

    ಸ್ಥಳ: ನಂ.15-16, 5ನೇ ಮುಖ್ಯರಸ್ತೆ, ಶಾಂತಿವನ, ಸಹಕಾರ ನಗರ, ಸ್ಟೆರ್ಲಿಂಗ್ ಹೈಟ್ಸ್ ಅಪಾರ್ಟ್ಮೆಂಟ್ ಪಕ್ಕ. ಬೆಂಗಳೂರು-92

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts