More

    ಬೆಳಗಾವಿ ಬೇಕು ಅಂದಿದ್ದ ಮಹಾ ಸರ್ಕಾರಕ್ಕೆ ಸಿಕ್ಕಿದ್ದು ಆಘಾತ ಮಾತ್ರ…

    ಚಿಕ್ಕೋಡಿ: ಬೆಳಗಾವಿ ಕೆಲವು ಪ್ರದೇಶಗಳನ್ನು ಕೇಳಿದ್ದ ಮಹಾ ಸರ್ಕಾರಕ್ಕೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಅತ್ತ ಕಡೆ ಮಹಾ ಪುಂಡರು ಕರ್ನಾಟಕದ ಬಸ್​ಗಳಿಗೆ ಕಲ್ಲು ತೂರಾಟ ಮಾಡುತ್ತಾ, ನಮ್ಮ ಮುಖ್ಯಮಂತ್ರಿಯ ಅಣಕು ಶವ ಯಾತ್ರೆ ಮಾಡುತ್ತಾ ಹುಚ್ಚಾಟ ಆಡುತ್ತಿದ್ದರು. ಆದರೆ ಈಗ ಜತ್ತ ತಾಲೂಕಿನ ತಿಕ್ಕುಂಡಿ ಗ್ರಾಮಸ್ಥರು ಇದೆಲ್ಲದಕ್ಕೂ ಒಗ್ಗಟ್ಟಿನಿಂದ ಉತ್ತರ ನಿಡಿದ್ದಾರೆ ಎಂದೇ ಹೇಳಬಹುದು.

    ಜತ್ತ ತಾಲೂಕು ಜಲ ಸಂಘರ್ಷ ಸಮಿತಿ ಮುಖಂಡ ಸುನೀಲ್ ಪೋತದಾರ್ ನೇತೃತ್ವದಲ್ಲಿ ಉಮದಿಯಲ್ಲಿ ಜತ್ತ ತಾಲೂಕಿನ 42 ಹಳ್ಳಿಗಳ ಪ್ರಮುಖರೂ ಸೇರಿ ಸಭೆ ನಡೆಸಿದ್ದರು. ನಿನ್ನೆ ಸಭೆ ನಡೆಸಿ ಜತ್ತ ತಾಲೂಕಿನ ಜನ ಮಹಾರಾಷ್ಟ್ರ ಸರ್ಕಾರಕ್ಕೆ ಗಡುವು ನೀಡಿದ್ದಾರೆ .’ನಮಗೆ ಸೌಲಭ್ಯ ಕೊಡಿ ಇಲ್ಲವೆ ಕರ್ನಾಟಕಕ್ಕೆ ಬಿಟ್ಟು ಬಿಡಿ’ ಎಂದು ಜತ್ತ ತಾಲೂಕಿನ ಜನ ಹೇಳಿದ್ದರು. ಇದಾದ ಮೇಲೆ ಈಗ ಸಾಂಗ್ಲಿ ಜಿಲ್ಲೆಯ ತಿಕ್ಕುಂಡಿ ಗ್ರಾಮಸ್ಥರು ಗ್ರಾಮದ ಮುಖ್ಯ ದ್ವಾರಕ್ಕೆ ಕನ್ನಡ ಬಾವುಟ ಕಟ್ಟಿದ್ದಾರೆ.

    ಇದರಿಂದ ಮಹಾರಾಷ್ಟ್ರ ಜತ್ತ ತಿಕ್ಕುಂಡಿ ಗ್ರಾಮಸ್ಥರು ಹೊಸ ಇತಿಹಾಸ ಬರೆದಂತಾಗಿದೆ. ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ಜತ್ತ್ ತಾಲೂಕಿನ ತಿಕ್ಕುಂಡಿ ಗ್ರಾಮಸ್ಥರು ಗ್ರಾಮದ ಮುಖ್ಯ ದ್ವಾರಕ್ಕೆ ಕನ್ನಡ ಬಾವುಟ ಕಟ್ಟಿ ಕನ್ನಡಾಭಿಮಾನ ಪ್ರದರ್ಶಿಸಿದ್ದಾರೆ. ಇದೀಗ ಮಹಾರಾಷ್ಟ್ರದ ಜನರಿಂದಲೇ ಕನ್ನಡ ಬಾವುಟ ಪ್ರದರ್ಶನ ನಡೆದಿದ್ದು ‘ಮಹಾ’ ಪುಂಡರಿಗೆ ಇದು ತಕ್ಕ ಉತ್ತರ ಎಂದೇ ಹೇಳಬಹದು.

    ತಿಕ್ಕುಂಡಿ ಗ್ರಾಮಸ್ಥರು ಬೈಕುಗಳಿಗೆ ಕನ್ನಡ ಬಾವುಟ ಕಟ್ಟಿ ಕನ್ನಡ ಅಭಿಮಾನ ಮೆರೆದಿದ್ದಾರೆ. ಜೈ ಕರ್ನಾಟಕ ಎಂದು ಘೋಷಣೆ ಕೂಗಿ ಮರಾಠಿ ಕನ್ನಡಿಗರು ಮಹಾರಾಷ್ಟ್ರ ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ. ಮಹಾರಾಷ್ಟ್ರ ಸರ್ಕಾರಕ್ಕೆ ಮರಾಠಿಯಲ್ಲಿ ಮೂಲಭೂತ ಸೌಕರ್ಯ ಕೊಡಿ ಎಂದು ಬೇಡಿಕೆ ಇಟ್ಟಿರುವ ಗ್ರಾಮಸ್ಥರು ಮುಖ್ಯವಾಗಿ ನೀರಾವರಿ ಯೋಜನೆಗಳನ್ನು ರೂಪಿಸುವಂತೆ ಆಗ್ರಹಿಸಿದ್ದಾರೆ.

    ‘ಬೇಡಿಕೆ ಈಡೇರಿಸದಿದ್ದಲ್ಲಿ ನಾವು ಕರ್ನಾಟಕಕ್ಕೆ ಸೇರಿಕೊಳ್ಳುತ್ತೇವೆ’ ಎಂದು ಎಚ್ಚರಿಕೆ ಕುಡ ಕೊಟ್ಟಿದ್ದಾರೆ. ತಿಕ್ಕುಂಡಿ ಗ್ರಾಮಸ್ಥರಲ್ಲಿ ದಿನದಿಂದ ದಿನಕ್ಕೆ ಕರ್ನಾಟಕ ಸೇರುವ ಉತ್ಸುಕತೆ ಹೆಚ್ಚುತ್ತಿದೆ. ಮರಾಠಿ ಪುಂಡರಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಮಹಾ ಕನ್ನಡಿಗರು ಪ್ರತ್ಯುತ್ತರ ನೀಡುತ್ತಿದ್ದಾರೆ. ಮಹಾರಾಷ್ಟ್ರ ಜನರೇ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.‌ ಅಲ್ಲಿನ ಜನರು ‘ನಮ್ಮ ಬಗ್ಗೆ ಕರ್ನಾಟಕ ಮುಖ್ಯಮಂತ್ರಿಗೆ ಕಾಳಜಿ ಇದೆ’ ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts