More

    ಒಂದೇ ಬಾರಿಗೆ 8 ಉಪಗ್ರಹಗಳನ್ನು ಉಡಾಯಿಸಿದ ಇಸ್ರೋ…

    ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ವಿಜ್ಞಾನಿಗಳು ಶನಿವಾರ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಪಿಎಸ್‌ಎಲ್‌ವಿ-ಸಿ 54 ರಾಕೆಟ್‌ನಲ್ಲಿ ಭೂ ವೀಕ್ಷಣಾ ಉಪಗ್ರಹ – ಓಷನ್‌ಸ್ಯಾಟ್​ ಮತ್ತು ಇತರ ಎಂಟು ಉಪಗ್ರಹಗಳನ್ನು ಉಡಾವಣೆ ಮಾಡಿದ್ದಾರೆ.

    ಚೆನ್ನೈನಿಂದ 115 ಕಿಮೀ ದೂರದಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಪಿಎಸ್‌ಎಲ್‌ವಿ ರಾಕೆಟ್​ನ ಉಡಾವಣೆ ಶನಿವಾರ ಬೆಳಗ್ಗೆ 11:56ಕ್ಕೆ ನಿಗದಿಯಾಗಿತ್ತು. ಇದರ ಕೌಂಟ್​ಡೌನ್​ ಇಂದು ಬೆಳಗ್ಗೆ 10:26ಕ್ಕೆ ಆರಂಭವಾಗಿತ್ತು.

    ರಾಕೆಟ್‌ನ ಪ್ರಾಥಮಿಕ ಪೇಲೋಡ್ ಓಷನ್‌ಸ್ಯಾಟ್ ಆಗಿದ್ದು, ಇದನ್ನು ಮೊದಲನೆ ಕಕ್ಷೆಯಲ್ಲಿ ಬೇರ್ಪಡಿಸಲಾಗುತ್ತದೆ. ಇತರ ಎಂಟು ನ್ಯಾನೊ-ಉಪಗ್ರಹಗಳನ್ನು ಗ್ರಾಹಕರ ಅಗತ್ಯತೆಗಳ ಆಧಾರದ ಮೇಲೆ ವಿಭಿನ್ನ ಕಕ್ಷೆಗಳಲ್ಲಿ ಇರಿಸಲಾಗುತ್ತದೆ.

    ಏನಿದು ಓಷನ್​ಸ್ಯಾಟ್​?
    ಇದು ಒಂದು ವೀಕ್ಷಣಾ ಉಪಗ್ರಹವಾಗಿದ್ದು ಓಷನ್‌ಸ್ಯಾಟ್ ಸರಣಿಯ ಮೂರನೇ ತಲೆಮಾರಿನ ಉಪಗ್ರಹವಾಗಿದೆ. ಹೆಚ್ಚಿನ ಪೇಲೋಡ್ ಇರುವ ಓಷಿಯನ್​ಸ್ಯಾಟ್​-2, ಸಾಗರದ ಬಣ್ಣ ಮತ್ತು ಗಾಳಿಯ ವೆಕ್ಟರ್ ಡೇಟಾವನ್ನು ಗಮನಿಸಿ ದಾಖಲೆ ಮಾಡಿಕೊಳ್ಳುತ್ತದೆ. ಇದರಿಂದಾಗಿ ಸಮುದ್ರದಲ್ಲಿ ಉಂಟಾಗುವ ಬದಲಾವಣೆಗಳಿಂದ ಹವಾಮಾನ ಯಾವ ರೀತಿ ಬದಲಾಗಬಹುದು ಎಂಬುದನ್ನು ತಿಳಿದುಕೊಳ್ಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts