More

    ಮಹಾರಾಷ್ಟ್ರಕ್ಕೆ ಮಹಾ ಶಾಕ್​; ನಾವು ಕರ್ನಾಟಕಕ್ಕೆ ಸೇರುತ್ತೇವೆ ಎಂದ ಜತ್ತ ತಾಲೂಕಿನ ಜನ..!

    ಚಿಕ್ಕೋಡಿ: ಇದೀಗ ಗಡಿ ವಿಚಾರದಲ್ಲಿ ಮೂಗು ತೂರಿಸಿ ಕಿರಿಕಿರಿ ಮಾಡುತ್ತಿದ್ದ ಮಹಾ ಸರ್ಕಾರಕ್ಕೆ ಮತ್ತೊಂದು ಆಘಾತ ಆಗಿದೆ. ಬೆಳಗಾವಿ ಕಾರವಾರ ನಿಪ್ಪಾಣಿ ಬೇಕು ಎನ್ನುತ್ತಿದ್ದ ಪುಂಡರಿಗೆ ಜತ್ತ ತಾಲೂಕಿನ ಜನರೇ ಶಾಕ್​ ನೀಡಿದ್ದಾರೆ.

    ಜತ್ತ ತಾಲೂಕು ಜಲ ಸಂಘರ್ಷ ಸಮಿತಿ ಮುಖಂಡ ಸುನೀಲ್ ಪೋತದಾರ್ ನೇತೃತ್ವದಲ್ಲಿ ಜತ್ತ ತಾಲೂಕಿನ ಹಳ್ಳಿಗಳಲ್ಲಿ ಸಭೆ ನಡೆಸಲಾಗಿದೆ. ಉಮದಿಯಲ್ಲಿ ಜತ್ತ ತಾಲೂಕಿನ 42 ಹಳ್ಳಿಗಳ ಪ್ರಮುಖರೂ ಸೇರಿ ಸಭೆ ನಡೆಸಿದ್ದಾರೆ. ನಿನ್ನೆ ಸಭೆ ನಡೆಸಿ ಜತ್ತ ತಾಲೂಕಿನ ಜನ ಮಹಾರಾಷ್ಟ್ರ ಸರ್ಕಾರಕ್ಕೆ ಗಡುವು ನೀಡಿದ್ದಾರೆ .

    ‘ನಮಗೆ ಸೌಲಭ್ಯ ಕೊಡಿ ಇಲ್ಲವೆ ಕರ್ನಾಟಕಕ್ಕೆ ಬಿಟ್ಟು ಬಿಡಿ’ ಎಂದು ಜತ್ತ ತಾಲೂಕಿನ ಜನ ಹೇಳಿದ್ದಾರೆ. ‘ಮಹಾರಾಷ್ಟ್ರ ಸರ್ಕಾರಕ್ಕೆ ನಾಚಿಕೆ ಆಗಬೇಕು. ನಾಲ್ಕು ದಶಕಗಳಿಂದ ನೀರು ಕೊಟ್ಟಿಲ್ಲ. ಕರ್ನಾಟಕಕ್ಕೆ ಸೇರಬೇಕು ಎಂಬುದು ನಮ್ಮ ಇಚ್ಛೆ ಇದೆ. ಮಹಾರಾಷ್ಟ್ರ ಸರ್ಕಾರಕ್ಕೆ ಒಂದು ವಾರದ ಗಡುವು ನೀಡುತ್ತೇವೆ. 8 ದಿನಗಳೊಳಗೆ ಮಹಾರಾಷ್ಟ್ರ ಸಿಎಂ, ಡಿಸಿಎಂ, ಜಲಸಂಪನ್ಮೂಲ ಸಚಿವರು ಉಮದಿ ಗ್ರಾಮಕ್ಕೆ‌ ಬರಬೇಕು. ನೀರಿನ ಸಮಸ್ಯೆ ಪರಿಹಾರಕ್ಕೆ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ತಿಳಿಸಬೇಕು. ಇಲ್ಲವಾದ್ರೆ ಎಂಟು ದಿನಗಳ ಬಳಿಕ ಕರ್ನಾಟಕ ಸಿಎಂರನ್ನು ಉಮದಿಗೆ ಆಹ್ವಾನಿಸಿ ನಾವು ಕರ್ನಾಟಕ ರಾಜ್ಯಕ್ಕೆ ಸೇರುವ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ’ ಎಂದು ಎಂದು ಖಡಕ ವಾರ್ನಿಂಗ್ ನೀಡಿದ್ದಾರೆ.

    ಇತ್ತ ಕಡೆ ‘ಬೆಳಗಾವಿ, ಕಾರವಾರ ನೀವು ನಮಗೆ ಕೊಡ್ತೀರಾ’ ಎಂದು ಶರದ್ ಪವಾರ್ ಕೇಳಿದ್ದಾರೆ. ಇದರರ್ಥ ಜತ್ತ ತಾಲೂಕು ನಾವು ಕರ್ನಾಟಕಕ್ಕೆ ನೀಡ್ತೀವಿ ಎಂಬುದಾಗಿದೆ. ಆದರೆ ಮಹಾಜನ್ ವರದಿ ಪ್ರಕಾರ ಜತ್ತ ತಾಲೂಕಿನ ಹಳ್ಳಿಗಳು ಕರ್ನಾಟಕಕ್ಕೆ ಸೇರುತ್ತವೆ.

    https://www.vijayavani.net/teacher-beats-his-student-with-steel-scale-for-playing-with-chalk/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts