More

    ವಾಟ್ಸ್​ಆ್ಯಪ್​ ಮೆಸೇಜ್​ ಬಂದ ಕೂಡಲೇ ಆನ್​ ಆಗುತ್ತೆ ಟಿವಿ, ಫ್ಯಾನ್​! ಕುಟುಂಬವನ್ನು ಬೆಚ್ಚಿಬೀಳಿಸಿದ್ದ ಘಟನೆಯ ರಹಸ್ಯ ಬಯಲು

    ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ನಡೆಯುತ್ತಿದ್ದ ವಿಚಿತ್ರ ಪ್ರಕರಣದ ಅಸಲಿ ಸತ್ಯ ಇದೀಗ ಬಯಲಾಗಿದೆ. ವಾಟ್ಸ್​ಆ್ಯಪ್​ನಲ್ಲಿ ಬಂದ ಮೆಸೇಜ್​ನಂತೆಯೇ ಮನೆಯಲ್ಲಿ ಘಟನೆಗಳು ನಡೆಯುತ್ತಿದ್ದವು. ಇದರಿಂದ ಇಡೀ ಕುಟುಂಬ ಗಾಬರಿಗೊಂಡು ಸೈಬರ್​ ಪೊಲೀಸ್​ ಠಾಣೆಗೆ ದೂರು ನೀಡಿತ್ತು. ಇದೀಗ ಆ ವಿಚಿತ್ರ ಘಟನೆಯ ಹಿಂದೆ ಯುವಕನೊಬ್ಬನ ಕೈವಾಡ ಇರುವುದು ಬಹಿರಂಗವಾಗಿದೆ.

    ಅಂದಹಾಗೆ ಈ ಘಟನೆ ಕೊಲ್ಲಂ ಜಿಲ್ಲೆ ಕೊಟ್ಟರಾಕ್ಕರ ಪಟ್ಟಣದ ಸಮೀಪ ಇರುವ ನೆಲ್ಲಿಕುನ್ನಮ್​ನಲ್ಲಿ ನಡೆದಿತ್ತು. ವಾಟ್ಸ್​ಆ್ಯಪ್​ನಲ್ಲಿ ಬಂದ ಮಸೇಜ್​ನಂತೆಯೇ ಮನೆಯಲ್ಲಿ ಅನೇಕ ಘಟನೆಗಳು ನಡೆಯುತ್ತಿತ್ತು. ನೆಲ್ಲಿಕುನ್ನಮ್​ ಗ್ರಾಮದ ನಿವಾಸಿ ಹಾಗೂ ಎಲೆಕ್ಟ್ರಿಷಿಯನ್​ ರಾಜನ್​ ಅವರ ಮನೆ ಈ ವಿಚಿತ್ರ ವಿದ್ಯಾಮಾನಕ್ಕೆ ಸಾಕ್ಷಿಯಾಗಿತ್ತು.

    ಕಳೆದ ಏಳು ತಿಂಗಳಿಂದಲೂ ರಾಜನ್​ ಮಗಳು ಸಾಜಿತಾ, ತನ್ನ ತಾಯಿ ವಿಲಾಸಿನಿ ಮೊಬೈಲ್​ನಲ್ಲಿ ಆಕೆಯ ಗಮನಕ್ಕೆ ಬಾರದಂತೆ ಮಸೇಜ್​ಗಳನ್ನು ಸ್ವೀಕರಿಸುತ್ತಿದ್ದಳು. ಅಚ್ಚರಿ ಏನೆಂದರೆ, ಮಸೇಜ್​ ಬಂದ ಕೂಡಲೇ ವಿದ್ಯುತ್​ ಸಾಧನಗಳು ಹಾಗೂ ಸ್ವಿಚ್​ ಬೋರ್ಡ್​ಗಳು ಇದ್ದಕ್ಕಿದ್ದಂತೆ ಸುಡಲು ಆರಂಭಿಸುತ್ತಿತ್ತು. ರಾಜನ್​ ಎಲೆಕ್ಟ್ರಿಷಿಯನ್​ ಆಗಿದ್ದರೂ ಸಹ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿರಲಿಲ್ಲ.

    ಫ್ಯಾನ್​ ಸ್ವಿಚ್​ ಆಫ್​ ಆಗುತ್ತದೆ ಎಂದು ಮಸೇಜ್​ ಬಂದ ಕೂಡಲೇ ಫ್ಯಾನ್​ ಆಫ್​ ಆಗುತ್ತಿತ್ತು. ಆನ್​ ಆಗುತ್ತದೆ ಎಂದು ಆನ್​ ಆಗುತ್ತಿತ್ತು. ಟವಿ ಕೂಡ ಆನ್​ ಆ್ಯಂಡ್​ ಆಫ್​ ಆಗುತ್ತಿತ್ತು. ಟ್ಯಾಂಕರ್​ನಿಂದ ನೀರು ಹೊರ ಸುರಿಯುತ್ತದೆ ಎಂದು ಕೂಡಲೇ ಅದೇ ರೀತಿ ಘಟನೆ ನಡೆಯುತ್ತಿತ್ತು. ಈ ಸಂಬಂಧ ಸೈಬರ್​ ಸೆಲ್​ಗೆ ಕುಟುಂಬದ ದೂರು ನೀಡಿತ್ತು.

    ತನಿಖೆ ನಡೆಸಿದ ಪೊಲೀಸರಿಗೆ ಯುವಕನೊಬ್ಬನ ಕೈವಾಡ ಇರುವುದು ಬಯಲಾಗಿದೆ. ಆ್ಯಪ್​ ಒಂದರ ಮೂಲಕ ಸಂತ್ರಸ್ತ ಕುಟುಂಬದ ಮೊಬೈಲ್​ ಸಂಪರ್ಕಿಸಿ, ಈ ಕೃತ್ಯ ಎಸಗುತ್ತಿದ್ದ. ಆರೋಪಿ ಯುವಕನ ಮೊಬೈಲ್​ ಫೋನ್​ನಲ್ಲಿ ವಿಶೇಷ ಆ್ಯಪ್ ಒಂದು ಇನ್​ಸ್ಟಾಲ್​ ಆಗಿದ್ದು, ಅದರ ಮೂಲಕವೇ ಸಂತ್ರಸ್ತ ಕುಟುಂಬದ ವಿದ್ಯುತ್​ ಸಾಧನಗಳನ್ನು ಹ್ಯಾಕ್​ ಮಾಡಿ ನಿಯಂತ್ರಣ ಮಾಡುತ್ತಿದ್ದ.

    ಇದನ್ನು ತಮಾಷೆಗಾಗಿ ಆತ ಮಾಡಿದನಂತೆ. ಆದರೆ, ಇಷ್ಟೊಂದು ಗಂಭೀರವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದು ಆರೋಪಿ ಯುವಕ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಟಿವಿ ಸೇರಿದಂತೆ ಇತರೆ ಗೃಹ ಬಳಕೆಯ ವಿದ್ಯುತ್​ ಸಾಧನಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಕೊಟ್ಟಾರಕ್ಕರ ಎಸ್​ಐ ಪ್ರಶಾಂತ್​ ತಿಳಿಸಿದ್ದಾರೆ. (ಏಜೆನ್ಸೀಸ್​)​

    ನಟಿ ರಶ್ಮಿಕಾ ಮಂದಣ್ಣರಿಂದಾಗಿ ಈ ಎರಡು ಸಿನಿಮಾಗಳಿಗೆ ಎದುರಾಯ್ತು ಸಂಕಷ್ಟ!

    ಮಂಗಳೂರು ಬ್ಲಾಸ್ಟ್​ ಎಫೆಕ್ಟ್​: ಮನೆ ಬಾಡಿಗೆಗ ಕೊಡುವ ಮುನ್ನ ಪೊಲೀಸ್​ ಠಾಣೆಯಲ್ಲಿ ಪಡೆಯಬೇಕು ಅನುಮತಿ…

    ಹುಡುಗಿಯರಿಬ್ಬರ ಆಡಿಯೋ ವೈರಲ್​ ಆದ ಬೆನ್ನಲ್ಲೇ ಸಂಬಂಧಕ್ಕೆ ಅಂತ್ಯವಾಡಿದ ಸನ್ನಿಧಿ! ವೈಷ್ಣವಿ ಮಾಡಿದ ಮನವಿ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts