More

    ಮಂಗಳೂರು ಬ್ಲಾಸ್ಟ್​ ಎಫೆಕ್ಟ್​: ಮನೆ ಬಾಡಿಗೆಗ ಕೊಡುವ ಮುನ್ನ ಪೊಲೀಸ್​ ಠಾಣೆಯಲ್ಲಿ ಪಡೆಯಬೇಕು ಅನುಮತಿ…

    ಮೈಸೂರು: ಮಂಗಳೂರು ಬಾಂಬ್​ ಬ್ಲಾಸ್ಟ್​ ಪ್ರಕರಣದ ಪ್ರಮುಖ ಆರೋಪಿ ಶಾರೀಕ್​ ಕೈಯಲ್ಲಿದ್ದ ಬಾಂಬ್​ಗೆ ಇಡೀ ಬಸ್​ ಸ್ಫೋಟ ಮಾಡುವ ಸಾಮರ್ಥ್ಯ ಇತ್ತು ಎನ್ನುವ ಮಾಹಿತಿ ತನಿಖಾ ಸಂಸ್ಥೆಗಳು ಈ ಹಿಂದೆ ನೀಡಿದ್ದವು. ಮಂಗಳೂರಿನಲ್ಲಿ ಬಾಂಬ್​ ಅನ್ನು ಬೇರೆ ಜಾಗದಲ್ಲಿ ಪ್ಲಾಂಟ್​ ಮಾಡಲು ರಿಕ್ಷಾದಲ್ಲಿ ಶಾರಿಕ್​ ಸ್ಫೋಟಕ ತೆಗೆದುಕೊಂಡು ಹೋಗುತ್ತಿದ್ದ. ಆದರೆ ಅದು ರಿಕ್ಷಾ ಒಳಗಡೆಯೆ ಸ್ಫೋಟವಾಗಿ ರಿಕ್ಷಾ ಚಾಲಕ ಮತ್ತು ಉಗ್ರ ಇಬ್ಬರೂ ಗಾಯಗೊಂಡಿದ್ದರು.

    ಇದೀಗ ಕುಕ್ಕರ್​​ ಬಾಂಬ್​ ಬ್ಲಾಸ್ಟ್​ನ ಎಫೆಕ್ಟ್​ ಬಾಡಿಗೆ ಮನೆ ಮಾಲೀಕರಿಗೂ ತಟ್ಟಿದೆ. ಇನ್ನು ಮನೆ ಮಾಲೀಕರು ಬಾಡಿಗೆ ಕೊಡುವ ಮೊದಲು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು ಎಂಬ ಹೊಸ ನಿಯಮ ಮೈಸೂರು ನಗರದಲ್ಲಿ ಜಾರಿಯಾಗಿದೆ.

    ಶಂಕಿತ ಉಗ್ರ ಶಾರಿಕ್ ನಕಲಿ ದಾಖಲೆ ನೀಡಿ ಬಾಡಿಗೆ ಪಡೆದ ಹಿನ್ನೆಲೆ ಮೈಸೂರು ನಗರ ಪೊಲೀಸರು ಈ ನೂತನ ನಿಯಮ ಜಾರಿ ಮಾಡಿದ್ದಾರೆ.
    ಇನ್ನು ಬಾಡಿಗೆಗೆ ಮನೆ ನೀಡಬೇಕು ಎಂದಿದ್ದರೆ ಹತ್ತಿರದ ಪೊಲೀಸ್​ ಠಾಣೆಯಲ್ಲಿ 100 ರೂ. ಪಾವತಿಸಿ ಅರ್ಜಿ ಪಡೆದು ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಬೇಕು. ಬ್ಯಾಚುಲರ್ ಮತ್ತು ಕುಟುಂಬಗಳಿಗೆ ಪಿಜಿ ನಡೆಸುವವರಿಗೆ ಪ್ರತ್ಯೇಕ ಅರ್ಜಿಯನ್ನು ಮೀಸಲು ಇರಿಸಲಾಗಿದೆ.

    ಜೊತೆಗೆ ಈಗಾಗಲೇ ಬಾಡಿಗೆ ಇರುವವರ ಮಾಹಿತಿಯನ್ನು ಠಾಣೆಗೆ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಎಲ್ಲಾ ಠಾಣೆಗಳಲ್ಲಿ ಕಟ್ಟು ನಿಟ್ಟಾಗಿ ಈ ನಿಯಮ ಪಾಲಿಸುವಂತೆ ನಗರ ಪೊಲೀಸ್ ಆಯುಕ್ತ ರಮೇಶ್ ಸೂಚನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts