More

    ನಿಮ್ಮ ಕಣ್ಣಿಗೊಂದು ಸವಾಲ್: ಈ​ ಚಿತ್ರದಲ್ಲಿ ಬಾಟಲಿ ಹಿಡಿದಿರುವ ಕೈಗಳೆಷ್ಟೆಂದು ಗುರುತಿಸಿದ್ರೆ ಫುಲ್​ ಮಾರ್ಕ್ಸ್​!

    ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವ ಹಾಗೂ ಗೊಂದಲ ಮೂಡಿಸುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರನ್ನು ಗೊಂದಲ’ಕ್ಕೀಡುಮಾಡಿದೆ.

    ಜೆನ್​ ಜೆಂಟಲ್​ಮನ್​ ಎಂಬುವರು ಟ್ವಿಟರ್​ನಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದು, ಈ ಚಿತ್ರದಲ್ಲಿ ನಾಲ್ಕು ಮಂದಿ ಇದ್ದಾರೆ ಎಂಬುದನ್ನು ನಿಜಕ್ಕೂ ನನ್ನಿಂದ ನಂಬಲೂ ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಸದ್ಯ ಫೋಟೋ ಭಾರಿ ವೈರಲ್​ ಆಗಿದ್ದು, ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್​​ ಮತ್ತು 35 ಸಾವಿರಕ್ಕೂ ಹೆಚ್ಚು ರೀಟ್ವೀಟ್​ ಗಿಟ್ಟಿಸಿಕೊಂಡಿದೆ.

    ಇದನ್ನೂ ಓದಿರಿ: ಕಾಲುವೆ ಅಗೆಯುವಾಗ ಕಾರ್ಮಿಕನಿಗೆ ಒಲಿಯಿತಾ ನಿಧಿ? ವೈರಲ್​ ಸುದ್ದಿ ಹಿಂದಿನ ಸತ್ಯಾಂಶ ಹೀಗಿದೆ…

    ಫೋಟೋದಲ್ಲಿ ಏನಿದೆ?: ಪಾದಯಾತ್ರಿಗಳ ಗುಂಪೊಂದು ಬೆಟ್ಟದ ಕೇಂದ್ರ ಭಾಗವೊಂದಕ್ಕೆ ಆಗಮಿಸಿ, ವಿಶ್ರಾಂತಿ ಪಡೆಯುವಾಗ ಚಿಯರ್​ ಅಪ್​ ಮಾಡಲು ತಮ್ಮ ಕಿಸೆಯಿಂದ ಬಾಟಲ್​ಗಳನ್ನು ತೆರೆಯುತ್ತಾರೆ. ಇದೇ ಚಿತ್ರ ಇದೀಗ ನೆಟ್ಟಿಗರನ್ನು ಗೊಂದಲಕ್ಕೆ ದೂಡಿದೆ. ಏಕೆಂದರೆ ಫೋಟೋದಲ್ಲಿ ನಾಲ್ಕು ಬಾಟಲ್​ಗಳು ಕಾಣುತ್ತಿದೆ. ಆದರೆ, ಮೂರೇ ಕೈಗಳು ಮಾತ್ರ ನೋಡುಗರಿಗೆ ಗೋಚರವಾಗುತ್ತಿದೆ. ಹಾಗಾದರೆ ಇನ್ನೊಂದು ಕೈ ಎಲ್ಲಿ ಎಂಬುದೇ ಅನೇಕರ ಪ್ರಶ್ನೆಯಾಗಿದ್ದು, ಇದಕ್ಕೆ ಉತ್ತರವೂ ಮುಂದಿದೆ…

    ಇದನ್ನೂ ಓದಿರಿ: ‘ರಾಹುಲ್​ ಗಾಂಧಿ ದಲಿತ ಯುವತಿಯನ್ನೇ ಮದುವೆಯಾಗಬೇಕು’

    ಫೋಟೋ ಬಗ್ಗೆ ಅನೇಕ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಮಂದಿ ಇದ್ದಾರೆ ಎಂಬುದನ್ನು ನಂಬಲು ನನ್ನಿಂದ ಆಗಲೇ ಇಲ್ಲ ಎಂದು ನೆಟ್ಟಿಗರೊಬ್ಬರು ತಿಳಿಸಿದ್ದರೆ, ಜೂಮ್​ ಮಾಡುವವರೆಗೂ ನನಗೆ ಇನ್ನೊಂದು ಕೈ ಇರುವುದನ್ನು ಗುರುತಿಸಲು ಸಾಧ್ಯವಾಗಲೇ ಇಲ್ಲ ಎಂದು ಮತ್ತೊಬ್ಬ ನೆಟ್ಟಿಗ ಹುಬ್ಬೇರಿಸಿದ್ದಾರೆ. ಹೀಗೆ ಅನೇಕರು ಫೋಟೋ ಕುರಿತು ಕಾಮೆಂಟ್​ ಮಾಡಿದ್ದಾರೆ.

    ಅಸಲಿಗೆ ಫೋಟೋದಲ್ಲಿರುವುದು ನಾಲ್ಕು ಮಂದಿ. ಮೂವರ ಕೈ ಸ್ಪಷ್ಟವಾಗಿ ಕಾಣುತ್ತದೆ. ಆದರೆ, ನಾಲ್ಕನೆ ವ್ಯಕ್ತಿಯ ಕೈ ಹಿನ್ನೆಲೆ ಚಿತ್ರಣಕ್ಕೆ ಹೊಂದಿಕೊಂಡಿರುವುದರಿಂದ ಗೋಚರವಾಗುವುದಿಲ್ಲ. ಆದರೆ, ಜೂಮ್​ ಮಾಡಿ ನೋಡಿದರೆ ಸ್ಪಷ್ಟವಾಗಿ ಕಾಣುತ್ತದೆ. (ಏಜೆನ್ಸೀಸ್​)

    ನಿಮ್ಮ ಕಣ್ಣಿಗೊಂದು ಸವಾಲ್​: ಈ ಚಿತ್ರದಲ್ಲಿರುವುದೇನು? ಬೀಚ್​ ಅಂದುಕೊಂಡರೆ ನಿಮ್ಮ ಊಹೆ ತಪ್ಪು!

    ತಮ್ಮ ಮೂತ್ರವನ್ನು ತಾವೇ ಕುಡಿದ ಅಮ್ಮ ಮಕ್ಕಳು! ನಿಮಗೂ ಆ ಮೆಸೇಜ್​ ಬಂದಿರುವುದು ನೋಡಿಕೊಳ್ಳಿ…

    ದಿಶಾ ರವಿ ಹಿಂದೂನಾ ಕ್ರಿಶ್ಚಿಯನ್ನಾ? ಆಕೆಯ ಸ್ನೇಹಿತರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts