ನಿಮ್ಮ ಕಣ್ಣಿಗೊಂದು ಸವಾಲ್​: ಈ ಚಿತ್ರದಲ್ಲಿರುವುದೇನು? ಬೀಚ್​ ಅಂದುಕೊಂಡರೆ ನಿಮ್ಮ ಊಹೆ ತಪ್ಪು!

ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವ ಹಾಗೂ ಗೊಂದಲ ಮೂಡಿಸುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರನ್ನು ‘ದಿಗ್ಭ್ರಮೆ’ ಮತ್ತು ‘ಗೊಂದಲ’ಕ್ಕೀಡುಮಾಡಿದೆ. ಫೋಟೋದಲ್ಲಿ ಏನಿದೆ?: ಚಿತ್ರದ ಮೊದಲ ನೋಟದಲ್ಲಿ ನಮಗೆ ಸಮುದ್ರ ತೀರದಂತೆ ಗೋಚರವಾಗುತ್ತದೆ. ಸಂಜೆ ಸಮಯದಲ್ಲಿ ಸೆರೆಹಿಡಿಯಲಾದ ತೀರ ಪ್ರದೇಶದ ಚಿತ್ರ ಎಂಬಂತೆ ಕಾಣುತ್ತದೆ. … Continue reading ನಿಮ್ಮ ಕಣ್ಣಿಗೊಂದು ಸವಾಲ್​: ಈ ಚಿತ್ರದಲ್ಲಿರುವುದೇನು? ಬೀಚ್​ ಅಂದುಕೊಂಡರೆ ನಿಮ್ಮ ಊಹೆ ತಪ್ಪು!