More

    ಏಕದಿನ​ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯ ಟ್ಯಾಗ್​ಲೈನ್​ ಪ್ರಕಟಿಸಿದ ಐಸಿಸಿ

    ನವದೆಹಲಿ: ಐಸಿಸಿ ಬಿಡುಗಡೆಗೊಳಿಸಿರುವ ವಿಶ್ವಕಪ್​ ಪ್ರಚಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಟೂರ್ನಿಯ ಟ್ಯಾಗ್​ಲೈನ್​ ಅನ್ನೂ ಇದು ಪ್ರಕಟಿಸಿದೆ. ‘ಎಲ್ಲದಕ್ಕೂ ಬೇಕಾಗಿರುವುದು ಒಂದು ದಿನ’ (ಆಲ್​ ಇಟ್​ ಟೇಕ್ಸ್​ ಇಸ್​ ಒನ್​ಡೇ) ಎಂಬುದು ಟೂರ್ನಿಯ ಪ್ರಮುಖ ಧ್ಯೇಯವಾಕ್ಯವಾಗಿರುತ್ತದೆ.

    ‘ಇತಿಹಾಸ ನಿರ್ಮಿಸುವುದಕ್ಕೂ, ಇತಿಹಾಸವಾಗುವುದರ ನಡುವಿನ ಅಂತರ ಒಂದು ದಿನ. ಆ ಒಂದು ದಿನದಲ್ಲಿ ಜೆರ್ಸಿ ಧರಿಸಲಾಗುತ್ತದೆ ಮತ್ತು ಎದೆಗಳು ಹೆಮ್ಮೆಯಿಂದ ಉಬ್ಬತ್ತವೆ. ಒಂದು ದಿನದಲ್ಲಿ ನೆನಪುಗಳು ಕೆತ್ತಲ್ಪಡುತ್ತವೆ. ಒಂದು ದಿನದಲ್ಲಿ ಭಯವನ್ನು ಜಯಿಸಲಾಗುತ್ತದೆ ಮತ್ತು ಸವಾಲುಗಳನ್ನು ಧೈರ್ಯದಿಂದ ಎದುರಿಸಲಾಗುತ್ತದೆ. ಸಂತೋಷದ ಉತ್ತುಂಗದಿಮದ ದುಃಖದ ತಗ್ಗುಗಳವರೆಗೆ ಒಂದು ದಿನದಲ್ಲಿ ಎಲ್ಲವನ್ನೂ ಸ್ವೀಕರಿಸಲಾಗುತ್ತದೆ. ಇದು ವಿಶ್ವಕಪ್​. ಇದುವರೆಗೆ ಕಂಡಿರುವ ಕನಸು ನನಸಾಗಲು ಬೇಕಾಗಿರುವುದು ಒಂದು ದಿನ’ ಎಂದು ಶಾರುಖ್​ ಖಾನ್​ ಐಸಿಸಿ ವಿಡಿಯೋದಲ್ಲಿ ವಿವರಿಸಿದ್ದಾರೆ.

    ಅಕ್ಟೋಬರ್​ 5ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ಹಾಲಿ ರನ್ನರ್​ಅಪ್​ ನ್ಯೂಜಿಲೆಂಡ್​ ನಡುವಿನ ಪಂದ್ಯದೊಂದಿಗೆ ಏಕದಿನ ವಿಶ್ವಕಪ್​ ಟೂರ್ನಿಗೆ ಚಾಲನೆ ಸಿಗಲಿದೆ. ಆತಿಥೇಯ ಭಾರತ ತಂಡ ಅಕ್ಟೋಬರ್​ 8ರಂದು ಚೆನ್ನೈನಲ್ಲಿ 5 ಬಾರಿಯ ವಿಶ್ವ ಚಾಂಪಿಯನ್​ ಆಸ್ಟ್ರೆಲಿಯಾ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಒಟ್ಟು 48 ಪಂದ್ಯಗಳನ್ನು ಒಳಗೊಂಡ ಟೂರ್ನಿಯ ಪಂದ್ಯಗಳು ದೇಶದ 10 ತಾಣಗಳಲ್ಲಿ ನಡೆಯಲಿವೆ. ನವೆಂಬರ್​ 19ರಂದು ಅಹಮದಾಬಾದ್​ನಲ್ಲಿ ಫೈನಲ್​ ಪಂದ್ಯ ನಿಗದಿಯಾಗಿದೆ.

    VIDEO: ಏಕದಿನ ವಿಶ್ವಕಪ್​ಗೆ ಶಾರುಖ್​ ಖಾನ್​ ವಿಶೇಷ ಪ್ರಚಾರ; ವಿಡಿಯೋ ವೈರಲ್​

    ಮಹಿಳಾ ಕ್ರಿಕೆಟರ್​ ಸ್ಮೃತಿ ಮಂದನಾ ಬರ್ತ್​ಡೇಗೆ ಬಾಂಗ್ಲಾದೇಶದಲ್ಲಿ ಸಪ್ರ್ರೈಸ್​ ನೀಡಿದ ಬಾಯ್​ಫ್ರೆಂಡ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts