More

    ಸೀಬೆಹಣ್ಣು ಕೀಳಲು ಮರ ಹತ್ತಿದ್ದವಳ ಕೊರಳಿಗೆ ವೇಲೇ ಉರುಳಾಗಿ ಸಾವು!

    ಚಾಮರಾಜನಗರ: ಸೀಬೆಹಣ್ಣು ಕೀಳುವ ವೇಳೆ‌ ಕೊರಳಿನಲ್ಲಿದ್ದ ವೇಲು ಕೊಂಬೆಗೆ ಸಿಲುಕಿ ಅಸ್ವಸ್ಥಗೊಂಡಿದ್ದ ಹುಡುಗಿ ಮೃತಪಟ್ಟಿದ್ದಾಳೆ. ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದ ಜಯೇಂದ್ರ ಎಂಬವರ ಪುತ್ರಿ, ಎಸ್.ವಿ.ಕೆ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಂಜನಾ(16) ಸಾವಿಗೀಡಾದವಳು.

    ಈಕೆಯ ಕುಟುಂಬ ತೋಟದ ಮನೆಯಲ್ಲಿ ವಾಸವಿದ್ದು, ಭಾನುವಾರ ತೋಟದಲ್ಲಿ ಬೆಳೆದಿದ್ದ ಸೀಬೆಹಣ್ಣು ಕೀಳಲು ಸಂಜನಾ ಮರ ಹತ್ತಿದ್ದಳು. ಹಣ್ಣನ್ನು ಕಿತ್ತು ಮರದಿಂದ ಇಳಿಯುವಾಗ ಆಕೆ ಧರಿಸಿದ್ದ ವೇಲು ಕೊಂಬೆಗೆ ಸಿಲುಕಿ ಕೊರಳಿಗೆ ಸುತ್ತಿಕೊಂಡಿದೆ. ಪರಿಣಾಮ ಬಾಲಕಿಗೆ ಉಸಿರು ಕಟ್ಟಿ ಪ್ರಜ್ಞಾಹೀನಳಾಗಿದ್ದಳು.

    ಇದನ್ನೂ ಓದಿ: ಚಿಕಿತ್ಸೆಗೆಂದು ದಾಖಲಾಗಿದ್ದ ಡಾಕ್ಟರ್​ ಬೆಳಗಾಗುವಷ್ಟರಲ್ಲಿ ಇಲ್ಲ!; ಪತ್ನಿಗೆ ಶವ ಸಿಗುವವರೆಗೂ ಆಸ್ಪತ್ರೆಯವರಿಗೆ ವಿಷ್ಯ ಗೊತ್ತಾಗ್ಲಿಲ್ಲ!

    ಜಮೀನಿನಲ್ಲಿ ಇದ್ದವರು ಇದನ್ನು ಗಮನಿಸಿದ್ದು, ಉಸಿರು ಕಟ್ಟಿ ನೇತಾಡುತ್ತಿದ್ದ ಬಾಲಕಿಯನ್ನು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಂಜನಾ ಮೃತಪಟ್ಟಳು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಶವ ವಾರಸುದಾರರಿಗೆ ಒಪ್ಪಿಸಲಾಗಿದೆ.

    ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts