More

    ವೀಳ್ಯದೆಲೆ ಬೆಳೆದವರ ಬಾಳು ಬಂಗಾರ

    ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ
    ಮಾರುಕಟ್ಟೆಯಲ್ಲಿ ವೀಳ್ಯದೆಲೆ ಬೆಲೆ ಗಗನಕ್ಕೇರಿದೆ. ಇದು ವೀಳ್ಯದೆಲೆ ಬೆಳೆಗಾರರಿಗೆ ಖುಷಿ ತಂದಿದ್ದರೂ ನೀರಿನ ಕೊರತೆ, ಹವಾಮಾನ ವೈಪರೀತ್ಯದಂತಹ ಹಲವು ಕಾರಣಗಳಿಂದ ಇಳುವರಿ ಕುಸಿದಿರುವುದು ರೈತರು ಮಮ್ಮಲ ಮರುಗುವಂತಾಗಿದೆ.


    ಕಳೆದ ವರ್ಷ ವೀಳ್ಯದೆಲೆ ಬೆಳೆಯುವ ಗದಗ, ಹಾವೇರಿ ಭಾಗದಲ್ಲಿ ಅತಿವೃಷ್ಟಿಯಿಂದಾಗಿ ತೇವಾಂಶ ಹೆಚ್ಚಳವಾಗಿ ಬೆಳೆ ಕೊಳೆತು ಬಹಳಷ್ಟು ತೋಟಗಳು ಹಾಳಾಗಿದ್ದವು. ಆದರೆ, ಈ ವರ್ಷ ಮಳೆ ಇಲ್ಲದಿದ್ದರೂ ನೀರಾವರಿ ನಂಬಿ ವೀಳ್ಯದೆಲೆ ಬೆಳೆದ ರೈತರ ಬಾಳು ಬಂಗಾರವಾಗಿದೆ.


    ತಾಲೂಕಿನಾದ್ಯಂತ 120 ಎಕರೆ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯಲಾಗಿದೆ. ಇಲ್ಲಿನ ಮಾರುಕಟ್ಟೆಗೆ ಸ್ಥಳೀಯ ರೈತರು ಬೆಳೆದ ಎಲೆಯಷ್ಟೇ ಅಲ್ಲದೆ, ಸವಣೂರ, ಹಾವೇರಿ ಮತ್ತು ಗದಗ ತಾಲೂಕಿನ ಯಲಿಶಿರುಂಧ ಭಾಗದಿಂದವೂ ನಿತ್ಯ ಮಾರುಕಟ್ಟೆಗೆ ಎಲೆ ಪೆಂಡಿಗಳು ಬರುತ್ತದೆ. ಈ ಮೊದಲು 100 ವೀಳ್ಯದೆಲೆಗೆ 75, 80ರಿಂದ 90 ರೂ.ಗಳಿದ್ದದ್ದು ಇದೀಗ 150 ರೂ.ಗಳ ಆಸುಪಾಸಿಗೆ ಬಂದಿದೆ. ಚಿಲ್ಲರೆ ಮಾರುಕಟ್ಟೆ, ಪಾನ್ ಬೀಡಾ ಅಂಗಡಿಯಲ್ಲಿ 10 ರೂಪಾಯಿಗೆ 4 ವೀಳ್ಯದೆಲೆ ಮಾರಲಾಗುತ್ತಿದೆ. ಅಲ್ಲದೆ, ಇದೀಗ ರಾಜಯೋಗದ ಶ್ರೇಷ್ಠಕಾಲವಾಗಿದ್ದು, ವಿವಿಧೆಡೆ ಜಾತ್ರೆ, ಹಬ್ಬ, ಮದುವೆ, ಗೃಹಪ್ರವೇಶದಂತಹ ಶುಭ ಕಾರ್ಯಗಳು ನಡೆಯುತ್ತಿರುವುದರಿಂದ ಬೇಡಿಕೆ ಹೆಚ್ಚಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.


    ವೀಳ್ಯದೆಲೆ ಬೆಳೆ ನಿರಂತರ ಆದಾಯ ತಂದು ಕೊಡುವ ಬೆಳೆಯಾದರೂ ಕಳೆದ ವರ್ಷ ಅತಿವೃಷ್ಟಿ ಮತ್ತು ಈ ವರ್ಷ ಬರಗಾಲದ ಜತೆಗೆ ಹವಾಮಾನ ವೈಪರೀತ್ಯದಿಂದ ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಉತ್ಪನ್ನದ ಕೊರತೆಯಿಂದಾಗಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಬೆಲೆ ಹೆಚ್ಚಳವಾಗಿದೆ. ಆದರೆ, ರೈತರಿಗೆ ಇದರ ಲಾಭ ತಟ್ಟದಂತಾಗಿದೆ. ಅಂತರ್ಜಲ ಮಟ್ಟ ಕುಸಿದಿದ್ದು, ಜೂನ್-ಜುಲೈವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ. | ಸುರೇಶ ಕುಂಬಾರ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ, ಲಕ್ಷೆ್ಮೕಶ್ವರ


    ಕಳೆದ ವರ್ಷ ವಿಪರೀತ ಮಳೆಯಿಂದ ತೋಟಗಳಲ್ಲಿ ತಿಂಗಳುಗಟ್ಟಲೆ ನೀರು ನಿಂತು ಅನೇಕ ರೈತರು ಎಲೆ ಬಳ್ಳಿ ಕೊಳೆತಿದ್ದರಿಂದ ತೋಟವನ್ನು ನಾಶಪಡಿಸಿದ್ದರು. ಅಳಿದುಳಿದ ತೋಟ ಸಂರಕ್ಷಿಸಿದ್ದು, ಮತ್ತೆ ಹೊಸದಾಗಿ ಎಲೆಬಳ್ಳಿ ಹಚ್ಚಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಹವಾಮಾನ ವೈಪರೀತ್ಯ ಮತ್ತು ನೀರಿನ ಕೊರತೆಯಿಂದ ಬೆಳೆ ಸಂರಕ್ಷಣೆ ಮತ್ತು ನಿರ್ವಹಣೆಯ ಕಷ್ಟದ ಜತೆಗೆ ಇಳುವರಿ ಸಂಪೂರ್ಣ ಕಡಿಮೆಯಾಗಿದೆ. | ಅಣ್ಣಪ್ಪ ಸಂಶಿ ವೀಳ್ಯದೆಲೆ ಬೆಳೆಗಾರ ಲಕ್ಷೆ್ಮೕಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts