More

    ಎಸ್ಕಲೇಟರ್ ಹತ್ತುವಾಗ ಅವಘಡ; ಮೂರನೇ ಮಹಡಿಯಿಂದ ಬಿದ್ದು ಮಗು ಸಾವು

    ಛತ್ತೀಸ್‌ಗಢ: ರಾಯ್‌ಪುರದ ಜನಪ್ರಿಯ ಮಾಲ್‌ನಲ್ಲಿ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿಯು ತನ್ನ ಒಂದು ವರ್ಷದ ಮಗುವನ್ನು ಆಕಸ್ಮಿಕವಾಗಿ ಮಡಿಲಿನಿಂದ ಬೀಳಿಸಿದ ಪರಿಣಾಮ ಸ್ಥಳದಲ್ಲಿಯೇ ಮಗು ಸಾವನ್ನಪ್ಪಿದೆ. ಈ ಘಟನೆ ಮಂಗಳವಾರ ಸಂಜೆ 7:30 ರಿಂದ 8 ಗಂಟೆಯ ನಡುವೆ ನಡೆದಿದೆ.

    ಕುಟುಂಬವೊಂದು ಮಾಲ್‌ಗೆ ಭೇಟಿ ನೀಡಲು ಹೋಗಿದೆ. ಇದೇ ವೇಳೆ ವ್ಯಕ್ತಿಯೋರ್ವರು ತನ್ನ ಒಂದು ವರ್ಷದ ಮಗುವನ್ನು ಮಡಿಲಲ್ಲಿಟ್ಟುಕೊಂಡು ಮೂರನೇ ಮಹಡಿಯಲ್ಲಿ ಎಸ್ಕಲೇಟರ್ ಹತ್ತುತ್ತಿದ್ದಾಗ ಹಾಗೆಯೇ ಎರಡನೇ ಮಗುವನ್ನು ಎಸ್ಕಲೇಟರ್ ಮೇಲೆ ಕರೆದುಕೊಂಡು ಹೋಗಲು ಕೈ ಚಾಚಿದಾಗ ಮಡಿಲಲ್ಲಿದ್ದ ಮಗು ಎತ್ತರದಿಂದ ಕೈಯಿಂದ ಜಾರಿ ಕೆಳಗೆ ಬಿದ್ದಿದೆ.

    ಈ ವ್ಯಕ್ತಿ ಮಾಲ್‌ನಲ್ಲಿ ಮಕ್ಕಳ ಜೊತೆ ತಿರುಗಾಡುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಕಂಡುಬಂದಿದ್ದು, ಮಡಿಲಲ್ಲೊಂದು ಮಗುವಿದೆ. ಇನ್ನೊಂದು ಮಗು ಎಸ್ಕಲೇಟರ್ ಹತ್ತಲು ಸಹಾಯ ಮಾಡಲು ಆ ವ್ಯಕ್ತಿ ಕೈ ಚಾಚಿದ್ದ. ಈ ವೇಳೆ ಮಡಿಲಿಂದ ಮುಗ್ಧ ಮಗು ಜಾರಿ ಕೆಳಗೆ ಬಿದ್ದಿದೆ. ತಕ್ಷಣ ಕುಟುಂಬಸ್ಥರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಸದ್ಯ ದೇವೇಂದ್ರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.

    ಕಳೆದ ತಿಂಗಳು ಹೈದರಾಬಾದ್‌ನಲ್ಲಿ ಇಂತಹುದೇ ಘಟನೆ ವರದಿಯಾಗಿತ್ತು. 14 ತಿಂಗಳ ಮಗು ಆಕಸ್ಮಿಕವಾಗಿ ತಾಯಿಯ ಮಡಿಲಿನಿಂದ ಬಿದ್ದು ಪ್ರಾಣ ಕಳೆದುಕೊಂಡಿತ್ತು. ಮಗುವಿನ ತಾಯಿ ಆಸ್ಪತ್ರೆಯಲ್ಲಿ ತಪಾಸಣೆ ಮುಗಿಸಿ ಮೆಡಿಕಲ್ ಶಾಪ್ ಕಡೆಗೆ ಹೋಗುತ್ತಿದ್ದಾಗ ಎಡವಿ ಬಿದ್ದಿದ್ದಾಳೆ. ಮಡಿಲಲ್ಲಿದ್ದ ಕಿರಿಯ ಮಗ ಬಿದ್ದು ತಲೆಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಬಾಲಕ ಮೃತಪಟ್ಟಿದ್ದಾನೆ.

    ಇಲ್ಲಿ ಹೋಳಿಯನ್ನು ಬಣ್ಣಗಳಿಂದ ಆಚರಿಸುವುದಿಲ್ಲ, ಚಿತಾಭಸ್ಮದಿಂದ…300 ವರ್ಷಗಳಿಗಿಂತಲೂ ಹಳೆಯದು ಈ ಸಂಪ್ರದಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts