More

    ಇಲ್ಲಿ ಹೋಳಿಯನ್ನು ಬಣ್ಣಗಳಿಂದ ಆಚರಿಸುವುದಿಲ್ಲ, ಚಿತಾಭಸ್ಮದಿಂದ…300 ವರ್ಷಗಳಿಗಿಂತಲೂ ಹಳೆಯದು ಈ ಸಂಪ್ರದಾಯ!

    ನವದೆಹಲಿ: ಹೋಳಿ ಹಬ್ಬವನ್ನು ‘ಬಣ್ಣಗಳ ಹಬ್ಬ’ ಎಂದೇ ಕರೆಯುತ್ತಾರೆ. ದೇಶದ ಹಲವೆಡೆ ಈಗಾಗಲೇ ಹೋಳಿ ಹಬ್ಬ ಆರಂಭವಾಗಿದೆ. ಮಥುರಾ-ವೃಂದಾವನ-ಬರ್ಸಾನಾದಲ್ಲಿ ಲತ್ಮಾರ್ ಹೋಳಿ, ಹೂಗಳ ಹೋಳಿ ಮತ್ತು ಲಡ್ಡುಗಳ ಹೋಳಿಗಳನ್ನು ಆಡಲಾಗುತ್ತದೆ. ಇನ್ನು ವೃಂದಾವನದಲ್ಲಿ ರಂಗ್​​​ಭರಿ ಏಕಾದಶಿಯ ದಿನದಂದು ‘ಠಾಕೂರ್ ಬಂಕೆ ಬಿಹಾರಿ ಜಿ’ ಬಣ್ಣಗಳಿಂದ ಹೋಳಿ ಆಡುತ್ತಾರೆ.

    ಆದರೆ ಇಲ್ಲೊಂದು ಕಡೆ ಹೋಳಿ ಆಡುತ್ತಿರುವುದು ಬಣ್ಣಗಳಿಂದಲ್ಲ, ಚಿತಾಭಸ್ಮದಿಂದ. ಹೌದು, ನಾವಿಂದು ಹೇಳುತ್ತಿರುವುದು ಕಾಶಿಯ ಬಗ್ಗೆ. ಅಲ್ಲಿ ಭೋಲೆನಾಥ್ ಅಂದರೆ ಶಿವನು ಸ್ಮಶಾನದಲ್ಲಿ ತನ್ನ ಪ್ರೇತಗಳೊಂದಿಗೆ ಹೋಳಿ ಆಡಿದ್ದರಂತೆ. ಈ ಮಸಣ ಹೋಳಿಯು ಇತರ ಬಣ್ಣದ ಹೋಳಿಗಿಂತ ಭಿನ್ನವಾಗಿದ್ದು ಹೇಗೆಂದು ತಿಳಿಯೋಣ ಬನ್ನಿ…

    ನೀವು ಈ ವಿಶಿಷ್ಟ ಹೋಳಿಯಲ್ಲಿ ಪಾಲ್ಗೊಳ್ಳಲು ಬಯಸಿದರೆ, ಇದಕ್ಕಾಗಿ ನೀವು ವಾರಣಾಸಿಗೆ ಹೋಗಬೇಕಾಗುತ್ತದೆ. ನಾಳೆ ಅಂದರೆ ಮಾರ್ಚ್ 21 ರಂದು ಕಾಶಿಯಲ್ಲಿ ಚಿತಾಭಸ್ಮದ ಹೋಳಿ ಆಡಲಾಗುತ್ತದೆ. ಜನರು ಮಣಿಕರ್ಣಿಕಾ ಘಾಟ್‌ನಲ್ಲಿ ಚಿತಾಭಸ್ಮದೊಂದಿಗೆ ಹೋಳಿ ಆಡುತ್ತಾರೆ ಮತ್ತು ಭಸ್ಮವನ್ನು ಪರಸ್ಪರ ಹಚ್ಚಿಕೊಳ್ಳುತ್ತಾರೆ. ಹೆಚ್ಚಾಗಿ ಈ ಹೋಳಿಯನ್ನು ಮಣಿಕರ್ಣಿಕಾ ಘಾಟ್‌ನಲ್ಲಿ ಸತ್ತವರ ಮಧ್ಯೆ ಆಡಲಾಗುತ್ತದೆ.

    ಇಲ್ಲಿ ಹೋಳಿಯನ್ನು ಬಣ್ಣಗಳಿಂದ ಆಚರಿಸುವುದಿಲ್ಲ, ಚಿತಾಭಸ್ಮದಿಂದ…300 ವರ್ಷಗಳಿಗಿಂತಲೂ ಹಳೆಯದು ಈ ಸಂಪ್ರದಾಯ!

    ಐತಿಹಾಸಿಕ ಕಥೆಯೇನು?
    ಶಿವನು ತನ್ನ ಪತ್ನಿ ಪಾರ್ವತಿಯೊಂದಿಗೆ ಕಾಶಿಗೆ ಬಂದನು. ಪಾರ್ವತಿಯೊಂದಿಗೆ ಮಾತ್ರ ಹೋಳಿ ಆಡಿದನು. ಆದರೆ ಶಿವನು ಪ್ರೇತಗಳೊಂದಿಗೆ ಹೋಳಿ ಆಡಲು ಸಾಧ್ಯವಾಗಲಿಲ್ಲ ಎಂದು ನಂಬಲಾಗಿದೆ. ಅದರ ನಂತರ ಮರುದಿನ ಅವರು ಮಣಿಕರ್ಣಿಕಾ ಘಾಟ್‌ನಲ್ಲಿ ಪ್ರೇತಗಳೊಂದಿಗೆ ಹೋಳಿ ಆಡಿದರು. ಅಂದಹಾಗೆ ಈ ಹೋಳಿಯನ್ನು ಆಡುವವರ ತಲೆಯಿಂದ ಅಕಾಲಿಕ ಮರಣದ ನೆರಳು ತೊಲಗುತ್ತದೆ ಮತ್ತು ಅವನ ದೇಹವು ಸಹ ಆರೋಗ್ಯಕರವಾಗಿರುತ್ತದೆ ಎಂದು ನಂಬಲಾಗಿದೆ. ಕಾಶಿಯಲ್ಲಿ ಶತಮಾನಗಳಿಂದ ಈ ಸಂಪ್ರದಾಯವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

    ಅಘೋರಿಗಳ ಮೆರವಣಿಗೆ ಆರಂಭ
    ಮಸಣ ಹೋಳಿ ವಿಶೇಷವಾಗಿಸಲು, ಅಘೋರಿಗಳ ಮೆರವಣಿ ನಡೆಯುತ್ತದೆ. ಅಘೋರಿಗಳು ಮಾತ್ರವಲ್ಲದೆ ಸಾಮಾನ್ಯ ಜನರು ಸಹ ಬಾಬಾ ಭೋಲೆನಾಥರ ಹೆಸರನ್ನು ಹೇಳಿಕೊಂಡು ಈ ಹೋಳಿಯನ್ನು ಆಚರಿಸುತ್ತಾರೆ. ಪ್ರತಿ ವರ್ಷ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ.

    ಹೇಗಿರುತ್ತದೆ ಈ ಆಚರಣೆ?
    ವಾರಣಾಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಮಸಣ ಹೋಳಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇದು ಇಲ್ಲಿನ ಪ್ರಸಿದ್ಧ ಸ್ಮಶಾನ ಸ್ಥಳವಾಗಿದೆ. ಬೆಳಗ್ಗೆಯಿಂದಲೇ ಇಲ್ಲಿ ಜನಸಾಗರವೇ ಸೇರಲಾರಂಭಿಸುತ್ತದೆ. ಸಾಧುಗಳು ಮತ್ತು ಶಿವಭಕ್ತರ ಗುಂಪು ಶಿವನನ್ನು ಪೂಜಿಸಿ ಹವನ ಮಾಡುತ್ತಾರೆ. ಭಜನೆ ಮತ್ತು ಕೀರ್ತನೆಯೊಂದಿಗೆ ನೃತ್ಯವನ್ನೂ ಆಯೋಜಿಸಲಾಗಿದೆ. ನಂತರ ಚಿತಾಭಸ್ಮದಿಂದ ಹೋಳಿ ಆಡಲಾಗುತ್ತದೆ.

    ಮಸಣ ಹೋಳಿ ಆಚರಣೆಯು ಸಾವನ್ನು ದುಃಖವಾಗಿ ನೋಡದೆ, ಮೋಕ್ಷವನ್ನು ಪಡೆಯುವ ಮಾರ್ಗವಾಗಿ ನೋಡಲು ಹೇಳುತ್ತದೆ. ಈ ಹೋಳಿಯನ್ನು ನೀವು ಹಿಂದೆಂದೂ ನೋಡಿಲ್ಲದಿದ್ದರೆ, ಈ ಬಾರಿ ಅದನ್ನು ನೋಡಲು ನೀವು ಯೋಜಿಸಬಹುದು. ಭಾರತದ ಹೆಚ್ಚಿನ ನಗರಗಳಿಂದ ವಾರಣಾಸಿಗೆ ರೈಲುಗಳು ಮತ್ತು ವಿಮಾನಗಳಿವೆ. ನೋಡಿ, ಈ ಬಾರಿ ವಿಭಿನ್ನ ರೀತಿಯ ಹೋಳಿಯನ್ನು ಅನುಭವಿಸಿ.

    ಅದ್ಭುತ! ಬಾಲಕನಿಗೆ ಥೇಟ್ ರಾಮಲಲ್ಲಾ ಮೂರ್ತಿಯ ಹಾಗೆಯೇ ಮೇಕಪ್ ಮಾಡಿದ ಆರ್ಟಿಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts