More

    ಕೊಚ್ಚಿಹೋದ ಗದ್ದಿಹಳ್ಳದ ಬಾಂದಾರಗಳು, ನೀರು ಸಂಗ್ರಹ ಕೊರತೆ

    ಶಿವಾನಂದ ಹಿರೇಮಠ, ಗದಗ
    ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳ ನಿರ್ಲಕ್ಷ$್ಯದಿಂದ ತಾಲೂಕಿನ 8 ಹಳ್ಳಿಗಳ ಜನ, ಜಾನುವಾರುಗಳಿಗೆ ನೀರಿನ ಕೊರತೆ ಎದುರಾಗಿದೆ. ಇಲಾಖೆ ಅಧಿಕಾರಿಗಳು ಮುಂಜಾಗ್ರತೆ ವಹಿದ್ದರೆ, ಹಿಂಗಾರಿನ ಬೆಳೆಗಳಿಗೆ, ದನ, ಕರುಗಳಿಗೆ, ಮೇವು ಹಾಗೂ ಕುರಿಗಾಹಿಗಳಿಗೆ ನೀರನ ಬರ ನೀಗಿಸಬಹುದಿತ್ತು. ಪ್ರಸ್ತುತ ಬೀಕರ ಬರದಿಂದ ಈ ಗ್ರಾಮಗಳಲ್ಲಿನ ಜನರಿಗೆ ನೀರಿನ ಅಭಾವ ಹೇಳತೀರದಾಗಿದೆ. ಕೃಷಿ ಚಟುವಟಿಕೆಗಳ ಮೇಲು ಅಡ್ಡ ಪರಿಣಾಮ ಬೀರಿದ್ದು, ಹಿಂಗಾರಿನ ಬೆಳೆಗಳಿಗೆ ನೀರಿಲ್ಲದಂತಾಗಿದೆ.
    ಏನಿದು ಪ್ರಕರಣ?
    ತಾಲೂಕಿನ ನಾಗಾವಿ ಗ್ರಾಮದ ಬಳಿ ಡಿಸೆಂಬರ್​ 2022, ಸೆ.5 ರಂದು ರಂದು ರಾಜ್ಯದಲ್ಲೇ ಅತೀ ಹೆಚ್ಚು ಬಿದ್ದು, ನಾಗಾವಿ ಮತ್ತು ಬೆಳದಡಿ ಗ್ರಾಮದ ಮಧ್ಯದ ರಸ್ತೆ ಕೊಚ್ಚಿಹೋಗಿ ಅಂದಾಜು 100 ಮೀಟರ್​ ಗೂ ಅಧಿಕ ಕಂದಕ ನಿರ್ಮಾಣವಾಗಿತ್ತು. ಮಳೆ ರಭಸಕ್ಕೆ ಪಕ್ಕದ ಗದ್ದಿಹಳ್ಳ ತುಂಬಿ ಹರಿದು ಈ ಭಾಗದ ಸುಮಾರು 12ಕ್ಕೂ ಅಧಿಕ ಬಾಂದಾರಗಳು ಜಖಂಗೊಂಡಿದೆ. ಕೆಲ ಬಾಂದಾರಗಳು ಸಂಪೂರ್ನ ಜಖಂಗೊಂಡರೆ, ಮತ್ತು ಕೆಲವು ದುರಸ್ಥಿ ಮಾಡುವ ಹಂತಕ್ಕಿವೆ. ಬಾಂದಾರಗಳ ಅಕ್ಕಪಕ್ಕದ ಒಡ್ಡುಗಳು ಕೊಚ್ಚಿಹೋಗಿ ನೀರು ನಿಲ್ಲದಂತಾಗಿದೆ.
    8 ಹಳ್ಳಿಗಳಿಗೆ ಸಮಸ್ಯೆ:
    ಈ ಭಾಗದಲ್ಲಿ ದೊಡ್ಡ ಹಳ್ಳಗಳಲ್ಲಿ ಗದ್ದಿಹಳ್ಳದ ಬಾಂದಾರಗಳು ದುಸ್ಥಿತಿಯಲ್ಲಿರುವ ಹಿನ್ನೆಲೆ ನೀರು ಸಂಗ್ರಹ ಆಗುತ್ತಿಲ್ಲ. ಬಾಂದಾರ ದುರಸ್ಥಿ ಮಾಡದ ಹಿನ್ನೆಲೆ ಹಳ್ಳದ ಅಕ್ಕಪಕ್ಕದ ಕೊಳುವೆ ಬಾವಿಗಳು ಬತ್ತುತ್ತಿವೆ. ನಾಗಾವಿ, ಕಳಸಾಪುರು, ಅಡವಿಸೋಮಾಪೂರ, ಸಂಭಾಪುರ, ಹಾತಲಗೇರಿ, ನೀರಲಗಿ, ಬೆನಕೊಪ್ಪ ಗ್ರಾಮ ಸೇರಿದಂತೆ ಇತರೆ ಗ್ರಾಮಕ್ಕೆ ಹೊಂದಿಕೊಂಡಂತೆ ಹಳ್ಳದ ಪಕ್ಕದ ಹೊಲಗದ್ದೆಗಳಲ್ಲಿ ಬೆಳೆಯುತ್ತಿದ್ದ ಈರುಳ್ಳಿ, ಮೆಣಸಿನಕಾಯಿ, ಹೆಸರು, ಕಡಲರ, ಶೇಂಗಾ, ಗೋವಿನ ಜೋಳ ಮತ್ತು ಹಿಂಗಾರಿನ ಬೆಳೆಗಳಿಗೆ ಈ ವರ್ಷ ನೀರಿಲ್ಲದಂತಾಗಿದೆ. ಪರೋಕ್ಷವಾಗಿ ರೈತರ ಆಥಿರ್ಕ ಸ್ಥಿತಿಯ ಮೇಲೂ ಪರಿಣಾಮ ಬೀರಿದೆ. ಬಾಂದಾರಗಳು ಹಾಳಾಗಿ ವರ್ಷವೇ ಕಳೆದರೂ ಇಲಾಖಾ ಅಧಿಕಾರಿಗಳು ದುರಸ್ಥಿಗಾಗಿ ಇನ್ನೂ ಕ್ರೀಯಾ ಯೋಜನೆಯನ್ನೇ ತಯಾರಿಸಿಲ್ಲ. ಸಣ್ಣ ನೀರಾವರಿ ಇಲಾಖೆ ನಿಷ್ಕಾಳಜಿಯಿಂದ ಪ್ರಸ್ತು ಬೇಸಿಗೆಯಲ್ಲಿ ರೈತರು ಮತ್ತುಷ್ಟು ಋಣಾತ್ಮಕ ಅನುಭವ ಹೊಂದುವಂತಾಗಿದೆ.

    ಬಾಕ್ಸ್​:
    ಸೆ.5 ರಂದು ರಾತ್ರಿ ತಾಲೂಕಿನ ನಾಗಾವಿ ಬಳಿ ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಬಿದ್ದಿತ್ತು. ಶಮಮಾನದಲ್ಲಿ ಅದೇ ಹೆಚ್ಚು ಪ್ರಮಾಣದ ಮಳೆ ಆಗಿತ್ತು. ಸೆ.11 ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸೆ.28ಕ್ಕೆ ಇಬ್ಬರೂ ಬೈಕ್​ ಸವಾರರು ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದರು.

    ಬಾಕ್ಸ್​:
    ಪ್ರತಿ ಬಾಂದಾರಗಳಿಗೆ 20 ರಿಂದ 50 ಲಕ್ಷ ವೆಚ್ಚ ಭರಿಸಿ ನಿಮಿರ್ಸಲಾಗಿದೆ. ಸಣ್ಣ ನೀರಾವರಿ ಇಲಾಖೆ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದಿಂದ ಎಸ್​ಸಿಪಿ ಯೋಜನೆಯಡಿ ಈ ಬಾಂದಾರಗಳನ್ನು ನಿಮಿರ್ಸಲಾಗಿದೆ.ಪರಿಶಿಷ್ಠ ಜಾತಿ ಮತ್ತು ಪಂಗಡ ಸಮುದಾಯದ ಹೊಲಗದ್ದೆಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ಕೆಲ ಬಾಂದಾರಗಳನ್ನು ನಿಮಿರ್ಸಲಾಗಿದ್ದು, ನಿಯಮದಂತೆ ಶ್ರೀದಲ್ಲಿ ಬಾಂದಾರ ದುರಸ್ಥಿ ಕೈಗೊಳ್ಳಬೇಕು.

    ಕೋಟ್​:
    ಬೀರು ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದ ಹಿನ್ನೆಲೆ, ಬಾಂದಾರಗಳ ಮಹತ್ವ ಈಗ ಅರಿವಿಗೆ ಬರುತ್ತಿದೆ. ಜಮೀನಿನಲ್ಲಿ ಇರುವ ಕುರಿಗಾಹಿಗಳಿಗೆ ಸಮಸ್ಯೆ ಹೇಳ ತೀರದು. ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕಿತ್ತು. ಬಾಂದಾರ್​ ಪಕ್ಕದಲ್ಲೇ ನಮ್ಮ ಜೀಮಿನು ಇದ್ದಿ, ಬೆಳೆಗೆ ನೀರಿನ ಕೊರತೆ ಎದುರಾಗಿದೆ.
    – ಕೃಷ್ಣ ಪರಾಪುರೆ, ನಗರಸಭೆ ಸದಸ್ಯ

    ಕೋಟ್​:
    ನೀರಿನ ಬೀಕರತೆ ಸೃಷ್ಟಿ ಆಗಿದೆ. ಬಾಂದಾರಗಳನ್ನು ಈಗಲೇ ದುರಸ್ಥಿ ಮಾಡಿಸಿದರೇ ಮುಂಬರುವ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಅಕ್ಕಪಕ್ಕದ ಹಳ್ಳಿಗಳ ಜನ, ಜಾನುವಾರುಗಳಿಗೆ ನೀರು ಲಭಿಸುವುದಲ್ಲದೇ ಅಂತರ್ಜಲ ಮಟ್ಟ ಅಧಿಕವಾಗುತ್ತದೆ.
    – ಬಿ.ಎಸ್​. ಚಿಂಚಲಿ, ರೈತ, ನಾಗಾವಿ ಗ್ರಾಮ

    ಕೋಟ್​
    ಬಾಂದಾರ ದುರಸ್ಥಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಅನುಮೋದನೆ ಸಿಕ್ಕಿಲ್ಲ. ಅನುಮೋದನೆ ದೊರೆತ ನಂತರ ಶ್ರೀದಲ್ಲಿ ಕಾಮಗಅರಿ ಆರಂಭಿಸಲಾಗುವುದು.
    ಚಂದ್ರಶೇಖರ್​ ನಾಗಶೆಟ್ಟಿ, ಏಇಇ
    ಸಣ್ಣ ನೀರಾವರಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts