More

    “ಓ ನನ್ನ ಮಗನೇ,.. ದೇವರು ನಿನ್ನನ್ನು ಆಶೀರ್ವದಿಸಲಿ” ಎಂದಿದ್ದೇಕೆ ಹಮಾಸ್​ ಉಗ್ರನ ತಂದೆ?

    ಜೆರುಸಲೆಮ್: ಅ.7 ರಂದು ಇಸ್ರೇಲ್​ ಮೇಲೆ ನಡೆಸಿದ ದಾಳಿಯಲ್ಲಿ ಯಹೂದಿಗಳನ್ನು ಹತ್ಯೆಮಾಡಿದ ಬಗ್ಗೆ ಹಮಾಸ್​ ಕಾರ್ಯಕರ್ತನೊಬ್ಬ ತನ್ನ ಕುಟುಂಬದೊಂದಿಗೆ ಬಡಾಯಿ ಕೊಚ್ಚಿಕೊಳ್ಳುವ ಆಡಿಯೋವನ್ನು ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್​) ಬಿಡುಗಡೆ ಮಾಡಿದೆ, ಆ ಕಾರ್ಯಕರ್ತ ತನ್ನ ತಂದೆ, ತಾಯಿ ಜತೆ ನಡೆಸುವ ಸಂಭಾಷಣೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಇಸ್ರೇಲ್​ ಪ್ರಧಾನಿ ನೆತನ್ಯಾಹು ಪುತ್ರ ಯೈರ್ ಅಮೆರಿಕದಲ್ಲಿರುವರೇ?
    “ನೋಡಿ ನಾನು ನನ್ನ ಕೈಯಿಂದಲೇ ಎಷ್ಟು ಮಂದಿಯನ್ನು ಕೊಂದಿದ್ದೇನೆ! ನಿಮ್ಮ ಮಗ ಯಹೂದಿಗಳನ್ನು ಕೊಂದಿದ್ದೇನೆ!,” ಎಂದು ಆತ ಹೇಳುತ್ತಾನೆ. ಮುಂದುವರಿದು “ತಲೆ ಎತ್ತಿಬಿಡು ಅಪ್ಪಾ, ತಲೆ ಎತ್ತಿಕೊಳ್ಳಿ’’ ಎನ್ನುತ್ತಾನೆ.

    “ಅಪ್ಪಾ, ನಾನು ಯಹೂದಿ ಮಹಿಳೆಯ ಫೋನ್‌ನಿಂದ ಮಾತನಾಡುತ್ತಿದ್ದೇನೆ. ನಾನು ಅವಳನ್ನು ಕೊಂದು ಅವಳ ಗಂಡನನ್ನು ಕೊಂದಿದ್ದೇನೆ” ಎಂದು ಅವನು ಹೇಳುತ್ತಾನೆ. ಇದಕ್ಕೆ ಅವನ ತಂದೆ, “ಓ ನನ್ನ ಮಗನೇ, ದೇವರು ನಿನ್ನನ್ನು ಆಶೀರ್ವದಿಸಲಿ” ಎಂದು ಹೇಳುತ್ತಾನೆ. ನಂತರ ಆ ವ್ಯಕ್ತಿ ತನ್ನ ತಾಯಿಗೆ ಕರೆ ಸ್ವೀಕರಿಸಲು ಹೇಳುತ್ತಾನೆ. ಆಕೆಗೆ “ಅಮ್ಮಾ, ನಿಮ್ಮ ಮಗ ಹೀರೋ ಆಗಿದ್ದಾನೆ” ಎನ್ನುತ್ತಾನೆ. ಇದಕ್ಕೆ ಆ ಮಹಿಳೆ “ಅದು ಮಹಮೂದ್ ಹಿಂತಿರುಗುವ ಭರವಸೆ” ಎಂದು ಪ್ರತಿಕ್ರಿಯಿಸುತ್ತಾಳೆ,

    ಬಳಿಕ ಹಮಾಸ್​ ಕಾರ್ಯಕರ್ತ ತನ್ನ ವಾಟ್ಸಾಪ್ ಅನ್ನು ಪರಿಶೀಲಿಸಲು ತನ್ನ ಹೆತ್ತವರನ್ನು ಕೇಳುತ್ತಾನೆ. “ನಾನು ಕೊಂದವರನ್ನು ಅದರಲ್ಲಿ ನೋಡಿ, ನನ್ನ ಓಪನ್​ ಮಾಡಿ.” ಎನ್ನುತ್ತಾನೆ.

    ಇನ್ನು ಕಳೆದ ವಾರ ಇಸ್ರೇಲ್‌ನಲ್ಲಿ ಹಮಾಸ್ ಕಾರ್ಯಕರ್ತರು ನಾಗರಿಕರನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡ ವೀಡಿಯೋವನ್ನು ಇಸ್ರೇಲ್ ಬಿಡುಗಡೆ ಮಾಡಿದೆ.

    ವೀಡಿಯೊದಲ್ಲಿ ಇಸ್ರೇಲಿ ನಾಗರಿಕರನ್ನು ಒತ್ತೆಯಾಳಾಗಿ ತೆಗೆದುಕೊಂಡಿದ್ದಕ್ಕಾಗಿ ಸ್ಟೈಫಂಡ್ ನೀಡುವುದಾಗಿ ಹಮಾಸ್​ ಉಗ್ರರು ಭರವಸೆ ನೀಡಿದ್ದಾರೆ. “ಯಾರು ಒತ್ತೆಯಾಳನ್ನು ಅಪಹರಿಸಿ ಅವರನ್ನು ಗಾಜಾಕ್ಕೆ ಕರೆತರುತ್ತಾರೋ ಅವರಿಗೆ $10,000 ಸ್ಟೈಫಂಡ್ ಮತ್ತು ಅಪಾರ್ಟ್‌ಮೆಂಟ್ ಸಿಗುತ್ತದೆ” ಎಂದು ಹಮಾಸ್ ಕಾರ್ಯಕರ್ತರೊಬ್ಬರು ವೀಡಿಯೊದಲ್ಲಿ ಹೇಳುತ್ತಿರುವುದು ಕೇಳಿಬರುತ್ತಿದೆ.

    ವಯಸ್ಸಾದವರು ಮತ್ತು ಮಕ್ಕಳನ್ನು ಅಪಹರಿಸುವಂತೆ ತಮ್ಮ ನಿರ್ವಾಹಕರಿಂದ ನಿರ್ದಿಷ್ಟವಾಗಿ ಸೂಚಿಸಲಾಗಿದೆ ಎಂದು ಅವರು ಹೇಳುತ್ತಾರೆ.
    ಹಮಾಸ್ ಉಗ್ರರು ಅ.7 ರಂದು ಇಸ್ರೇಲ್ ಮೇಲೆ ದಾಳಿ ನಡೆಸಿ ಕನಿಷ್ಠ 1,400 ಜನರನ್ನು ಕೊಂದಿತು, ಪ್ಯಾಲೇಸ್ತೇನ್​ ಗುಂಪಿನ ದಾಳಿಗೆ ಪ್ರತೀಕಾರವಾಗಿ ಇಸ್ರೇಲಿ ಬಾಂಬ್ ದಾಳಿಗಳಲ್ಲಿ 5,000 ಕ್ಕೂ ಹೆಚ್ಚು ಪ್ಯಾಲೆಸ್ತೇನಿಯನ್ನರು ಮೃತಪಟ್ಟಿದ್ದಾರೆ.

    ಇಸ್ರೇಲ್-ಹಮಾಸ್ ಯುದ್ಧ: ಉಗ್ರರನ್ನು ಹೊಗಳಿದ್ದಕ್ಕೆ ನಟಿ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts