More

    ಇಸ್ರೇಲ್​ ಪ್ರಧಾನಿ ನೆತನ್ಯಾಹು ಪುತ್ರ ಯೈರ್ ಅಮೆರಿಕದಲ್ಲಿರುವರೇ?

    ಜೆರುಸಲೆಮ್: ಹಮಾಸ್ ವಿರುದ್ಧದ ಹೋರಾಟಕ್ಕೆ ಇಸ್ರೇಲ್​ನಲ್ಲಿ ಸುಮಾರು 4 ಲಕ್ಷ ಯುವಕರು ಕೈಜೋಡಿಸಿದ್ದಾರೆ. ಆದರೆ ಆ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪುತ್ರ ಯೈರ್ ಅಮೆರಿಕದಲ್ಲಿ ಉಳಿದುಕೊಂಡಿದ್ದಾರೆಯೇ? ಯುದ್ಧದ ಸಂದರ್ಭದಲ್ಲಿ ಹೀಗೊಂದು ಪ್ರಶ್ನೆ ಈಗ ಹುಟ್ಟಿಕೊಂಡಿದೆ.

    ಇದನ್ನೂ ಓದಿ: ವಿಶ್ವಕಪ್ ನ ಇನ್ನೆರಡು ಪಂದ್ಯಗಳಿಗೆ ಹಾರ್ದಿಕ್ ಪಾಂಡ್ಯ ಲಭ್ಯವಾಗುವುದು ಅನುಮಾನ?

    ಇಸ್ರೇಲ್‌ ಮೇಲೆ ಹಮಾಸ್​ ಉಗ್ರರು ಅ.7ರ ಹಠಾತ್ ದಾಳಿ ನಡೆಸಿದ್ದರಿಂದ 1,400 ಜನರನ್ನು ಬಲಿಯಾದರು. ಬಳಿಕ ಇಸ್ರೇಲ್​ ಸೇನೆ ಯುದ್ಧ ಸಾರಿದಾಗ ಗಾಜಾದಲ್ಲಿ 5,000 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ದಿನೇ ದಿನೆ ಘರ್ಷಣೆ ಜೋರಾಗುತ್ತಿದ್ದು, ಹಮಾಸ್ ವಿರುದ್ಧದ ಹೋರಾಟದಲ್ಲಿ ಸೇರಲು ಆ ದೇಶವಾಸಿಗಳು ಮನೆಗೆ ದಾವಿಸಿ ಬರುತ್ತಿರುವಾಗ ಪ್ರಧಾನಿ ಪುತ್ರ ಯೈರ್(32) ಈ ವರ್ಷಾರಂಭದಲ್ಲಿ ಫ್ಲೋರಿಡಾಕ್ಕೆ ತೆರಳಿದ್ದು, ಈಗ ಮಿಯಾಮಿಯಲ್ಲಿ ಆನಂದಿಸುತ್ತಿದ್ದಾರೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಯೈರ್ ನ ಕಡಲತೀರದ ಫೋಟೋ ವೈರಲ್ ಆಗಿದ್ದು, ಸತ್ಯಾಸತ್ಯತೆ ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.

    “ನಮ್ಮ ಕುಟುಂಬಗಳನ್ನು ತೊರೆದು ದೇಶವನ್ನು ರಕ್ಷಿಸಲು ನಾವು ಹೋರಾಡುತ್ತಿದ್ದೇವೆ. ನಾನು ಯುದ್ಧದ ಮುಂಚೂಣಿಯಲ್ಲಿರುವಾಗ ಯೈರ್ ಮಿಯಾಮಿ ಬೀಚ್‌ನಲ್ಲಿ ತನ್ನ ಜೀವನವನ್ನು ಆನಂದಿಸುತ್ತಿದ್ದಾನೆ” ಎಂದು ಇಸ್ರೇಲ್‌ನ ಉತ್ತರ ಮುಂಭಾಗದಲ್ಲಿ ನಿಯೋಜನೆಗೊಂಡಿರುವ ಸ್ವಯಂಸೇವಕ ಹೇಳಿದನೆಂದು ಉಲ್ಲೇಖಿಸಲಾಗಿದೆ.

    ವೃತ್ತಿಯಲ್ಲಿ ಪಾಡ್‌ಕ್ಯಾಸ್ಟರ್ ಆಗಿರುವ ಯೈರ್ ಇಸ್ರೇಲ್​ ಪ್ರಧಾನಿ ನೆತನ್ಯಾಹು ಅವರ ಮೂರನೇ ಪತ್ನಿ ಸಾರಾ ಅವರ ಮಗ. ತನ್ನ ತಂದೆಯ ನಿಷ್ಠಾವಂತ ರಕ್ಷಕ, ಈತ ಇಸ್ಲಾಮಿಕ್ ವಿರೋಧಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ಆಗಾಗ್ಗೆ ವಿವಾದಕ್ಕೆ ಒಳಗಾಗುತ್ತಾನೆ. 2018 ರಲ್ಲಿ, “ಎಲ್ಲಾ ಮುಸ್ಲಿಮರು ಹೊರಡುವವರೆಗೆ” ಇಸ್ರೇಲ್‌ನಲ್ಲಿ ಶಾಂತಿ ಇರುವುದಿಲ್ಲ ಎಂದು ಪೋಸ್ಟ್ ಮಾಡಿದ ನಂತರ ಅವರ ಫೇಸ್‌ಬುಕ್ ಖಾತೆಯನ್ನು 24 ಗಂಟೆ ನಿರ್ಬಂಧಿಸಲಾಗಿತ್ತು.
    ಯೈರ್ ಇಸ್ರೇಲ್‌ನಲ್ಲಿ ಉದ್ವಿಗ್ನತೆ ಹೆಚ್ಚಿಸುತ್ತಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಳಿಸುತ್ತಿದ್ದಾರೆ ಎಂಬ ಆರೋಪದ ನಡುವೆ ಈ ವರದಿ ಪ್ರಚಾರ ಪಡೆದುಕೊಂಡಿದೆ.

    ತಮಿಳುನಾಡು ರಾಜಭವನದ ಮೇಲೆ ಪೆಟ್ರೋಲ್ ಬಾಂಬ್ ದಾಳಿ; ಸ್ಥಳದಲ್ಲೇ ಸಿಕ್ಕಿಬಿದ್ದ ಆರೋಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts