More

    ವರ್ಷದ ಬಳಿಕ ಕೇರಳ ತಲುಪಿದ 74 ಚಕ್ರವುಳ್ಳ ಟ್ರಕ್ ಸಂಚಾರ ಮಾಡಿದ್ದು 1750 ಕಿ.ಮೀ ಮಾತ್ರ!

    ತಿರುವನಂತಪುರಂ: ದೈತ್ಯ ಯಂತ್ರೋಪಕರಣವನ್ನು ಹೊತ್ತ ಬೃಹತ್​ ಟ್ರಕ್ ಮಹಾರಾಷ್ಟ್ರದಿಂದ ಕೇರಳದ ತಿರುವನಂತಪುರಂನಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರವನ್ನು (ವಿಎಸ್​ಎಸ್​ಸಿ) ತಲುಪಲು ಬರೋಬ್ಬರಿ ಒಂದು ವರ್ಷ ತೆಗೆದುಕೊಂಡಿದ್ದು, ಸೋಮವಾರ ಗುರಿ ತಲುಪಿದೆ.

    ಬೃಹತ್​ ಟ್ರಕ್​ 74 ಟೈರ್​ಗಳನ್ನು ಹೊಂದಿದ್ದು, ತನ್ನ ಪ್ರಯಾಣದ ಅವಧಿಯಲ್ಲಿ ಒಟ್ಟು ನಾಲ್ಕು ರಾಜ್ಯಗಳಿಗೆ ಭೇಟಿ ನೀಡಿದೆ. ಅಚ್ಚರಿಯೆಂದರೆ ದಿನವೊಂದಕ್ಕೆ ಕೇವಲ 5 ಕಿ.ಮೀ ಮಾತ್ರ ಪ್ರಯಾಣಿಸಿದೆ. ಅಲ್ಲದೆ, ಟ್ರಕ್​ ಪ್ರಯಾಣಿಸುವಾಗ ಅದೇ ರಸ್ತೆಯಲ್ಲಿ ಬೇರೆ ವಾಹನಗಳು ಟ್ರಕ್​ ಹಿಂದಿಕ್ಕಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇಡೀ ರಸ್ತೆಯನ್ನು ಟ್ರಕ್​ ಆವರಿಸಿರುತ್ತದೆ. ಟ್ರಕ್​ ನಿಯಂತ್ರಣ ಮಾಡಲು ಬರೋಬ್ಬರಿ 34 ಸಿಬ್ಬಂದಿ ನಿಯೋಜಿಸಲಾಗಿತ್ತು.

    ಇದನ್ನೂ ಓದಿ: ಬಿಜೆಪಿಗೆ ಸೇರಿ ಎಂದ ನೆಟ್ಟಿಗನಿಗೆ ಡ್ರೋನ್​ ಪ್ರತಾಪ್​ ನೀಡಿದ ಉತ್ತರ ಕೇಳಿದ್ರೆ ನಿಮ್ಗೆ ಶಾಕ್​ ಆಗ್ಬೋದು!

    ಟ್ರಕ್​, ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ ಏರೋಸ್ಪೇಸ್​ ಆಟೋಕ್ಲೇವ್​ ಯಂತ್ರವನ್ನು ಸಾಗಿಸಿದ್ದು, ಯಂತ್ರ ಬರೋಬ್ಬರಿ 70 ಟನ್​ ತೂಕವಿದೆ. 7.5 ಮೀಟರ್​ ಎತ್ತರವಿದ್ದು, 6.65 ಮೀಟರ್​ ಅಗಲವಿದೆ. ಅದರ ಬೃಹತ್​ ಗಾತ್ರ ಹಿನ್ನೆಲೆ ಸಾಮಾನ್ಯ ರಸ್ತೆಯಲ್ಲಿ ವಾಹನ ಚಾಲನೆ ಮಾಡಿಕೊಂಡು ಸಾಗಿಸುವುದು ತುಂಬಾ ಕಷ್ಟವಕರವಾಗಿತ್ತು. ಹೀಗಾಗಿ ದಿನವೊಂದಕ್ಕೆ ಕೇವಲ 5 ಕಿ.ಮೀ ಮಾತ್ರ ಸಂಚಾರ ಮಾಡಲಾಗುತ್ತಿತ್ತು. ಇಡೀ ಪ್ರಯಾಣದಲ್ಲಿ ಕೇವಲ 1750 ಕಿ.ಮೀ ಮಾತ್ರ ಸಂಚಾರ ಮಾಡಿದೆ.

    ವರ್ಷದ ಬಳಿಕ ಕೇರಳ ತಲುಪಿದ 74 ಚಕ್ರವುಳ್ಳ ಟ್ರಕ್ ಸಂಚಾರ ಮಾಡಿದ್ದು 1750 ಕಿ.ಮೀ ಮಾತ್ರ!

    ಟ್ರಕ್​ ರಸ್ತೆಯಲ್ಲಿ ಸರಾಗವಾಗಿ ಸಾಗಲು ರಸ್ತೆ ಪಕ್ಕದ ಕೊಂಬೆಗಳನ್ನು ಕತ್ತರಿಸಲಾಗುತ್ತಿತ್ತು. ಅಲ್ಲದೆ, ವಿದ್ಯುತ್​ ವೈರ್​ಗಳನ್ನು ಸರಿದೂಗಿಸಿ ವಾಹನ ಮುಂದೆ ಚಲಿಸಲು ಅವಕಾಶ ಮಾಡಿಕೊಡಲಾಗುತ್ತಿತ್ತು. ಆಯಾ ಪ್ರದೇಶಗಳ ಪೊಲೀಸ್​ ಸಿಬ್ಬಂದಿ ಮತ್ತು ವಿದ್ಯುತ್​ ಮಂಡಳಿ ಇದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದವು. ವಾಹನವು ಇದೇ ಜುಲೈ ಮೊದಲ ವಾರದಲ್ಲಿ ಕೇರಳ ಗಡಿಯನ್ನು ದಾಟಿತ್ತು.

    ಇದನ್ನೂ ಓದಿ: ಸೈಬರಾಬಾದ್​ ಪೊಲೀಸ್​ ಆಯುಕ್ತ ವಿಶ್ವನಾಥ ಸಜ್ಜನರ್​ರಿಂದ ಕನ್ನಡಿಗರಲ್ಲಿ ವಿಶೇಷ ಮನವಿ

    ಏರೋಸ್ಪೇಸ್​ ಆಟೋಕ್ಲೇವ್​ ಯಂತ್ರವನ್ನು ಮಹಾರಾಷ್ಟ್ರದ ನಾಸಿಕ್​ನಲ್ಲಿ ತಯಾರಿಸಲಾಗಿದೆ. ಅದನ್ನು ಕೇರಳದ ವಟ್ಟಿಯೂರ್ಕಾವುನಲ್ಲಿರುವ ವಿಎಸ್​ಎಸ್​ ಕೇಂದ್ರಕ್ಕೆ ರವಾನಿಸಲಾಗಿದೆ. ದೇಶದ ಬಾಹ್ಯಾಕಾಶ ಸಂಶೋಧನಾ ಯೋಜನೆಗೆ ಸಂಬಂಧಿಸಿದ ವಿವಿಧ ಉಪಕರಣಗಳನ್ನು ತಯಾರಿಸಲು ಯಂತ್ರವನ್ನು ಬಳಸಲಾಗುತ್ತದೆ. ವಾಹನವು ಸೋಮವಾರ ವಿಎಸ್​ಎಸ್​ ಕೇಂದ್ರಕ್ಕೆ ಬಂದು ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    VIDEO: ಮಾತನಾಡುತ್ತಿದೆಯಾ ಚಿರಂಜೀವಿ ಸರ್ಜಾ ಆತ್ಮ!?; ಚಿರು ಜತೆಗಿನ ವಿದೇಶಿಗನ ಸಂಭಾಷಣೆ ಇಲ್ಲಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts