More

    ಹಿರಿಯರ ಅನುಭವ ಸಮಾಜಕ್ಕೆ ಅತ್ಯವಶ್ಯ

    ಸವದತ್ತಿ: ನಿವೃತ್ತ ನೌಕರರ ಸೇವೆ ಅಪಾರವಾಗಿದ್ದು, ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

    ಇಲ್ಲಿನ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ವಾರ್ಷಿಕ ಸಾಧಾರಣ ಸಭೆ ಹಾಗೂ 75 ವಸಂತಗಳನ್ನು ಪೂರೈಸಿದ ಸಂಘದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದಲ್ಲಿ ನಿರಂತರ 35 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವುದು ಹೆಮ್ಮೆಯ ವಿಷಯ. ಸಮಾಜಕ್ಕೆ ಅವರ ಅನುಭವ ಅವಶ್ಯವಾಗಿದೆ.

    ಯಾವುದೇ ಕಾರ್ಯಗಳಿದ್ದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿ ಪ್ರಾಮಾಣಿಕನಾಗಿ ನಿಮ್ಮ ಕೆಲಸ ಮಾಡಿಕೊಡುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಎಲ್ಲರ ಸಹಕಾರವಿರಲಿ ಎಂದರು.

    ಏಳನೇ ವೇತನ ಆಯೋಗ ವರದಿ ಜಾರಿಗೆ ಅಗತ್ಯ ಅನುದಾನ ಮೀಸಲು, ಕೇಂದ್ರ ಮಾದರಿಯ ವೇತನ ಭತ್ಯೆ ಮಂಜೂರು, ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿ, ಆರೋಗ್ಯ ಸಂಜೀವಿನಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಧ್ವನಿಯಾಗುವಂತೆ ನಿವೃತ್ತ ನೌಕರರಿಂದ ಶಾಸಕ ವಿಶ್ವಾಸ ವೈದ್ಯ ಅವರಲ್ಲಿ ಮನವಿ ಸಲ್ಲಿಸಲಾಯಿತು. 75 ವಸಂತಗಳನ್ನು ಪೂರೈಸಿದ ಸಂಘದ ನಿವೃತ್ತ ಸದಸ್ಯರಿಗೆ ಸನ್ಮಾನಿಸಲಾಯಿತು.

    ಚಿದಂಬರೇಶ್ವರ ಮಹಾಸಂಸ್ಥಾನದ ಧರ್ಮಾಧಿಕಾರಿ ದಂಡಪಾಣಿ ದೀಕ್ಷಿತರು, ಸಂಘದ ಗೌರವಾಧ್ಯಕ್ಷ ಟಿ.ಎಲ್. ಬಿಜತ್ಕರ್, ಜಿಲ್ಲಾಧ್ಯಕ್ಷ ಎಸ್.ಜಿ. ಸಿದ್ನಾಳ, ರಾಜ್ಯ ಹಿರಿಯ ನಾಗರಿಕರ ಸಂಘದ ರಾಜ್ಯಧ್ಯಕ್ಷ ಎ.ವೈ. ಬೆಂಡಿಗೇರಿ, ಜಿಲ್ಲಾಧ್ಯಕ್ಷ ಡಾ.ಬಿ.ಎಂ. ಗೋಮಾಡಿ, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮುದಕವಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ, ಸಂಘದ ಅಧ್ಯಕ್ಷ ಬಿ.ವಿ.ವಾಂಗಿ, ಉಪಾಧ್ಯಕ್ಷ ಎನ್.ವಿ.ಚೊಂಚೊಳ್ಳಿ, ವಿ.ಎನ್.ಮುನವಳ್ಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts