More

    ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತು

    ಅಥಣಿ: ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶಿವಶರಣರು ವಿಶ್ವದ ಮೊದಲ ಸಂಸತ್ತು ಸ್ಥಾಪಿಸಿ ಅನುಭವ ಮಂಟಪ ಎಂದು ಕರೆದರು. ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿಯಾಗಿದೆ ಎಂದು ಶೆಟ್ಟರಮಠದ ಮರುಳಸಿದ್ದ ಸ್ವಾಮಿಜಿ ಹೇಳಿದರು.

    ಪಟ್ಟಣದ ಶ್ರೀ ಮರುಳಶಂಕರ ದೇವರು ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಯ 35ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

    ಸಂಸ್ಥೆಯ ಅಧ್ಯಕ್ಷ ಶಿವಾನಂದ ದಿವಾನಮಳ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜತೆ ಆಧ್ಯಾತ್ಮಿಕ, ಸಾಮಾಜಿಕ ಚಿಂತಕರ ಬದುಕಿನ ಕುರಿತು ತಿಳಿಸಬೇಕು. ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳು, ಸಾಂಸ್ಕೃತಿಕ ಪ್ರಜ್ಞೆ ಬೆಳೆಸಬೇಕು ಎಂದರು.

    ಡಾ.ಬಸವರಾಜ ತೇಲಿ, ಈರಣಗೌಡ ಪಾಟೀಲ, ಮಲ್ಲಿಕಾರ್ಜುನ ಗೊಟಖಿಂಡಿ, ಹಣಮಂತ ಕಾಲುವೆ, ರಾಮನಗೌಡ ಪಾಟೀಲ, ಪ್ರಕಾಶ ತೇರದಾಳ, ಬಾಬು ಖೇಲಮಲಾಪೂರ, ಮಹಾದೇವ ಹೊನ್ನಳಿ, ಸಂಜು ಅಡಹಳ್ಳಿ, ರವಿ ಪಾಟೀಲ, ಬಸವರಾಜ ಕೋಟಿ, ಮುರುಗೆಪ್ಪ ದಿವಾನಮಳ, ಗುರುಪಾದ ಮರಬಗಿ, ವಿದ್ಯಾರ್ಥಿಗಳು ಅನುಭವ ಮಂಟಪದ ವೇಷಧಾರಿಗಳಾಗಿ ರೂಪಕ ಪ್ರಸ್ತುತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts