More

    ಮಾವು ಮೇಳ ಮೇ 1ರಿಂದ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ನಗರದ ಗಾಂಧಿ ಶಾಂತಿ ಪ್ರತಿಷ್ಠಾನ ಸಭಾಭವನದಲ್ಲಿ ಮಾವು ಬೆಳೆಗಾರರ ಬಳಗದ ವತಿಯಿಂದ ಧಾರವಾಡ ಆಪೂಸ್​ ಬ್ರ್ಯಾಂಡ್​ನ ರುಚಿಕರ ಮತ್ತು ಗುಣಮಟ್ಟದ ಮಾವಿನ ಹಣ್ಣುಗಳ ಮೇಳವನ್ನು ಮೇ 1ರಿಂದ ಒಂದು ತಿಂಗಳ ಕಾಲ ಆಯೋಜಿಸಲಾಗುವುದು ಎಂದು ಮಾವು ಬೆಳೆಗಾರರ ಬಳಗದ ಸದಸ್ಯ ಸುಭಾಷ ಆಕಳವಾಡಿ ಹೇಳಿದರು.
    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳದಲ್ಲಿ ಗುಣಮಟ್ಟದ ವಿವಿಧ ತಳಿಯ ಮಾವು ಮಾರಾಟಕ್ಕೆ ಇರಲಿವೆ. ನಗರ ಹಾಗೂ ಸುತ್ತಲಿನ ಭಾಗಗಳ ಮಾವು ಪ್ರಿಯರು ಮೇಳದ ಪ್ರಯೋಜನ ಪಡೆಯಬೇಕು. ಧಾರವಾಡ ಭಾಗದ ಮಾವು ಬೆಳೆಗಾರರ, ಬೆಳೆಯ ಸಮಸ್ಯೆಗಳು ಸಾಕಷ್ಟು ಇದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಬೆಳೆಗಾರರ ಬಳಗ ಕಟ್ಟಲಾಗಿದೆ. ಮಾವಿನ ಅಭಿವೃದ್ಧಿ, ಗುಣಮಟ್ಟದ ಉತ್ಪಾದನೆ, ಬೆಳೆಗಾರರ ಆದಾಯ ಹೆಚ್ಚಳ, ಬೆಳೆಗಾರರು ಮತ್ತು ಬಳಕೆದಾರರ ಸಹ ಭಾಗಿತ್ವ ವೃದ್ಧಿಸುವ ಗುರಿ ಇದೆ ಎಂದರು.
    ತೋಟಗಾರಿಕೆ ವಿಶ್ವ ವಿದ್ಯಾಲಯ ಮತ್ತು ವಿಜ್ಞಾನಿಗಳ ಸಲಹೆ ಪಡೆಯಲಾಗುತ್ತಿದೆ. ಜತೆಗೆ ಬೆಳೆಗಾರರಿಂದ ನೇರವಾಗಿ ಬಳಕೆದಾರರಿಗೆ ತಲುಪಿಸುವವುದು ಬಳಗದ ಉದ್ದೇಶ. ಧಾರವಾಡ ಆಪೂಸ್​ ಮಾವು ಬೆಳೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಪ್ರಯತ್ನವೂ ಇದಾಗಿದೆ. ಆಪೂಸ್​ ಹಣ್ಣಿಗೆ ಜಿಐ ಟ್ಯಾಗ್​ ಪಡೆಯುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದರು.
    ಬೆಳೆಗಾರರಾದ ಸುರೇಶ ಕುಲಕಣಿರ್, ಶಿವನಗೌಡ ಪಾಟೀಲ, ಪ್ರಮೋದ ಗಾಂವಕರ, ಗಂಗಾಧರ ಹೊಸಮನಿ, ಅನುರಾಧಾ ಮಾನಕರ, ಡಾ. ರಾಜೇಂದ್ರ ಪೋದ್ದಾರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts