More

    ಲೋಕಸಭೆ ಚುನಾವಣೆ ಮೊದಲ ಸುತ್ತಿನಲ್ಲಿ 65.4% ಮತದಾನ; ತ್ರಿಪುರಾದಲ್ಲಿ ಅತಿಹೆಚ್ಚು, ಬಿಹಾರದಲ್ಲಿ ಅತಿ ಕಡಿಮೆ ವೋಟಿಂಗ್​

    ನವದೆಹಲಿ: 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಸ್ಥಾನಗಳಿಗೆ ಶುಕ್ರವಾರದ ಜರುಗಿದ ಚುನಾವಣೆಯಲ್ಲಿ ಅಂತಿಮವಾಗಿ ಶೇಕಡಾ 65.4ರಷ್ಟು ಮತದಾನವಾಗಿದೆ. ಹಂತ 1 ರ ಅಂತ್ಯದ ವೇಳೆಗೆ, ಸುಮಾರು 60.03% ಜನರು ಮತ ಚಲಾಯಿಸಿದ್ದಾರೆ. ಮಣಿಪುರ ಮತ್ತು ಬಂಗಾಳದಿಂದ ಅಲ್ಲಲ್ಲಿ ಹಿಂಸಾಚಾರ ವರದಿಯಾಗಿದೆ.

    ಲೋಕಸಭೆ ಚುನಾವಣೆಗೆ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಮೊದಲ ಹಂತದ ಮತದಾನ ಶುಕ್ರವಾರ ನಡೆದಿದೆ.

    ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಶುಕ್ರವಾರದಂದು ವಿಧಾನಸಭೆ ಚುನಾವಣೆಗೂ ಮತದಾನ ನಡೆದಿದೆ. ಈ ರಾಜ್ಯಗಳಲ್ಲಿ ಕ್ರಮವಾಗಿ ಶೇಕಡಾ 68 ಮತ್ತು 68.3 ರಷ್ಟು ಮತದಾನವಾಗಿದೆ. 2019 ರಲ್ಲಿ, ಸಿಕ್ಕಿಂನಲ್ಲಿ ಶೇಕಡಾ 80.1 ಮತ್ತು ಅರುಣಾಚಲ ಪ್ರದೇಶದಲ್ಲಿ ಶೇಕಡಾ 65.1 ರಷ್ಟು ಜನರು ಮತ ಚಲಾಯಿಸಿದ್ದರು.

    ಒಂದೇ ದಿನದ ಮತದಾನ ಇರುವ ಅಪರೂಪದ ರಾಜ್ಯಗಳಲ್ಲಿ ಒಂದಾದ ತಮಿಳುನಾಡಿನಲ್ಲಿ ಶೇ. 67.2 ರಷ್ಟು ಮತದಾನವಾಗಿದೆ. 2019 ರಲ್ಲಿ 72.4 ರಷ್ಟು ಮತದಾನವಾಗಿತ್ತು.

    ರಾಜಸ್ಥಾನದಲ್ಲಿ ಅರ್ಧದಷ್ಟು ಸ್ಥಾನಗಳಿಗೆ ಶುಕ್ರವಾರ ಮತದಾನವಾಗಿದ್ದು, ಶೇ. 57.3 ರಷ್ಟು ಮತದಾನವಾಗಿದೆ. ಹಿಂದಿನ ಬಾರಿ ಶೇಕಡಾ 64 ರಷ್ಟು ಮತದಾನವಾಗಿತ್ತು.

    ಉತ್ತರ ಪ್ರದೇಶದಲ್ಲಿ ಶೇ. 59.5 ಹಾಗೂ ಮಧ್ಯಪ್ರದೇಶದಲ್ಲಿ ಶೇ. 66.7ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಶೇ.77.6ರಷ್ಟು ಮತದಾನವಾಗಿದೆ.

    ಬಿಜೆಪಿ ಪ್ರಾಬಲ್ಯವಿರುವ ಈಶಾನ್ಯ ರಾಜ್ಯಗಳಲ್ಲಿ ಅಸ್ಸಾಂ ಶೇ. 72.3, ಮೇಘಾಲಯ ಶೇ. 74.5, ಮಣಿಪುರ ಶೇ. 69.2, ಅರುಣಾಚಲ ಪ್ರದೇಶದಲ್ಲಿ ಶೇ. 67.7 ಮತ್ತು ತ್ರಿಪುರದಲ್ಲಿ ಶೇ. ಶೇ.80.6ರಷ್ಟು ಮತದಾನವಾಗಿದೆ.

    ಪುದುಚೇರಿಯಲ್ಲಿ ಶೇ. 73.25ರಷ್ಟು ಮತದಾನವಾಗಿದೆ. ಬಿಹಾರದಲ್ಲಿ ಅತಿ ಕಡಿಮೆ ಮತದಾನವಾಗಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಕೇವಲ 47.49 ಪ್ರತಿಶತ ಮತದಾರರು ಮತದಾನ ಮಾಡಿದ್ದಾರೆ.


    ಬಂಗಾಳದಲ್ಲಿ, ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಕೂಚ್ ಬಿಹಾರ್‌ನಲ್ಲಿ ಘರ್ಷಣೆ ನಡೆಸಿದರು. ಮತದಾರರನ್ನು ಬೆದರಿಸಿದರು. ಪೋಲ್ ಏಜೆಂಟರ ಮೇಲೆ ಹಲ್ಲೆ ನಡೆಸಿದರು ಎಂದು ವರದಿಯಾಗಿದೆ. ಯಾವುದೇ ಹಿಂಸಾಚಾರ ನಡೆದಿಲ್ಲ ಎಂದು ಪೊಲೀಸರು ನಿರಾಕರಿಸಿದ್ದಾರೆ.

    ಮಣಿಪುರದಲ್ಲಿ, ಬಿಷ್ಣುಪುರದ ಮತಗಟ್ಟೆಯೊಂದರಿಂದ ಗುಂಡಿನ ಚಕಮಕಿಯ ವರದಿಯಾಗಿದೆ. ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಮತಗಟ್ಟೆಯನ್ನು ಧ್ವಂಸಗೊಳಿಸಲಾಗಿದೆ. ತಮಿಳುನಾಡಿನಲ್ಲಿ, ಇಬ್ಬರು ವೃದ್ಧರು ಸೇಲಂ ಜಿಲ್ಲೆಯ ಮತಗಟ್ಟೆಗಳಲ್ಲಿ ಸಾವನ್ನಪ್ಪಿದ್ದಾರೆ.

    ವೊಡಾಫೋನ್ ಐಡಿಯಾ ಷೇರು ಖರೀದಿಗೆ ಬಿಡ್ಡಿಂಗ್​ ಜೋರು: ಎಫ್‌ಪಿಒ ಸ್ಟಾಕ್​ ಹಂಚಿಕೆ ಮಾಡುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts