More

    ಶಾಲೆಗಳಿಗೆ ವಿವೇಕ ಬಣ್ಣ…! 8 ಸಾವಿರ ಕೊಠಡಿಗಳು ಆಗಲಿವೆಯೇ ಕೇಸರಿಮಯ…?

    ಬೆಂಗಳೂರು: ರಾಜ್ಯಾದ್ಯಂತ ಶಾಲೆಗಳ ಕೊಠಡಿಗಳಲ್ಲಿ ಏಕರೂಪದ ಬಣ್ಣ ಬಳಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ. ಇದಲ್ಲದೇ ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ 8,100 ಶಾಲಾ ಕಾಲೇಜು ಕೊಠಡಿಗಳಿಗೆ ಸ್ವಾಮಿ ವಿವೇಕಾನಂದ ಅವರ ಹೆಸರು ಇಡುವ ಉದ್ದೇಶ ಇದೆ.

    ಈಗಾಗಲೇ 992 ಕೋಟಿ ವೆಚ್ಚದಲ್ಲಿ ಶಾಲಾ-ಕಾಲೇಜು ಹೊಸ ಕೊಠಡಿಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಇವುಗಳಿಗೆ ಮಾತ್ರ ಮೊದಲ ಹಂತದಲ್ಲಿ ವಿವೇಕಾನಂದ ಪರಿಕಲ್ಪನೆಯ ಬಣ್ಣ ಬಳಿಸಲಾಗುವುದು. ಕೇಸರಿ ಎಂಬುದು ಉದಾತ್ತ ಮೌಲ್ಯಗಳಿಗೆ, ಉತ್ತಮ ಆದರ್ಶಗಳಿಗೆ ಸಂಕೇತವಾಗಿದೆ. ವಿವೇಕಾನಂದರ ಹೆಸರಿನ ಕೊಠಡಿಗಳಿಗೆ ಸೂಕ್ತ ಬಣ್ಣ ಅದು. ಮಕ್ಕಳನ್ನು ಆಕರ್ಷಿಸುವುದಕ್ಕೂ ಅದು ಸಹಾಯ ಮಾಡುತ್ತದೆ ಎಂಬುದು ಶಿಕ್ಷಣ ಇಲಾಖೆಯ ಚಿಂತನೆ ಎಂದು ಹೇಳಲಾಗಿದೆ.

    ದೇವಸ್ಥಾನ, ದರ್ಗಾ, ಚರ್ಚ್ ಸುತ್ತಿದ ಸಿದ್ದರಾಮಯ್ಯ… ಎಲ್ಲರ ಪ್ರತಿಮೆಗಳಿಗೂ ಗೌರವಾರ್ಪಣೆ

    ಆದರೆ ಇದೇ ವಿಷಯ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಕೇಸರಿ ವಾಗ್ವಾದಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ. ಬಿಜೆಪಿ ಸರ್ಕಾರದಿಂದ ಪಠ್ಯಪುಸ್ತಕಗಳ ಕೇಸರೀಕರಣ ಆಗುತ್ತಿದೆ ಎಂದು ಆರೋಪಿಸಿ ಈಗ್ಗೆ ಕೆಲವು ತಿಂಗಳುಗಳ ಹಿಂದೆ ಹುಯಿಲೆಬ್ಬಿಸಿದ್ದ ವಿರೋಧ ಪಕ್ಷಗಳು ಈ ಕ್ರಮದ ವಿರುದ್ಧವೂ ಪ್ರತಿಭಟನೆ ಮಾಡುವ ಸಾಧ್ಯತೆ ದಟ್ಟವಾಗಿದೆ.

    ಪಠ್ಯ ಪರಿಷ್ಕರಣೆ ವೇಳೆ ಬಲ ಪಂಥೀಯ ವಿಚಾರ ಸೇರಿಸಲಾಗಿದೆ ಎಂಬ ಆರೋಪ ಕೇಳಿಬಂದು ದೇಶಾದ್ಯಂತ ಸುದ್ದಿಯಾಗಿತ್ತು. ತೀವ್ರ ಆರೋಪ – ಪ್ರತ್ಯಾರೋಪಗಳ ಬಳಿಕ ಮತ್ತೊಮ್ಮೆ ಪಠ್ಯ ಮರು ಪರಿಷ್ಕರಿಸಲಾಗಿತ್ತು. ಭಗತ್ ಸಿಂಗ್ ಗದ್ಯ ಕೈಬಿಟ್ಟು ಆರ್‌ಎಸ್‌ಎಸ್ ಸಂಸ್ಥಾಪಕ ಹೆಡಗೇವಾರ್ ಅವರ ಕುರಿತ ಅಂಶಗಳನ್ನು ಸೇರಿಸಿದ್ದಾರೆಂಬ ಅಂಶ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿದರೆ ಅದು ಕೂಡ ವಿವಾದಕ್ಕೆ ಈಡಾಗುವ ಸಾಧ್ಯತೆ ಇದೆ.

    ಚುನಾವಣೆ ಸಿದ್ಧತೆಯಲ್ಲಿರುವ ಸಿದ್ದರಾಮಯ್ಯ; ಪ್ರಚಾರಕ್ಕೆ ತೆರಳಲು ಬಂತು ಐಷಾರಾಮಿ ಬಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts