More

    ದೇವಸ್ಥಾನ, ದರ್ಗಾ, ಚರ್ಚ್ ಸುತ್ತಿದ ಸಿದ್ದರಾಮಯ್ಯ… ಎಲ್ಲರ ಪ್ರತಿಮೆಗಳಿಗೂ ಗೌರವಾರ್ಪಣೆ

    ಕೋಲಾರ: ಚುನಾವಣಾ ಪ್ರಚಾರಕ್ಕಾಗಿ ಸಿದ್ಧಪಡಿಸಿರುವ ವಿಶೇಷ ಬಸ್‌ನಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಕೋಲಾರಕ್ಕೆ ಭೇಟಿ ನೀಡಿದರು.

    ಕೋಲಾರದ ಬೈಪಾಸ್‌ನಲ್ಲಿ ಬಸ್ ನಿಲ್ಲಿಸಿದ ಸಿದ್ದರಾಮಯ್ಯ ಅವರು ಅಲ್ಲಿಂದ ಕಾರಿನಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಕೋಲಾರಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಮೆಥೋಡಿಸ್ಟ್ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅದಾದ ನಂತರ ಕ್ಲಾಕ್ ಟವರ್‌ನಲ್ಲಿರುವ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.

    ಇದೇ ವೇಳೆ ಅವರು ಮಹರ್ಷಿ ವಾಲ್ಮೀಕಿ, ಸರ್ವಜ್ಞ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಕನಕ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

    ಚುನಾವಣೆ ಸಿದ್ಧತೆಯಲ್ಲಿರುವ ಸಿದ್ದರಾಮಯ್ಯ; ಪ್ರಚಾರಕ್ಕೆ ತೆರಳಲು ಬಂತು ಐಷಾರಾಮಿ ಬಸ್!

    ಕೋಲಾರಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ಬೃಹತ್ ಸೇಬಿನ ಹಾರ, ಹೂವಿನ ಹಾರ ಹಾಕಿ ಸಂಭ್ರಮಿಸಿದರು. ಶಾಸಕರಾ ಶ್ರೀನಿವಾಸಗೌಡ, ನಂಜೇಗೌಡ, ವಿ.ಮುನಿಯಪ್ಪ, ನಜೀರ್ ಅಹಮದ್, ಅನಿಲ್ ಕುಮಾರ್, ಮಾಜಿ ಶಾಸಕರಾದ ನಾಗರಾಜು, ಸುದರ್ಶನ್ ಮುಂತಾದವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts