More

    ಅವ್ಯವಹಾರದ ಜಾಡು ಹಿಡಿದ ಎಸಿಬಿಗೆ ಸಿಕ್ಕಿವೆ ಕುತೂಹಲಕಾರಿ ಸುಳಿವು!

    ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ ನಿಯಮಿತದಿಂದ ಕೋಟ್ಯಂತರ ರೂ. ಸಾಲ ಪಡೆದು ಎನ್​ಪಿಎ ಮಾಡಿಸಿ ವಾಪಸ್​ ಬ್ಯಾಂಕ್​ಗೆ ಹಿಂದಿರುಗಿಸದೇ ಇದ್ದ ಮೂವರು ಖಾಸಗಿ ವ್ಯಕ್ತಿಗಳ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆ ಜಪ್ತಿ ಮಾಡಿಕೊಂಡಿದ್ದಾರೆ.

    ಸೋಮವಾರ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ನಗರದ ಮೂರು ಕಡೆಗಳಲ್ಲಿ ಎಸಿಬಿ ದಾಳಿ ನಡೆಸಿದೆ. ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಅವ್ಯವಹಾರದ ಜಾಡು ಹಿಡಿದು ಹೊರಟ ಎಸಿಬಿಗೆ ತನಿಖೆ ವೇಳೆ ಸಾಕಷ್ಟು ಕುತೂಹಲಕಾರಿ ಅಂಶದ ಬಗ್ಗೆ ಸುಳಿವು ಸಿಕ್ಕಿದೆ. ಕೆಲವು ವ್ಯಕ್ತಿಗಳು ಬ್ಯಾಂಕ್​ನಿಂದ ಕೋಟ್ಯಂತರ ರೂ. ಸಾಲವನ್ನು ಬೇರೆ ಬೇರೆ ನಕಲಿ ಖಾತೆಗಳ ಮೂಲಕ ಪಡೆದು ವಾಪಸ್​ ಬ್ಯಾಂಕಿಗೆ ಹಿಂತಿರುಗಿಸದೇ ಎನ್​ಪಿಎ ಮಾಡಿಸಿ ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿದ್ದರು. ಇದನ್ನೂ ಓದಿರಿ ಮಹಿಳೆಯ ಮೈಮುಟ್ಟಿದ ಕಾಮುಕ… ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕೃತ್ಯ!

    ಬ್ಯಾಂಕ್​ನಿಂದ ಕೋಟ್ಯಂತರ ರೂ. ಸಾಲ ಪಡೆದ ಗುರುನಾಥ್​ ಎಂಬುವವರ ಯಶವಂತಪುರದ ಓರೆಯನ್​ ಮಾಲ್​ ಹತ್ತಿರದ ಬಿಗ್ರೇಟ್​ ಗೇಟ್​ವೇ ನಲ್ಲಿರುವ ಫ್ಲಾಟ್​, ಜಸ್ವಂತ್​ ರೆಡ್ಡಿಯ ಗಣೇಶ ಬ್ಲಾಕ್​ನ ಎಚ್​ಆರ್​ಬಿಆರ್​ ಲೇಔಟ್​ನಲ್ಲಿರುವ ನಿವಾಸ, ರಾಮಾಂಜನೇಯ ನಗರ ಚಿಕ್ಕಲಸಂದ್ರದಲ್ಲಿರುವ ರಾಮಕೃಷ್ಣ ಅವರ ನಿವಾಸದ ಮೇಲೆ ದಾಳಿ ನಡೆಸಿ ಕೆಲ ಆಸ್ತಿ ಪತ್ರಗಳನ್ನು ಜಪ್ತಿ ಮಾಡಲಾಗಿದೆ.

    ಶ್ರೀ ಗುರು ರಾವೇಂದ್ರ ಸಹಕಾರ ಬ್ಯಾಂಕ್​ ನಿಯಮಿತದ ಅಧ್ಯಕ್ಷರು, ಕೆಲವು ಸದಸ್ಯರು ಹಾಗೂ ಕಚೇರಿಯ ಸಿಬ್ಬಂದಿ ಸೇರಿಕೊಂಡು ಸಹಕಾರ ಬ್ಯಾಂಕಿಗೆ ಹೂಡಿಕೆ ಮಾಡಿರುವ ಗ್ರಾಹಕರ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದರು. ಬ್ಯಾಂಕ್​ನ ಹಣ ದುರುಪಯೋಗ ಮಾಡಿಕೊಂಡು ಕೋಟ್ಯಂತರ ರೂ. ಅಕ್ರಮ ಲಾಭ ಮಾಡಿರುವ ಬಗ್ಗೆ ಸಾರ್ವಜನಿಕರು ಎಸಿಬಿಗೆ ದೂರು ನೀಡಿದ್ದರು. ಈ ಆಧಾರದ ಮೇಲೆ ಜೂನ್​ 18ರಂದು ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಇರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನ ಪ್ರಧಾನ ಶಾಖೆ ಸೇರಿ 5 ಸ್ಥಳಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು.

    ರಾಜವಂಶಸ್ಥ ಯದುವೀರ್ ವಿರುದ್ಧವೇ ತಿರುಗಿಬಿದ್ದ ಸಂಘಟನೆಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts