More

  ಕಣ್ಸನ್ನೆ ಐಡಿಯಾ ನನ್ನದು ಎಂದ ಪ್ರಿಯಾ ವಾರಿಯರ್​! ನಿರ್ದೇಶಕ ಕೊಟ್ಟ ಉತ್ತರಕ್ಕೆ ನೆಟ್ಟಿಗರಿಂದ ಮೆಚ್ಚುಗೆ

  ತಿರುವನಂತಪುರ: ತಮ್ಮ ಕಣ್ಸನ್ನೆಯಿಂದ ರಾತ್ರೋರಾತ್ರಿ ಜನಪ್ರಿಯವಾದವರು ಪ್ರಿಯಾ ಪ್ರಕಾಶ್ ವಾರಿಯರ್. ಮಲಯಾಳಂನ ‘ಒರು ಆಡಾರ್ ಲವ್’ ಚಿತ್ರದಲ್ಲಿನ ಒಂದು ದೃಶ್ಯದಲ್ಲಿ ಅವರ ಕಣ್ಸನ್ನೆ ಅದೆಷ್ಟು ಜನಪ್ರಿಯವಾಗಿತ್ತೆಂದರೆ, ಬರೀ ಮಲಯಾಳಂ ಚಿತ್ರರಂಗದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲೇ ಸೆನ್ಸೇಶನ್ ಆಗಿಬಿಟ್ಟರು ಪ್ರಿಯಾ. ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಂಡರು. ಇದೀಗ ಪ್ರಿಯಾ ಅವರು ಮತ್ತೊಮ್ಮೆ ಕಣ್ಸನ್ನೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದ ವಿಡಿಯೋ ತುಣುಕೊಂದು ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

  ನಟಿ ಹಾಗೂ ಆ್ಯಂಕರ್​ ಆಗಿರುವ ಪರ್ಲ್​ ಮಾನೇ ಅವರ ಟಾಕ್​ಶೋನಲ್ಲಿ ಪ್ರಿಯಾ ಮಾತನಾಡಿದ್ದಾರೆ. ಒರು ಆಡಾರ್ ಲವ್ ಚಿತ್ರದ ದೃಶ್ಯವೊಂದರಲ್ಲಿ ಕಣ್ಸನ್ನೆ ಮಾಡುವ ಐಡಿಯಾವನ್ನು ನಾನೇ ಕೊಟ್ಟಿದ್ದು, ಆ ಐಡಿಯಾ ನಿರ್ದೇಶಕರದ್ದಲ್ಲ ಎಂದು ಪ್ರಿಯಾ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ನಿರ್ದೇಶಕ ಓಮರ್​ ಲುಲು ಅವರು ಜಾಲತಾಣದಲ್ಲಿ ವಿಡಿಯೋ ತುಣುಕೊಂದನ್ನು ಶೇರ್​ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

  ಇದನ್ನೂ ಓದಿ: ಆದಿಪುರುಷ್​ ಪ್ರೀ ರಿಲೀಸ್​ ಇವೆಂಟ್​; ಚಿತ್ರತಂಡ ಸಿಡಿಸಿದ ಪಟಾಕಿಯ ಒಟ್ಟು ಮೌಲ್ಯವೆಷ್ಟು ಗೊತ್ತಾ?

  ಪ್ರಿಯಾ ಅವರ ಇತ್ತೀಚಿನ ಸಂದರ್ಶನ ಹಾಗೂ ಹಳೆಯ ಸಂದರ್ಶನದ ವಿಡಿಯೋ ತುಣುಕನ್ನು ಸೇರಿಸಿ ಒಂದೇ ವಿಡಿಯೋ ಮಾಡಿದ್ದು ಅದನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಓಮರ್​ ಲುಲು ಹಂಚಿಕೊಂಡಿದ್ದಾರೆ. ಹಳೆಯ ಸಂದರ್ಶನವೊಂದರಲ್ಲಿ ನಿರ್ದೇಶಕ ಲುಲು ಅವರ ಸೂಚನೆ ಮೇರೆಗೆ ಕಣ್ಸನ್ನೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

  ನಿರ್ದೇಶಕರನ್ನೇ ಮರೆತರೆ ಹೇಗೆ?

  ವಿಡಿಯೋಗೆ ಅಡಿಬರಹ ನೀಡಿರುವ ಲುಲು, ನನ್ನ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಬಂದು, ಹಳೆಯ ನೆನಪುಗಳನ್ನು ಮರೆತಿರುವವರಿಗಾಗಿ ಈ ವಿಡಿಯೋ ತುಣುಕು ಎಂದು ತಿರುಗೇಟು ನೀಡಿದ್ದಾರೆ. ನಿರ್ದೇಶಕರು ಕೊಟ್ಟ ಉತ್ತರಕ್ಕೆ ನೆಟ್ಟಿಗರು ಬಹುಪರಾಕ್​ ಹೇಳಿದ್ದಾರೆ. ಖ್ಯಾತಿ ಗಳಿಸಿದ ಮೇಲೆ ನಿರ್ದೇಶಕರನ್ನೇ ಮರೆತರೆ ಹೇಗೆ ಎಂದು ನೆಟ್ಟಿಗರು ಪ್ರಿಯಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  ಇದನ್ನೂ ಓದಿ: 1.6 ಕೋಟಿ ರೂ. ತೆರಿಗೆ ಪಾವತಿಸುವಂತೆ 23 ಬಾರಿ ನೋಟಿಸ್‌; ಕಂಗಾಲಾದ ರೈತ!

  ಅಂದಹಾಗೆ ಒರು ಆಡಾರ್ ಲವ್ ಚಿತ್ರ 2019ರಲ್ಲಿ ತೆರೆಕಂಡಿತು. ಈ ಸಿನಿಮಾದಲ್ಲಿ ಪ್ರಿಯಾ ಪ್ರಕಾಶ್​ ವಾರಿಯರ್​, ರೋಶನ್​ ಮತ್ತು ನೂರಿನ್​ ಶರೀಫ್​ ಸೇರಿದಂತೆ ಇತರು ನಟಿಸಿದ್ದಾರೆ. (ಏಜೆನ್ಸೀಸ್​)

  ಮೇಕಪ್ ಇಲ್ಲದ ಫೋಟೋವನ್ನು ಹಂಚಿಕೊಂಡ ನಟಿ ಆಲಿಯಾ ಭಟ್; ವಾವ್ ಎಂದ ಫ್ಯಾನ್ಸ್! ಇಲ್ಲಿವೆ ನೋಡಿ ಫೋಟೋಗಳು…

  ಆಫ್ರಿಕಾದಲ್ಲಿ ಇಶಿತಾ – ದಟ್ಟ ಕಾನನದಲ್ಲಿ ವನ್ಯಮೃಗಗಳ ಬೆನ್ನತ್ತಿದ ಸ್ಯಾಂಡಲ್​ವುಡ್​ ನಟಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts