More

    ಆಫ್ರಿಕಾದಲ್ಲಿ ಇಶಿತಾ – ದಟ್ಟ ಕಾನನದಲ್ಲಿ ವನ್ಯಮೃಗಗಳ ಬೆನ್ನತ್ತಿದ ಸ್ಯಾಂಡಲ್​ವುಡ್​ ನಟಿ

    ! ಹರ್ಷವರ್ಧನ್​ ಬ್ಯಾಡನೂರು

    “ಅಗ್ನಿಸಾಕ್ಷಿ’ ಸೀರಿಯಲ್​ ಖ್ಯಾತಿಯ ನಟಿ ಇಷಿತಾ ವರ್ಷ ಆ ಬಳಿಕ “ಸ್ವಾರ್ಥರತ್ನ’ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಅದರ ನಡುವೆ “ಕುಕ್ಕು ವಿತ್​ ಕಿರಿಕ್ಕು’, “ರಾಜಾ ರಾಣಿ’, “ಡಾನ್ಸಿಂಗ್​ ಚಾಂಪಿಯನ್​’ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಹೊಸ ಪ್ರಾಜೆಕ್ಟ್​ ಸೈನ್​ ಮಾಡಬೇಕಿದ್ದು, ಅದರ ನಡುವೆ ಇಷಿತಾ ಹೊಸ ಹವ್ಯಾಸ ರೂಢಿಸಿಕೊಂಡಿದ್ದಾರೆ. ದೇಶ, ವಿದೇಶಗಳನ್ನು ಸುತ್ತುತ್ತಾ ಕಾಡು, ಮೇಡುಗಳನ್ನು ಅಲೆಯುತ್ತಾ, ವನ್ಯಮೃಗಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ವೈಲ್ಡ್​ಲ್​ೈ ೋಟೋಗ್ರಫಿ ಬಗ್ಗೆ ವಿಜಯವಾಣಿ ಜತೆ ಮುಕ್ತವಾಗಿ ಮಾತನಾಡಿದ್ದಾರೆ ಇಷಿತಾ ವರ್ಷ.

    ಆಫ್ರಿಕಾದಲ್ಲಿ ಇಶಿತಾ - ದಟ್ಟ ಕಾನನದಲ್ಲಿ ವನ್ಯಮೃಗಗಳ ಬೆನ್ನತ್ತಿದ ಸ್ಯಾಂಡಲ್​ವುಡ್​ ನಟಿ
    • ವೈಲ್ಡ್​ಲೈಫ್​ ಫೋಟೋಗ್ರಫಿ ಹವ್ಯಾಸ ಶುರುವಾಗಿದ್ದು ಹೇಗೆ?
      – ಕಳೆದ ವರ್ಷ ರಿಯಾಲಿಟಿ ಶೋ ಮಾಡುವಾಗ ಬ್ರೇಕ್​ನಲ್ಲಿ ನಾಗರಹೊಳಗೆ ಸಾರಿಗೆ ಹೋಗಿದ್ದೆ. ಆಗ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿದ್ದೆ. ಆ ಪ್ರವಾಸ ಅದ್ಭುತ ಅನುಭವ ನೀಡಿತ್ತು. ಅಲ್ಲಿಂದ ನನ್ನ ಈ ಪಯಣ ಪ್ರಾರಂಭವಾಯಿತು. ಅದಾಗಿ ಕೆಲ ತಿಂಗಳ ನಂತರ ಕಬಿನಿಗೆ ಹೋಗಿದ್ದೆ. ಬಳಿಕ ಫೋಟೋಗ್ರಫಿ ಮತ್ತು ಟ್ರಾವೆಲಿಂಗ್​ ಹವ್ಯಾಸವಾಗಿ ಬೆಳೆಯಿತು.
    ಆಫ್ರಿಕಾದಲ್ಲಿ ಇಶಿತಾ - ದಟ್ಟ ಕಾನನದಲ್ಲಿ ವನ್ಯಮೃಗಗಳ ಬೆನ್ನತ್ತಿದ ಸ್ಯಾಂಡಲ್​ವುಡ್​ ನಟಿ
    • ಯಾವೆಲ್ಲ ಅರಣ್ಯಗಳಿಗೆ ಭೇಟಿ ನೀಡಿದ್ದೀರಿ?
      – ಕಾನಾ, ಕಾರ್ಬೆಟ್​, ನಾಗರಹೊಳೆ, ಬೇರ, ಸ್ಪಿಟಿ ವ್ಯಾಲಿ, ತಯ್ಯಮ್​ ಸೇರಿ ಭಾರತದ ಆರು ಹುಲಿ ಸಂರಕ್ಷತಾರಣ್ಯಗಳಿಗೆ ಭೇಟಿ ನೀಡಿದ್ದೇನೆ. ಆರು ತಿಂಗಳಲ್ಲಿ ಆಫ್ರಿಕಾದ ಮಸಾಯಿ ಮರಾ ಅರಣ್ಯಕ್ಕೆ ಎರಡು ಬಾರಿ ಹೋಗಿ ಬಂದಿದ್ದೇನೆ. ಒಂದೊಂದು ಅರಣ್ಯವೂ ಒಂದೊಂದು ರೀತಿ ಇವೆ. ಹೀಗಾಗಿ ಎಲ್ಲವೂ ಒಂದೊಂದು ಬಗೆಯ ಅನುಭವ ನೀಡಿವೆ. ಇತ್ತೀಚಿನ ತಿಂಗಳು ಹೆಚ್ಚು ಓಡಾಡುತ್ತಿದ್ದೇನಷ್ಟೆ. ನನಗೆ ಗೊತ್ತಿರದ, ಊಹಿಸಿರದ ಹಲವು ಜಾಗಗಳನ್ನು ಅನ್ವೇಷಿಸುತ್ತಿದ್ದೇನೆ.
    ಆಫ್ರಿಕಾದಲ್ಲಿ ಇಶಿತಾ - ದಟ್ಟ ಕಾನನದಲ್ಲಿ ವನ್ಯಮೃಗಗಳ ಬೆನ್ನತ್ತಿದ ಸ್ಯಾಂಡಲ್​ವುಡ್​ ನಟಿ
    • ನೆನಪಿನಲ್ಲಿ ಉಳಿದಿರುವ ಟನೆಗಳ ಬಗ್ಗೆ ಹೇಳಬಹುದಾ…
      – ನೆನಪಿನಲ್ಲಿ ಉಳಿಯುವ ಹಲವಾರು ಟನೆಗಳು ನಡೆದಿವೆ. ಕಬಿನಿ ಬ್ಯಾಕ್​ವಾಟರ್​ನ ಹೆಣ್ಣುಲಿಗೆ ತುಂಬ ಧೈರ್ಯ. ತುಂಬ ಬೋಲ್ಡ್​ ಹುಲಿ ಅದು. ಜನ, ವಾಹನಗಳು ಅಂದರೆ ಭಯವಿಲ್ಲ. ವಾಹನಗಳ ಹತ್ತಿರವೇ ನಡೆದುಕೊಂಡು ಬರುತ್ತಿದ್ದಳು. ಹಾಗೇ ನಾಗರಹೊಳೆಯಲ್ಲಿ ಚಿರತೆಯೊಂದು ತನ್ನ ಮರಿಗಳ ಜತೆ ರಸ್ತೆ ದಾಟಲು ಬರುತ್ತಿತ್ತು. ಆದರೆ, ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಾದ ಕಾರಣ, ವಾಪಸ್​ ಹೋಗುತ್ತಿತ್ತು. ಮರಿಗಳು ಮೊದಲು ನಮಗೆ ಕಾಣಿಸಲಿಲ್ಲ. ಅದು ಸ್ವಲ್ಪ ದೂರ ಹೋದ ಬಳಿಕ ತಾಯಿ ಚಿರತೆ ಮತ್ತು ಮರಿಗಳು ಕಾಣಿಸಿದವು.
    ಆಫ್ರಿಕಾದಲ್ಲಿ ಇಶಿತಾ - ದಟ್ಟ ಕಾನನದಲ್ಲಿ ವನ್ಯಮೃಗಗಳ ಬೆನ್ನತ್ತಿದ ಸ್ಯಾಂಡಲ್​ವುಡ್​ ನಟಿ
    • ವೈಲ್ಡ್​ಲೈಫ್​ ಫೋಟೋಗ್ರಫಿ ಮಾಡಲು ಕಾಡುಗಳಿಗೆ ಹೋದಾಗ ಎದುರಾಗುವ ಪ್ರಮುಖ ಸಮಸ್ಯೆಗಳೇನು?
      – ನಾನು ಕಲಾವಿದೆಯಾದ ಕಾರಣ ಯಾವಾಗಲೂ ಚೆನ್ನಾಗಿ ಕಾಣಿಸಿಕೊಳ್ಳಬೇಕು. ಆದರೆ, ವೈಲ್ಡ್​ಲೈಫ್​ ಫೋಟೋಗ್ರಫಿ, ಟ್ರಾವೆಲಿಂಗ್​ ಅಂತ ಹೋದಾಗ ಬಿಸಿಲು, ಧೂಳಿನಲ್ಲಿಯೇ ತಾಸುಗಟ್ಟಲೆ ಕಳೆಯಬೇಕಾಗುತ್ತದೆ. ಹೀಗಾಗಿ ನಮ್ಮನ್ನು ನಾವು ಚೆನ್ನಾಗಿ ನೋಡಿಕೊಳ್ಳಬೇಕು. ಆರೋಗ್ಯದ ಜತೆ ಸೌಂದರ್ಯದ ಬಗ್ಗೆಯೂ ಕಾಳಜಿವಹಿಸಬೇಕಾಗುತ್ತದೆ. ಏನೂ ನಿರೀಕ್ಷೆ ಇಟ್ಟುಕೊಳ್ಳದೇ ಹೋಗಬೇಕು. ಕೆಲವೊಮ್ಮೆ ನಮಗೆ ಪ್ರಾಣಿಗಳು ಕಾಣಿಸಿಕೊಳ್ಳಬಹುದು, ಕೆಲವೊಮ್ಮೆ ಕಾಣಿಸಿಕೊಳ್ಳದಿರಬಹುದು.
    ಆಫ್ರಿಕಾದಲ್ಲಿ ಇಶಿತಾ - ದಟ್ಟ ಕಾನನದಲ್ಲಿ ವನ್ಯಮೃಗಗಳ ಬೆನ್ನತ್ತಿದ ಸ್ಯಾಂಡಲ್​ವುಡ್​ ನಟಿ
    • ಮುಂದಿನ ಪ್ಲ್ಯಾನ್​ ಏನು? ಎಲ್ಲಿಗೆ ಹೋಗಲಿದ್ದೀರಿ?
      & ಈಗಾಗಲೇ ಮಸಾಯಿ ಮರಾಗೆ ಎರಡು ಬಾರಿ ಭೇಟಿ ನೀಡಿದ್ದೇನೆ. ಜುಲೈನಲ್ಲಿ ಮೂರನೇ ಬಾರಿ ಹೋಗುವ ಪ್ಲ್ಯಾನ್​ ಇದೆ. ಒಂದು ಹೊಸ ಪ್ರಾಜೆಕ್ಟ್​ ಸೈನ್​ ಮಾಡಬೇಕಿದೆ. ಸೈನ್​ ಮಾಡಿದ ಬಳಿಕ ಮತ್ತೆ ಕೆಲವು ತಿಂಗಳ ಕಾಲ ಎಲ್ಲಿಗೂ ಟ್ರಾವೆಲ್​ ಮಾಡಲು ಸಮಯ ಸಿಗುವುದಿಲ್ಲ. ಹೀಗಾಗಿ ಅದಕ್ಕೂ ಮುನ್ನ ಹೋಗಿಬರಲಿದ್ದೇನೆ. ಕಳೆದ ಒಂದು ತಿಂಗಳಲ್ಲಿ ನಾನು ಒಂದು ವಾರ ಮಾತ್ರ ಮನೆಯಲ್ಲಿದ್ದೆ. ಉಳಿದ ಬಹುತೇಕ ಸಮಯ ಟ್ರಾವೆಲ್​ ಮಾಡುತ್ತಿದ್ದೆ. ನನಗಿನ್ನೂ ಇದು ಹೊಸತು. ಆದರೂ, ಮನೆಯಲ್ಲಿ ತುಂಬ ಸಪೋರ್ಟ್​ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts