More

    ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ : ಇಬ್ಬರ ಸಾವು

    ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಸೊಪೋರ್ ಪ್ರದೇಶದಲ್ಲಿ ಇಂದು ಅಲ್ಲಿನ ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್ (ಬಿಡಿಸಿ) ಅಧ್ಯಕ್ಷೆ ಫರೀದಾ ಖಾನ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕಿಯಾದ ಖಾನ್ ಅವರಿಗೆ ಸಣ್ಣ ಗಾಯಗಳಾಗಿದ್ದರೆ, ಒಬ್ಬ ಕೌನ್ಸಿಲರ್ ಮತ್ತು ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ.

    ಬಿಡಿಸಿ ಕೌನ್ಸಿಲರ್​ಗಳ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಫರೀದಾ ಖಾನ್ ಮತ್ತು ಗಂಭೀರವಾಗಿ ಗಾಯಗೊಂಡಿರುವ ಮತ್ತೊಬ್ಬ ಕೌನ್ಸಿಲರ್​​ಅನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹಲ್ಲೆಕೋರರನ್ನು ಪತ್ತೆ ಹಚ್ಚಲು ಪೊಲೀಸರು ಈ ಪ್ರದೇಶವನ್ನು ಸುತ್ತುವರೆದಿದ್ದಾರೆ. ಭದ್ರತಾ ಪಡೆಗಳನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ.

    ಇದನ್ನೂ ಓದಿ: ಪೊಲೀಸರಂತೆ ಸಮವಸ್ತ್ರ ಧರಿಸಿ ಫೀಲ್ಡಿಗಿಳಿಯಲಿದ್ದಾರೆ ಗಣಿ ಇಲಾಖೆ ಅಧಿಕಾರಿಗಳು

    “ಸೋಪೋರ್ ನಗರಪಾಲಿಕೆ ಕಚೇರಿಯ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದರು. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಶಫ್​ಖತ್​ ಅಹಮದ್ ಮತ್ತು ಕೌನ್ಸಿಲರ್ ರಿಯಾಜ್ ಅಹಮದ್ ಮೃತಪಟ್ಟಿದ್ದಾರೆ. ಮತ್ತೊಬ್ಬ ಕೌನ್ಸಿಲರ್ ಶಮ್ಸ್​ಉದ್ದೀನ್ ಪೀರ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪತ್ತೆ ಕಾರ್ಯ ನಡೆದಿದೆ” ಎಂದು ಜಮ್ಮು ಕಾಶ್ಮೀರ ಪೊಲೀಸರು ಹೇಳಿಕೆ ನೀಡಿದ್ದಾರೆ.

    ಕಾಶ್ಮೀರ ಪೊಲೀಸ್, ಆರ್ಮಿ ಸೆಕ್ಟರ್ ಕಮ್ಯಾಂಡರ್ ಮತ್ತು ಸಿಆರ್​ಪಿಎಫ್​ನ ಉನ್ನತ ಅಧಿಕಾರಿಗಳು ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಘಟನೆಯ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದೂ ಸೂಕ್ತವಾಗಿ ಪ್ರತಿಕ್ರಿಯಿಸದ ನಾಲ್ಕು ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.

    ಇದನ್ನೂ ಓದಿ: ನಿಮ್ಮನ್ನು ಕೈಮುಗಿದು ಕೇಳಿಕೊಳ್ಳುವೆ, ಸಿಡಿ ಬಗ್ಗೆ ಏನನ್ನೂ ಕೇಳಬೇಡಿ: ಸತೀಶ್​ ಜಾರಕಿಹೊಳಿ

    ಲಷ್ಕರ್-ಎ-ತೈಬಾ ಗುಂಪಿನ ಇಬ್ಬರು ಆತಂಕವಾದಿಗಳು ಈ ಕೃತ್ಯಕ್ಕೆ ಕಾರಣರಾಗಿದ್ದಾರೆ. ಈರ್ವರೂ ಪ್ರದೇಶದ ಕಟ್ಟಡವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಕಾಶ್ಮೀರ ಜೋನ್ ಐಜಿಪಿ ವಿಜಯಕುಮಾರ್ ಹೇಳಿದ್ದಾರೆ. ಲಷ್ಕರ್​ ಗುಂಪಿನ ಹೊಸ ವಿಭಾಗವಾದ ದ ರೆಸಿಸ್ಟೆನ್ಸ್ ಫೋರ್ಸ್, ಈ ದಾಳಿ ನಡೆಸಿದ ಜವಾಬ್ದಾರಿ ವಹಿಸಿಕೊಂಡಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಮದುವೆ ಮಂಟಪ ತಲುಪಿದ ವರನಿಗೆ ಶಾಕ್ ಮೇಲೆ ಶಾಕ್ !

    ಮನೆಯಲ್ಲೇ ಬಣ್ಣದ ಹಬ್ಬ : ನಟ ಅಕ್ಷಯ್​​ ಕುಮಾರ್

    ನಕ್ಸಲರು-ಕಮ್ಯಾಂಡೋಗಳ ನಡುವೆ ಗುಂಡಿನ ಚಕಮಕಿ ; ಐವರ ಸಾವು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts