More

    ಬೇಕು ಅಂದವರೂ ಅವರೇ … ಬೇಡ ಅಂತಿರುವವರೂ ಅವರೇ!

    ಲಾಕ್​ಡೌನ್​ನಿಂದ ಚಿತ್ರೀಕರಣ ಚಟುವಟಿಕೆಗಳೆಲ್ಲಾ ನಿಂತಿದ್ದಾಗ, ಚಿರಂಜೀವಿ ನೇತೃತ್ವದ ತೆಲುಗು ಕಲಾವಿದರ ನಿಯೋಗವೊಂದು ಮುಖ್ಯಮಂತ್ರಿ ಕೆ.ಸಿ.ಆರ್​ ಅವರನ್ನು ಭೇಟಿ ಮಾಡಿ, ಚಿತ್ರೀಕರಣ ಮುಂದುವರೆಸಬೇಕು ಎಂದು ಕೆಲವು ದಿನಗಳ ಹಿಂದೆ ಅನುಮತಿ ಕೋರಿದ್ದು ಗೊತ್ತೇ ಇದೆ. ಈಗ ಅದೇ ಕಲಾವಿದರು, ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

    ಇದನ್ನೂ ಓದಿ: ಆರ್​ಆರ್​ಆರ್​: ಚಿತ್ರೀಕರಣಕ್ಕೆ ಬರಲ್ಲ ಎಂದ ರಾಮ್​ಚರಣ್​, ತಾರಕ್​

    ಹೌದು, ಕರೊನಾ ಕೇಸ್​ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತೆಲುಗು ನಟ-ನಟಿಯರು ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಹಿಂದೇಟು ಹಾಕುತ್ತಿದ್ದು, ಇಷ್ಟರಲ್ಲಾಗಲೇ ಪ್ರಾರಂಭವಾಗಬೇಕಿದ್ದ ಚಿತ್ರೀಕರಣ ಚಟುವಟಿಕೆಗಳೆಲ್ಲಾ ಅನಿರ್ಧಿಷ್ಟಾವಧಿಗೆ ಮುಂದಕ್ಕೆ ಹೋಗಿದೆ.

    ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರವು ಜುಲೈನಲ್ಲಿ ಪ್ರಾರಂಭವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಹೈದರಾಬಾದ್​ನಲ್ಲಿ ಕರೊನಾ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಿರಂಜೀವಿ, ಚಿತ್ರದ ಚಿತ್ರೀಕರಣವನ್ನು ಪೋಸ್ಟ್​ಪೋನ್​ ಮಾಡಿದ್ದಾರೆ. ಈಗಲೇ ಸುಮ್ಮನೆ ರಿಸ್ಕ್​ ತೆಗೆದುಕೊಳ್ಳುವುದು ಬೇಡ, ಎಲ್ಲವೂ ಒಂದು ತಹಬದಿಗೆ ಬಂದ ನಂತರವಷ್ಟೇ ಚಿತ್ರೀಕರಣ ಶುರು ಮಾಡುವುದಾಗಿ ಹೇಳಿದ್ದಾರೆ.

    ಬರೀ ಚಿರಂಜೀವಿ ಮಾತ್ರವಲ್ಲ, ಮಹೇಶ್​ ಬಾಬು, ಜ್ಯೂನಿಯರ್​ ಎನ್​ಟಿಆರ್​, ರಾಮ್​ಚರಣ್​ ತೇಜ, ವೆಂಕಟೇಶ್​, ಗೋಪಿಚಂದ್​ ಎಲ್ಲರೂ ಚಿತ್ರೀಕರಣಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಹೇಶ್​ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಚಿತ್ರ ಸಹ ಜುಲೈ-ಆಗಸ್ಟ್​ನಲ್ಲಿ ಶುರುವಾಗಬಹುದು ಎಂದುಕೊಂಡಿದ್ದವರಿಗೆ, ಡಿಸೆಂಬರ್​ವರೆಗೂ ಚಿತ್ರೀಕರಣ ಬೇಡ ಎಂದು ಮಹೇಶ್​ ಬಾಬು ಹೇಳಿದ್ದಾರಂತೆ.

    ಇದನ್ನೂ ಓದಿ: ಕಿರುಚಿತ್ರಕ್ಕೆ ಸಂಯುಕ್ತಾ ಆಕ್ಷನ್-ಕಟ್

    ಇನ್ನು ಆರ್​ಆರ್​ಆರ್​ ಚಿತ್ರದ ಬಾಕಿ ಚಿತ್ರೀಕರಣ ಮುಂದಿನ ವಾರದಿಂದ ಪ್ರಾರಂಭವಾಗಬೇಕಿದ್ದು, ಅನಾವಶ್ಯಕವಾಗಿ ರಿಸ್ಕ್​​ ತೆಗೆದುಕೊಳ್ಳುವುದು ಬೇಡ ಎಂದು ರಾಮ್​ಚರಣ್​ ತೇಜ ಮತ್ತು ಜ್ಯೂನಿಯರ್​ ಎನ್​.ಟಿ.ಆರ್​ ಸಲಹೆ ನೀಡಿದ್ದರಿಂದ, ಚಿತ್ರೀಕರಣ ಮುಂದಕ್ಕೆ ಹೋಗಿದೆ. ವೆಂಕಟೇಶ್​ ಅಭಿನಯದ ನಾರಪ್ಪ ಚಿತ್ರದ ಚಿತ್ರೀಕರಣ ಸಹ ಇಷ್ಟರಲ್ಲಿ ಶುರುವಾಗಬೇಕಿದ್ದು, ನಿರ್ಮಾಪಕ ಸುರೇಶ್​ ಬಾಬು ಚಿತ್ರೀಕರಣವನ್ನು ಮುಂದೂಡಿದ್ದಾರೆ.

    ಹಾಗಂತ ಎಲ್ಲರೂ ಇದೇ ರೀತಿ ಚಿತ್ರೀಕರಣ ಮುಂದೂಡುತ್ತಿದ್ದಾರೆ ಎಂದರೆ. ರಚಿತಾ ಅಭಿನಯದ ಮೊದಲ ತೆಲುಗು ಚಿತ್ರ ದಿಸ್​ ಪ್ರಾಪರ್ಟಿ ಬಿಲಾಂಗ್ಸ್​ ಟು ಮೀನಾಕ್ಷಿ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಕಳೆದ ನಾಲ್ಕು ದಿನಗಳಿಂದ ರಚಿತಾ ಹೈದರಾಬಾದ್​ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

    ಮೊಬೈಲ್​ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಸ್ಟಾರ್​ ನಟಿಗೆ ದೋಖಾ: ಸ್ವಲ್ಪದರಲ್ಲೇ ತಪ್ಪಿತು ಅನಾಹುತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts