More

    ಗೊತ್ತಾಗದೆ ಗಡಿ ದಾಟಿದ ಇವರು ಮರಳಿ ದೇಶಕ್ಕೆ ಕಾಲಿಡಲು 5 ವರ್ಷಗಳೇ ಬೇಕಾದವು…

    ಐದು ವರ್ಷಗಳ ಹಿಂದೆ ಆಕಸ್ಮಿಕವಾಗಿ ಓಮನ್​ ಗಡಿಯನ್ನು ದಾಟಿ ದುಬೈ ಸೇರಿದ್ದ ತೆಲಂಗಾಣದ ವ್ಯಕ್ತಿ ಇದೀಗ ​ಭಾರತಕ್ಕೆ ವಾಪಸ್​ ಬರಲು ಸಾಧ್ಯವಾಗಿದೆ.

    ಜಗ್ತಿಯಲ್​ ಜಿಲ್ಲೆಯ ನಾಗುನೂರು ಗ್ರಾಮದ ಜಂಗಿಲಿ ಪೆಡ್ಡುಲು ಅವರು ಆಕಸ್ಮಿಕವಾಗಿ ಗಡಿ ದಾಟಿ ಹೋಗಿದ್ದವರು. ಅಂತೂ ಐದು ವರ್ಷಗಳ ನಂತರ ಇಂದು, ದುಬೈನಿಂದ ಮುಂಬೈಗೆ ಬಂದು, ಅಲ್ಲಿಂದ ಹೈದರಾಬಾದ್​ಗೆ ಮರಳಿದ್ದಾರೆ.

    ಓಮನ್​ ಗಡಿಯಾಚೆ ಒಳ್ಳೆ ಉದ್ಯೋಗ ಅವಕಾಶ ಇದೆ ಎಂದು ಅನೇಕರು ಆಗ ಮಾತನಾಡಿಕೊಳ್ಳುತ್ತಿದ್ದರು. ಅದನ್ನು ನಂಬಿ ಗಡಿ ದಾಟಿದೆ. ಆಗ ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದೇ ಗೊತ್ತಿರಲಿಲ್ಲ ಎಂದು ಜಂಗಿಲಿ ತಿಳಿಸಿದ್ದಾರೆ.

    ತಾನು ತಪ್ಪಾಗಿ ಗಡಿ ದಾಟಿದ ಮೇಲೆ ಪಡಬಾರದ ಕಷ್ಟ ಪಟ್ಟೆ. ಜೈಲು ವಾಸವೂ ಆಯಿತು. ಇನ್ನೆಂದೂ ಇಂಥ ತಪ್ಪುಗಳನ್ನು ಮಾಡುವುದಿಲ್ಲ. ಹಾಗೇ ಉಳಿದವರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ಯಾವ ಕಾರಣಕ್ಕೂ ಈ ಉದ್ಯೋಗದ ರೂಮರ್​ಗಳನ್ನೆಲ್ಲ ನಂಬಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿದೆ ವಿಶ್ವದ ಭಯಾನಕ ಅಣುಬಾಂಬ್‌: ಸ್ಫೋಟದ ಭೀಕರ ದೃಶ್ಯ ಇಲ್ಲಿದೆ…

    ಇದೀಗ ಪೆಡ್ಡುಲು ಅವರು ಭಾರತಕ್ಕೆ ವಾಪಸ್​ ಆಗಲು ದುಬೈನ್​ ಸಾಮಾಜಿಕ ಕಾರ್ಯಕರ್ತರಾಗಿರುವ ಜ್ಯತ ನಾರಾಯಣ್​ ಎಂಬುವರು ಸಹಾಯ ಮಾಡಿದ್ದಾರೆ.

    ದುಬೈನಲ್ಲಿರುವ ಭಾರತೀಯ ರಾಯಭಾರಿಯಿಂದ ತುರ್ತು ಪಾಸ್​ಪೋರ್ಟ್​ ಪಡೆಯಲು, ಹಾಗೇ ಮತ್ತಿತರ ಅಗತ್ಯ ದಾಖಲೆಗಳು, ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯಲು ಅವರೇ ಸಹಕಾರ ನೀಡಿದ್ದಾಗಿ ಪೆಡ್ಡುಲು ತಿಳಿಸಿದ್ದಾರೆ. (ಏಜೆನ್ಸೀಸ್​)

    ಈ 5 ವರ್ಷದ ಬಾಲಕ ಅಮ್ಮನ ಜೀವ ಉಳಿಸಿದ್ದು ‘ಆಟಿಕೆ ಆ್ಯಂಬುಲೆನ್ಸ್​’ನಿಂದ; ಸಮಯಪ್ರಜ್ಞೆಗೆ ಶ್ಲಾಘನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts