More

    ಪ್ರೀತಿಸಿದ ಯುವತಿ ಗಿಡಕ್ಕೆ ನೀರು ಹಾಕುತ್ತಿದ್ದರೆ, ಬಿಲ್ಡಿಂಗ್ ಹಾರಿ ಬಂದ ಯುವಕ ಹೀಗಾ ಮಾಡೋದು?!

    ಜೈಪುರ: ಪಕ್ಕದ ಮನೆಯ ಹುಡುಗಿಯನ್ನು ಪ್ರೀತಿಸುತ್ತಿದ್ದ ಯುವಕನೊಬ್ಬ ಆ ಹುಡುಗಿಗೆ ತಂದಿಟ್ಟ ಗತಿ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರ. ಪ್ರೀತಿ ಹೇಳಿಕೊಂಡು ಒಟ್ಟಿಗೆ ಬದುಕಬೇಕಿದ್ದ ಯುವಕನ ಹಿಂದೆ ಇದೀಗ ಪೊಲೀಸರು ಬೀಳುವಂತಾಗಿದೆ.

    ಇದನ್ನೂ ಓದಿ: ಹೊಲಕ್ಕೆ ಹೋದ ಯುವತಿಯ ಮೇಲೆ ಗ್ಯಾಂಗ್​ ರೇಪ್​! ಗುಪ್ತಾಂಗಕ್ಕೆ ಬಾಟೆಲ್​ ತುಂಬಿದ ಪಾಪಿಗಳು!
    ರಾಜಸ್ಥಾನದ ಭಾರತ್ಪುರ ವಾಸಿಯಾಗಿದ್ದ 19 ವರ್ಷದ ಯುವತಿ ಮನೆಯ ಟೆರೆಸ್​ನಲ್ಲಿದ್ದ ಗಿಡಗಳಿಗೆ ನೀರು ಹಾಕಲೆಂದು ಮಂಗಳವಾರ ಬೆಳಗ್ಗೆ ಟೆರೆಸ್​ ಮೇಲೆ ಬಂದಿದ್ದಾಳೆ. ಆಕೆ ನೀರು ಹಾಕುತ್ತಿರುವುದನ್ನು ಕಂಡು ಪಕ್ಕದ ಮನೆಯ ಟೆರೆಸ್​ ಮೇಲಿದ್ದ ಯುವಕ ಬಿಲ್ಡಿಂಗ್​ನಿಂದ ಹಾರಿ ಬಂದಿದ್ದಾನೆ. ತಕ್ಷಣವೇ ಆಕೆಯ ಮೇಲೆ ಗುಂಡು ಹಾರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಅಂದ ಹಾಗೆ ಆ ಯುವತಿಯನ್ನು ಆತ ಒನ್​ ಸೈಡ್​ ಲವ್​ ಮಾಡುತ್ತಿದ್ದನಂತೆ.

    ಯುವತಿಯ ಕೊಲೆಯಾದಾಗಿನಿಂದ ಆರೋಪಿ ಕಾಣೆಯಾಗಿದ್ದಾನೆ. ಪ್ರೀತಿಸಿದ್ದ ಯುವತಿಯನ್ನು ಕೊಲೆ ಮಾಡಿರುವುದಕ್ಕೆ ಕಾರಣವೇನು ಎನ್ನುವುದು ತಿಳಿದುಬಂದಿಲ್ಲ. ಆರೋಪಿ ಸಿಕ್ಕ ನಂತರ ಇನ್ನಷ್ಟು ವಿಚಾರಣೆ ಹೊರಬೀಳುವ ಸಾಧ್ಯತೆಯಿದೆ. ಸದ್ಯ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

    ತಂದೆ ಪ್ರಾಂಶುಪಾಲ, ತಾಯಿ ಗಣಿತದಲ್ಲಿ ಗೋಲ್ಡ್​ ಮೆಡಲಿಸ್ಟ್: ಆದ್ರೂ ಹೆತ್ತಮಕ್ಕಳ ಬಲಿ ಹಿಂದಿರುವ 3ನೇ ವ್ಯಕ್ತಿ ಯಾರು?

    ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts