More

    ತೆಲಗು ದೇಶಂ ಪಕ್ಷ ಬಿಜೆಪಿಯಲ್ಲಿ ವಿಲೀನವಾಯಿತೇ?

    ಹೈದರಾಬಾದ್: ಆಂಧ್ರಪ್ರದೇಶ ಹಾಗೂ ತೆಲಂಗಾಣದ ಜನಪ್ರಿಯ ತೆಲಗು ದೇಶಂ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಯಿತೇ? ಹೀಗೊಂದು ಸುದ್ದಿ ಇಂದು ಹರಿದಾಡುತ್ತಿದೆ.

    ಡೆಕ್ಕನ್ ಕ್ರಾನಿಕಲ್ ಆಂಗ್ಲ ಪತ್ರಿಕೆ ಪ್ರಕಟಿಸಿರುವ ಈ ವರದಿಯಲ್ಲಿ ವಿಲೀನದ ವಿಚಾರ ಬೆಳಕಿಗೆ ಬಂದಿದೆ. ಎನ್ ಚಂದ್ರಬಾಬು ನಾಯ್ಡು ಅವರಿಂದ ಸ್ಥಾಪನೆಯಾದ ತೆಲಗು ದೇಶಂ ಪಕ್ಷ ಬಿಜೆಪಿಯಲ್ಲಿ ವಿಲೀನವಾಗಲಿದೆ. ಈ ಕುರಿತು ಎಲ್ಲ ಸಿದ್ದತೆಗಳು ಪೂರ್ಣಗೊಂಡಿವೆ. ಇನ್ಮುಂದೆ ಚಂದ್ರಬಾಬು ನಾಯ್ಡು ಅವರು ರಾಷ್ಟ್ರ ರಾಜಕಾರಣದಲ್ಲಿ ಮುಂದುವರೆಯಲಿದ್ದಾರೆ ಎಂಬುದು ಸುದ್ದಿಯಾಗಿದೆ.

    ಈ ಸುದ್ದಿ ಕಂಡು ಇಂದು ತೆಲಗು ದೇಶಂ ಪಕ್ಷದ ಕಾರ್ಯಕರ್ತರು ಕಕ್ಕಾಬಿಕ್ಕಿಯಾಗಿದ್ದಾರೆ. ಸ್ವತಃ ನಾಯಕರೇ ಶಾಕ್​ಗೆ ಒಳಗಾಗಿದ್ದಾರೆ. ಆದರೆ ಪತ್ರಿಕೆಯ ಸುದ್ದಿಯನ್ನು ಪೂರ್ತಿಯಾಗಿ ಓದಿದರೇ ಇದೊಂದು ಏಪ್ರೀಲ್ 1 ರ ಮೂರ್ಖರ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಕಟಿಸಿದ ವರದಿಯಾಗಿದೆ. ಈ ರೀತಿಯಾಗಿ ಓದುಗರನ್ನು ಡೆಕ್ಕನ್ ಕ್ರಾನಿಕಲ್ ಮೂರ್ಖರನ್ನಾಗಿ ಮಾಡಿ ಏಪ್ರೀಲ್​ ಪೂಲ್​ ಆಚರಿಸಿದೆ.

    ಇದನ್ನೂ ಓದಿ: ಸಚಿವ ಈಶ್ವರಪ್ಪ ನಡೆಗೆ ಬಸವರಾಜ ಬೊಮ್ಮಾಯಿ ಅಸಮಾಧಾನ

    ಆದರೆ ಈ ವಿಷಯವನ್ನು ತೆಲಗು ದೇಶಂ ಪಕ್ಷದ ಮುಖಂಡರು ಕಾರ್ಯಕರ್ತರು ಜೋಕ್ ಆಗಿ ತೆಗೆದುಕೊಂಡಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅವರು ಡೆಕ್ಕನ್ ಕ್ರಾನಿಕಲ್ ಪತ್ರಿಕೆ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.

    ಅದರಲ್ಲೂ ಚಂದ್ರಬಾಬು ನಾಯ್ಡು ಅವರ ಮಗ ನಾರಾ ಲೋಕೆಶ್ ಅಂತೂ, ಪತ್ರಿಕೆಯ ಮಾಲಿಕರ ಹಾಗೂ ಸಂಪಾದಕರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಓದುಗರನ್ನು ಮೂರ್ಖರನ್ನಾಗಿ ಮಾಡುತ್ತೇನೆ ಎನ್ನುವರೇ ದೊಡ್ಡ ಮೂರ್ಖರು. ಆ ಪತ್ರಿಕೆ ಸಿಎಂ ಜಗನ್ಮೋಹನ್ ರೆಡ್ಡಿ ಅವರ ಚೇಲಾ. ಇದಕ್ಕೆ ತಮಾಷೆ ಮಾಡಲು ನಮ್ಮ ವಿಷಯವೇ ಬೇಕಾಗಿತ್ತೆ, ಇದು ಅಕ್ಷಮ್ಯ ಎಂದು ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಡೆಕ್ಕನ್ ಕ್ರಾನಿಕಲ್ ಪತ್ರಿಕೆ ಏನೋ ಮಾಡಲು ಹೋಗಿ ಇನ್ನೇನೋ ಮಾಡಿ ಕೊಂಡಿತು ಎಂಬಂತಾಗಿದೆ. (ಏಜೇನ್ಸಿಸ್)

    ಸೈನಿಕನ ಮೃತ ದೇಹಕ್ಕಾಗಿ ಎಂಟು ತಿಂಗಳಿನಿಂದ ನೆಲ ಅಗೆಯುತ್ತಿರುವ ತಂದೆ!

    ಮತಗಟ್ಟೆಯಿಂದಲೇ ರಾಜ್ಯಪಾಲರಿಗೆ ಫೋನ್ ಕರೆ ಮಾಡಿದ ದೀದಿ: ಕಾರಣ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts