More

    ಮತಗಟ್ಟೆಯಿಂದಲೇ ರಾಜ್ಯಪಾಲರಿಗೆ ಫೋನ್ ಕರೆ ಮಾಡಿದ ದೀದಿ: ಕಾರಣ ಏನು?

    ನಂದಿಗ್ರಾಮ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಅಂಗವಾಗಿ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ದೇಶ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ನಂದಿಗ್ರಾಮ ವಿಧಾನಸಭೆಗೂ ಇಂದೇ ಮತದಾನ ನಡೆಯುತ್ತಿದೆ.

    ಇಂದು ಬೆಳಿಗ್ಗೆಯಿಂದ ಕ್ಷೇತ್ರದಲ್ಲೇ ಬೀಡು ಬಿಟ್ಟಿರುವ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು, ಮತಗಟ್ಟೆ ಕೇಂದ್ರದಿಂದಲೇ ನೇರವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

    ರಾಜ್ಯಪಾಲ ಜಗದೀಪ್ ಧನಕರ್ ಅವರಿಗೆ ಫೋನ್ ಕರೆ ಮಾಡಿದ ಅವರು, ನಂದಿಗ್ರಾಮದಲ್ಲಿ ಯಾವ ಕ್ಷಣದಲ್ಲಾದರೂ ಏನಾದರೂ ಆಗಬಹುದು. ಬಿಹಾರ್ ಉತ್ತರ ಪ್ರದೇಶದಿಂದ ಬಿಜೆಪಿ ಗುಂಡಾಗಳು ನಂದಿಗ್ರಾಮಕ್ಕೆ ಬಂದಿದ್ದಾರೆ. ಅವರು ನಮ್ಮ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಸ್ಥಳೀಯರಿಗೆ ಮತದಾನಕ್ಕೆ ತೆರಳಲು ಅವರು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಈ ದೇಶದ ಶಾಲೆಗಳಲ್ಲೇ ಇದೆ ಕಾಂಡೋಮ್​ ವಿತರಣಾ ಮಷಿನ್​! 29 ವರ್ಷಗಳ ಹಿಂದೆಯೇ ಅಳವಡಿಕೆ!

    ನಾನು ಬೆಳಿಗ್ಗೆಯಿಂದ 63 ದೂರುಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದೇನೆ. ಆದರೆ, ಚುನಾವಣಾ ಆಯೋಗ ಇದುವರೆಗೂ ಒಂದೇ ಒಂದು ಕ್ರಮ ತೆಗೆದುಕೊಂಡಿಲ್ಲ ಎಂದು ರಾಜ್ಯಪಾಲರಿಗೆ ಮಮತಾ ದೂರು ನೀಡಿದ್ದಾರೆ. ಮದ್ಯಾಹ್ನ ಮಮತಾ ಅವರು ನಂದಿಗ್ರಾಮದ ಮತಗಟ್ಟೆಯೊಂದಕ್ಕೆ ಭೇಟಿ ನೀಡಿದ್ದಾಗ ಕೆಲವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ.

    ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನ ಮಧ್ಯಾಹ್ನ 3.30 ರವೆರೆಗೆ ಶೇ 71 ರಷ್ಟಾಗಿದೆ.

    ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರ: ಗುಡ್​ ನ್ಯೂಸ್ ಕೊಟ್ಟ ಸಚಿವೆ ನಿರ್ಮಲಾ ಸೀತಾರಾಮನ್

    ಸೈನಿಕನ ಮೃತ ದೇಹಕ್ಕಾಗಿ ಎಂಟು ತಿಂಗಳಿನಿಂದ ನೆಲ ಅಗೆಯುತ್ತಿರುವ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts