More

    ಸಚಿವ ಈಶ್ವರಪ್ಪ ನಡೆಗೆ ಬಸವರಾಜ ಬೊಮ್ಮಾಯಿ ಅಸಮಾಧಾನ

    ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಿನ್ನೆ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು. ಆದರೆ, ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಯಾವುದೇ ವಿಷಯದ ಬಗ್ಗೆ ಅಸಮಾಧಾನ ಇದ್ದರೆ ಅದನ್ನು ಸರ್ಕಾರದ ಒಳಗೇ ಬಗೆಹರಿಸಿಕೊಳ್ಳಬೇಕು. ರಾಜ್ಯಪಾಲರಿಗೆ ದೂರು ನೀಡುವುದು ಸರಿಯಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ. ರಾಜ್ಯಪಾಲರಿಗೆ ದೂರು ನೀಡುವ ಹೊಸ ಪದ್ದತಿಯನ್ನು ಈಶ್ವರಪ್ಪ ಅನುಸರಿಸಿರುವುದು ಆಶ್ಚರ್ಯ ಮೂಡಿಸಿದೆ ಎಂದು ಅವರು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ.

    ಇದನ್ನೂ ಓದಿ: ಕದ್ದ ಹಣ ನಿರೀಕ್ಷೆಗಿಂತ ಹೆಚ್ಚಿದ್ದಿದ್ದನ್ನು ಕಂಡು ಕಳ್ಳನಿಗೇ ಹಾರ್ಟ್​ ಅಟ್ಯಾಕ್​! ಅದೇ ದುಡ್ಡಲ್ಲೇ ಟ್ರೀಟ್ಮೆಂಟ್​!

    ಮುಖ್ಯಮಂತ್ರಿಯವರು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ. ಯಾವುದೇ ಸಮಸ್ಯೆಗಳಿದ್ದರೆ ಸಚಿವ ಸಂಪುಟ ಅಥವಾ ಇತರ ವೇದಿಕೆಗಳಲ್ಲಿ ಚರ್ಚಿಸಲು ದಾರಿಯಿದೆ. ಅದು ಬಿಟ್ಟು ದೂರು ನೀಡುವುದು ಸರಿಯಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.

    ಸಮಸ್ಯೆಗಳಿದ್ದರೆ ಈಶ್ವರಪ್ಪ ಹಾಗೂ ಯಡಿಯೂರಪ್ಪನವರು ಒಟ್ಟಿಗೆ ಕುಳಿತು ಬಗೆಹರಿಸಿಕೊಳ್ಳಬೇಕು. ಮುಖ್ಯಮಂತ್ರಿಯವರು ಹಣಕಾಸು ಸಚಿವರೂ ಆಗಿರುವುದರಿಂದ ಯಾವುದಕ್ಕೆ ಎಷ್ಟು ಹಣಕಾಸು ಬಿಡುಗಡೆ ಮಾಡಬೇಕು ಎಂಬ ಅಧಿಕಾರ ಅವರಿಗಿದೆ. ಈ ವಿಷಯದಲ್ಲಿ ಗೊಂದಲ ಸೃಷ್ಟಿಸುವುದನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದರು. ಅಲ್ಲದೇ ಅನೇಕ ಸಚಿವರು, ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದಾರೆ.

    ಸಿಎಂ ಹಸ್ತಕ್ಷೇಪ ಮಾಡಿಲ್ಲ, ಪ್ರಧಾನಿ, ರಾಜ್ಯಪಾಲರಿಗೆ ದೂರು ನೀಡಿರುವುದು ಸರಿಯಲ್ಲ: ರೇಣುಕಾಚಾರ್ಯ

    ಮುಖ್ಯಮಂತ್ರಿಯನ್ನು ಕಟ್ಟಿಹಾಕಲು ನಡೀತಿದೆ ಕೈ ನಾಯಕರ ಮಹತ್ವದ ಸಭೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts